ಟಿಕ್ ಟಾಕ್ ಮತ್ತು ಪಬ್ ಜಿ ಆ್ಯಪ್ ಗಳ ನಿಷೇಧಕ್ಕೆ ಮುಂದಾದ ತಾಲಿಬಾನ್; ಕಾರಣವೇನು ಗೊತ್ತಾ?
Team Udayavani, Sep 20, 2022, 9:45 AM IST
ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಮುಂದಿನ ಮೂರು ತಿಂಗಳೊಳಗೆ ದೇಶದಲ್ಲಿ ಟಿಕ್‌ಟಾಕ್ ಮತ್ತು ಜನಪ್ರಿಯ ಮೊಬೈಲ್ ಗೇಮಿಂಗ್ ಅಪ್ಲಿಕೇಶನ್ ಪಬ್ ಜಿಯನ್ನು ನಿಷೇಧಿಸಲು ಯೋಜಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಟಿಕ್ ಟಾಕ್ ಮತ್ತು ಪಬ್ ಜಿ ಆ್ಯಪ್ ಗಳ ಬಳಕೆಯಿಂದ ಅಫ್ಘಾನ್ ಯುವಕರು “ದಾರಿ ತಪ್ಪುತ್ತಿದ್ದಾರೆ” ಎಂದು ತಾಲಿಬಾನ್ ಹೇಳಿಕೊಂಡಿದೆ.
“ಯುವ ಪೀಳಿಗೆಯು ದಾರಿ ತಪ್ಪುವುದನ್ನು ತಡೆಯಲು ಟಿಕ್‌ಟಾಕ್ ಮತ್ತು ಪಬ್ ಜಿ ಮೇಲಿನ ನಿಷೇಧವು ಅಗತ್ಯ ಎಂದು ತಾಲಿಬಾನ್ ವಕ್ತಾರ ಇನಾಮುಲ್ಲಾ ಸಮಾಂಗನಿ ಅವರು ಈ ಹಿಂದೆ ಹೇಳಿರುವುದನ್ನು ಬಿಬಿಸಿ ವರದಿ ಮಾಡಿದೆ.
ದೂರಸಂಪರ್ಕ ಇಲಾಖೆಯ ಪ್ರಕಟಣೆಯನ್ನು ಉಲ್ಲೇಖಿಸಿ, ಭದ್ರತಾ ವಲಯದ ಪ್ರತಿನಿಧಿಗಳು ಮತ್ತು ಷರಿಯಾ ಕಾನೂನು ಜಾರಿ ಆಡಳಿತದ ಪ್ರತಿನಿಧಿಯೊಂದಿಗಿನ ಸಭೆಯಲ್ಲಿ ನಿಷೇಧವನ್ನು ಘೋಷಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಇದನ್ನೂ ಓದಿ:ಬೇಡಿಕೆಗೆ ಸಿಗದ ಸ್ಪಂದನೆ; ಆತ್ಮಹತ್ಯೆಗೈದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ
ವ್ಯಾಪಕ ಯುವ ಆಫ್ಘನ್ ಬಳಕೆದಾರರನ್ನು ಹೊಂದಿರುವ ಟಿಕ್ ಟಾಕ್ ಮತ್ತು ಪಬ್ ಜಿ ಮೇಲಿನ ನಿಷೇಧವನ್ನು ಮುಂದಿನ 90 ದಿನಗಳಲ್ಲಿ ಜಾರಿಗೊಳಿಸಲಾಗುತ್ತದೆ. ತಾಲಿಬಾನ್ ನೇತೃತ್ವದ ಮಧ್ಯಂತರ ಸರ್ಕಾರವು ನಿಗದಿತ ಸಮಯದೊಳಗೆ ಮಾರ್ಗಸೂಚಿಗಳನ್ನು ಅನುಸರಿಸಲು ದೂರಸಂಪರ್ಕ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ನಿರ್ದೇಶನ ನೀಡಿದೆ.
“ಅನೈತಿಕ ವಿಷಯವನ್ನು” ಪ್ರದರ್ಶಿಸುವ ಕಾರಣಕ್ಕೆ ತಾಲಿಬಾನ್ ಸುಮಾರು 23 ಮಿಲಿಯನ್ ವೆಬ್ ಸೈಟ್ ಗಳನ್ನು ನಿರ್ಬಂಧಿಸಿದ ಬಳಿಕ ಇದೀಗ ಟಿಕ್ ಟಾಕ್ ಮತ್ತು ಪಬ್ ಜಿ ಗೆ ನಿಷೇಧದ ಬಿಸಿ ತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.