ಅಫ್ಘಾನಿಸ್ತಾನ; ಸಾರ್ವಜನಿಕವಾಗಿ ನಾಲ್ವರು ವಿಕೃತಕಾಮಿಗಳ “ಕೈ” ಕತ್ತರಿಸಿದ ತಾಲಿಬಾನ್
ಅಮಾನವೀಯ ಶಿಕ್ಷೆ ವಿಧಿಸುವ ಮೂಲಕ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ
Team Udayavani, Jan 18, 2023, 10:58 AM IST
ಕಂದಾಹಾರ್:ದರೋಡೆ ಹಾಗೂ ವಿಕೃತಕಾಮದ ಆರೋಪದಲ್ಲಿ ಬಂಧಿಸಲ್ಪಟ್ಟ ಒಂಬತ್ತು ಮಂದಿ ಆರೋಪಿಗಳಿಗೆ ಅಫ್ಘಾನಿಸ್ತಾನ್ ತಾಲಿಬಾನ್ ಬಹಿರಂಗವಾಗಿ ಶಿಕ್ಷೆ ವಿಧಿಸಿರುವ ಘಟನೆ ಮಂಗಳವಾರ (ಜನವರಿ 17) ನಡೆದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ವೈರಲ್ ವಿಡಿಯೋ: ಚಲಿಸುತ್ತಿರುವ ಸ್ಕೂಟಿಯಲ್ಲೇ ಕಿಸ್ಸಿಂಗ್, ರೊಮ್ಯಾನ್ಸ್ ಮಾಡಿದ ಜೋಡಿ
ಕಂದಹಾರ್ ನ ಅಹ್ಮದ್ ಶಾಹಿ ಸ್ಟೇಡಿಯಂನಲ್ಲಿ ದರೋಡೆ ಮತ್ತು ವಿಕೃತಕಾಮ ಆರೋಪದಲ್ಲಿ ಒಂಬತ್ತು ಮಂದಿಯನ್ನು ಶಿಕ್ಷಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಟೋಲೋ ನ್ಯೂಸ್ ಟ್ವೀಟ್ ಮಾಡಿದೆ.
ಬಹಿರಂಗ ಸ್ಥಳದಲ್ಲಿ ನಾಲ್ಕು ಮಂದಿಯ ಕೈ ಕತ್ತರಿಸಲಾಗಿದ್ದು, ಉಳಿದ ಐದು ಆರೋಪಿಗಳಿಗೆ 35ರಿಂದ 39 ಚಾಟಿ ಏಟು ನೀಡಲಾಗಿದೆ ಎಂದು ಪ್ರಾಂತೀಯ ಗವರ್ನರ್ ವಕ್ತಾರ ಹಾಜಿ ಝೈದ್ ತಿಳಿಸಿರುವುದಾಗಿ ವರದಿ ಹೇಳಿದೆ.
ತಾಲಿಬಾನ್ ಇಂದು ಕಂದಹಾರ್ ನ ಫುಟ್ಬಾಲ್ ಸ್ಟೇಡಿಯಂನಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ನಾಲ್ವರ ಕೈಗಳನ್ನು ಕತ್ತರಿಸಿದೆ. ಅಫ್ಘಾನಿಸ್ತಾನದಲ್ಲೀಗ ತಾಲಿಬಾನ್ ಯಾವುದೇ ವಿಚಾರಣೆ ಇಲ್ಲದೇ ಅಮಾನವೀಯ ಶಿಕ್ಷೆ ವಿಧಿಸುವ ಮೂಲಕ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಬ್ರಿಟನ್ ನಲ್ಲಿರುವ ಅಫ್ಘಾನಿಸ್ತಾನದ ಮಾಜಿ ರಾಜನೀತಿ ಸಲಹೆಗಾರ್ತಿ ಶಬ್ನಮ್ ನಶಿಮಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಸಮುದಾಯದ ಖಂಡನೆಯ ನಡುವೆಯೂ ತಾಲಿಬಾನ್ ಆರೋಪಿಗಳನ್ನು ಸಾರ್ವಜನಿಕವಾಗಿ ಹತ್ಯೆಗೈಯುವುದು, ಕೈ ಕತ್ತರಿಸುವುದು, ಚಾಟಿ ಏಟಿನ ಶಿಕ್ಷೆಯನ್ನು ಮುಂದುವರಿಸಿರುವುದಾಗಿ ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
Hush Money Case: ಪ್ರಮಾಣವಚನಕ್ಕೂ ಮುನ್ನ ಟ್ರಂಪ್ ಗೆ ಶಾಕ್…! ಏನಿದು ಪ್ರಕರಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.