570 ತಾಲಿಬಾನಿಗರ ಹತ್ಯೆ
Team Udayavani, Aug 9, 2021, 6:40 AM IST
ಕಾಬೂಲ್: ತಾಲಿಬಾನ್ ಉಪಟಳ ಹೆಚ್ಚುತ್ತಿರುವಂತೆಯೇ ಅಮೆರಿಕ ಬೆಂಬಲಿತ ಅಫ್ಘಾನ್ ಸೇನಾ ಪಡೆಯು ತನ್ನ ಹೋರಾಟ ತೀವ್ರಗೊಳಿಸಿದ್ದು, ಕೇವಲ 24 ಗಂಟೆಗಳಲ್ಲಿ 570ರಷ್ಟು ಉಗ್ರರನ್ನು ಹೊಡೆದುರುಳಿಸಿದೆ. ಹೀಗೆಂದು ಸ್ವತಃ ಅಫ್ಘಾನ್‌ರಕ್ಷಣಾ ಸಚಿವಾಲಯವೇ ತಿಳಿಸಿದೆ.
ಅಮೆರಿಕದ ವಾಯುಪಡೆಯ ನೆರವಿನ ಮೂಲಕ ಶನಿವಾರ ಸೇನಾಪಡೆಯು ದೇಶಾದ್ಯಂತ ತಾಲಿಬಾನ್ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ನಂಗರ್ಹಾರ್, ಲಖ್‌ಮನ್, ಪಕ್ತಿಕಾ, ಪಕ್ತಿಯಾ, ಕಂದಹಾರ್, ಉರುಜಾYನ್, ಹೆರಾತ್ ಸೇರಿದಂತೆ ಹಲವು ಪ್ರದೇಶಗಳ ಮೇಲೆ ನಡೆದ ದಾಳಿಯಲ್ಲಿ 570 ಉಗ್ರರು ಸಾವಿಗೀಡಾಗಿ, 309 ಮಂದಿ ಗಾಯಗೊಂಡಿದ್ದಾರೆ.
ಶುಕ್ರವಾರವಷ್ಟೇ ಅಫ್ಘಾನ್ ಸೇನಾಪಡೆಯು 30 ಪಾಕಿಸ್ಥಾನೀಯರು ಸೇರಿದಂತೆ 112 ತಾಲಿಬಾನ್ ಉಗ್ರರನ್ನು ಸದೆಬಡಿದಿರುವುದಾಗಿ ಹೇಳಿಕೊಂಡಿ.
ಎಫ್-16 ಹಾರಾಟ: ಅಮೆರಿಕ ಪಡೆ ಹಿಂದೆ ಸರಿಯುತ್ತಿದ್ದಂತೆ ಅಫ್ಘಾನ್‌ನಾದ್ಯಂತ ಹಿಂಸಾಚಾರಕ್ಕೆ ಮುನ್ನುಡಿ ಬರೆದಿರುವ ತಾಲಿಬಾನ್‌ಗೆ ಪಾಠ ಕಲಿಸಲು ಅಮೆರಿಕ ಆರಂಭಿಸಿದೆ. ಅದರಂತೆ, ಕಾಬೂಲ್‌ನಲ್ಲಿ ಶನಿವಾರ ಹಾಗೂ ರವಿವಾರ ಅಮೆರಿಕದ ಎಫ್-16 ಯುದ್ಧ ವಿಮಾನಗಳು ಹಾರಾಟ ನಡೆಸಿವೆ. ಪೂರ್ವ ಮತ್ತು ದಕ್ಷಿಣ ಅಫ್ಘಾನ್‌ನಲ್ಲಿ ತಾಲಿಬಾನ್ ಉಗ್ರರನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿಯನ್ನೂ ನಡೆಸಲಾಗಿದೆ. ಬಿ-52 ಬಾಂಬರ್‌ಗಳು ಮತ್ತು ಎಸಿ-10 ಸ್ಪೆಕ್ಟರ್ ಗನ್‌ಶಿಪ್‌ಗಳನ್ನು ದಾಳಿಗೆ ಬಳಸಲಾಗಿದೆ. ದಾಳಿಯ ವೇಳೆ ಭಾರೀ ಸಂಖ್ಯೆಯಲ್ಲಿ ಉಗ್ರರು ಸಾವಿಗೀಡಾಗಿದ್ದು, ಹೆಲ್ಮಂಡ್ ಪ್ರಾಂತ್ಯದಲ್ಲಿ ಒಂದು ಹೈಸ್ಕೂಲ್ ಮತ್ತು ಆರೋಗ್ಯ ಕೇಂದ್ರ ಧ್ವಂಸವಾಗಿವೆ.
3 ದಿನಗಳಲ್ಲಿ 4 ಪ್ರಾಂತ್ಯ ತಾಲಿಬಾನ್ ವಶಕ್ಕೆ! :
ದಿನಕ್ಕೊಂದರಂತೆ ಕಳೆದ 3 ದಿನಗಳಲ್ಲಿ 4 ಪ್ರಾಂತೀಯ ರಾಜಧಾನಿಗಳು ತಾಲಿಬಾನ್ ಹಿಡಿತಕ್ಕೆ ಸಿಕ್ಕಿವೆ. ಭಾನುವಾರ ಉಗ್ರರು ಉತ್ತರ ಅಫ್ಘಾನಿಸ್ಥಾನದ ಕುಂಡುಜ್ ಹಾಗೂ ಸಾರ್-ಇ-ಪುಲ್ ಪ್ರಾಂತ್ಯಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಇಲ್ಲಿನ ಗವರ್ನರ್‌ನ ಕಚೇರಿ, ಪೊಲೀಸ್ ಪ್ರಧಾನ ಕಚೇರಿ, ಕಾರಾಗೃಹವೂ ಈಗ ಅವರ ನಿಯಂತ್ರಣಕ್ಕೆ ಬಂದಂತಾಗಿದೆ. ತನ್ನ ವಶದಲ್ಲಿರುವ ನಗರಗಳಲ್ಲಿ ಆಸ್ತಿಪಾಸ್ತಿ ಲೂಟಿ, ಜೈಲಿನಲ್ಲಿರುವ ಕೈದಿಗಳ ಬಿಡುಗಡೆ ಮತ್ತಿತರ ಕುಕೃತ್ಯಗಳನ್ನು ತಾಲಿಬಾನ್ ಮಾಡುತ್ತಿದೆ.
ಯುಎನ್‌ಎಸ್‌ಸಿ ಸದಸ್ಯರ ಖಂಡನೆ :
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಿರುವ ಭಾರತವು ಅಫ್ಘಾನಿಸ್ಥಾನದ ಪರಿಸ್ಥಿತಿ ಕುರಿತು ಕರೆದಿದ್ದ ತುರ್ತು ಸಭೆಯಿಂದಾಗಿ ಅಫ್ಘಾನ್‌ಗೆ ನೆರವಾಗಿದೆ ಎಂದು ಯುಎನ್‌ಎಸ್‌ಸಿ ಹಾಲಿ ಅಧ್ಯಕ್ಷ ಟಿ.ಎಸ್.ತಿರುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಈ ಸಭೆ ನಡೆಸಿದ ಕಾರಣದಿಂದ, ಭದ್ರತಾ ಮಂಡಳಿಯ ಎಲ್ಲ ಸದಸ್ಯ ರಾಷ್ಟ್ರಗಳೂ ಆಫ^ನ್‌ನಲ್ಲಿ ಹಿಂಸಾಚಾರ ಅಂತ್ಯವಾಗಬೇಕು ಎಂದು ಆಗ್ರಹಿಸಿವೆ. ಜತೆಗೆ, ಬಾಹ್ಯ ಜಗತ್ತಿಗೆ ಆಫ್ಘಾನಿಸ್ಥಾನದಲ್ಲಿನ ಸದ್ಯದ ಪರಿಸ್ಥಿತಿಯ ಅರಿವು ಮೂಡುವಂತೆ ಮಾಡಿದೆ ಎಂದು ತಿರುಮೂರ್ತಿ ಹೇಳಿದ್ದಾರೆ. ಭಾರತವು ಯುಎನ್‌ಎಸ್‌ಸಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಮೊದಲೇ ವಾರವೇ ಅಫ್ಘಾನ್‌ನ ಪರಿಸ್ಥಿತಿ ಕುರಿತು ಚರ್ಚೆಗೆ ಸಭೆಯನ್ನು ಮೀಸಲಿರಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.