ತಾಲಿಬಾನ್‌ ರಕ್ತದೋಕುಳಿ 


Team Udayavani, Aug 20, 2021, 7:00 AM IST

ತಾಲಿಬಾನ್‌ ರಕ್ತದೋಕುಳಿ 

ಕಾಬೂಲ್‌: ಅಫ್ಘಾನಿಸ್ಥಾನ ದಲ್ಲಿ ತಾಲಿಬಾನ್‌ ಆಡಳಿತ ಅಸ್ತಿತ್ವಕ್ಕೆ ಬರು ತ್ತಿದ್ದಂತೆಯೇ ನಾಗರಿಕರ ಪ್ರತಿ ರೋಧ ತೀವ್ರಗೊಂಡಿರುವುದು ಉಗ್ರರನ್ನು ಕೆರಳಿಸಿದೆ.

“ಜನರ ಹಕ್ಕುಗಳನ್ನು ಗೌರವಿಸುತ್ತೇವೆ’ ಎಂಬ ಸುಳ್ಳಿನ ಸರಮಾಲೆ ಪೋಣಿಸಿದ್ದ ತಾಲಿಬಾನಿಗರು ಸಾರ್ವಜನಿಕರ ಮೇಲೆ ಗುಂಡಿನ ಮಳೆಗರೆಯುವ ಮೂಲಕ ಅಟ್ಟಹಾಸ ಮೆರೆಯಲಾರಂಭಿಸಿದ್ದಾರೆ.

ಗುರುವಾರ ಅಫ್ಘಾನ್‌ನ ವಿವಿಧ ಪ್ರದೇಶ ಗಳಲ್ಲಿ ಪ್ರತಿಭಟನಕಾರರ ಮೇಲೆ ಉಗ್ರರು ಗುಂಡು ಹಾರಿಸಿ, ಹಲವರನ್ನು ಹತ್ಯೆಗೈಯ್ದು ರಕ್ತ ಪಿಪಾಸುತನ ಮೆರೆದಿದ್ದಾರೆ.

ರಾಜಧಾನಿ ಕಾಬೂಲ್‌ ಸೇರಿದಂತೆ ಹಲವು ನಗರಗಳಲ್ಲಿ ಗುರುವಾರ ಸಾರ್ವ ಜನಿಕರು ಅಫ್ಘಾನ್‌ ಧ್ವಜ ಹಿಡಿದು ಬೀದಿಗಿಳಿದಿದ್ದರು. ಬ್ರಿಟಿಷ ರಿಂದ ಅಫ್ಘಾನಿಸ್ಥಾನವು ಸ್ವಾತಂತ್ರ್ಯ ಪಡೆದ ದಿನದ ಹಿನ್ನೆಲೆಯಲ್ಲಿ ಮಹಿಳೆ ಯರೂ ಸೇರಿದಂತೆ ಕೆಲವು ನಾಗ ರಿಕರು ಕಪ್ಪು, ಕೆಂಪು ಮತ್ತು ಹಸಿರು ಬಣ್ಣದ ರಾಷ್ಟ್ರೀಯ ಧ್ವಜವನ್ನು ಹಿಡಿದು “ನಮ್ಮ ಧ್ವಜ, ನಮ್ಮ ಅಸ್ಮಿತೆ’ ಎಂಬ ಘೋಷಣೆಗಳನ್ನು ಕೂಗುತ್ತಾ ತಾಲಿಬಾನ್‌ ವಿರುದ್ಧ ಪ್ರತಿಭಟನೆ ನಡೆಸಿದರು. ತಾಲಿಬಾನಿಗರು ತಮ್ಮದೇ ಧ್ವಜ ವನ್ನು ಹೊಂದಿರುವಾಗ ನಾಗ ರಿಕರು ಅಫ್ಘಾನ್‌ ಧ್ವಜದೊಂದಿಗೆ ಪ್ರತಿ ಭಟನೆ ನಡೆಸಿದ್ದರಿಂದ ಕ್ರುದ್ಧರಾದ ಉಗ್ರರು, ಗುಂಡಿನ ಮಳೆಗರೆದರು. ಹಲವರು ಕೊನೆಯುಸಿರೆಳೆದಿದ್ದು, ಮೃತರ ಸಂಖ್ಯೆ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ.

ನಂಗರ್‌ಹಾರ್‌ ಪ್ರಾಂತ್ಯದಲ್ಲಿ ಪ್ರತಿ ಭಟನಕಾರರೊಬ್ಬರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಮತ್ತು ಅವರನ್ನು ಇತರರು ಆಸ್ಪತ್ರೆಗೆ ಸಾಗಿಸಲು ಯತ್ನಿಸು ತ್ತಿರುವ ವೀಡಿಯೋ ಬಹಿರಂಗವಾಗಿದೆ. ಕುನಾರ್‌ ಪ್ರಾಂತ್ಯ, ಖೋಸ್ಟ್‌ ಪ್ರಾಂತ್ಯದಲ್ಲೂ ಮೆರ ವಣಿಗೆ ನಡೆದಿದ್ದು, ತಾಲಿಬಾನ್‌ 24 ಗಂಟೆಗಳ ಕರ್ಫ್ಯೂ ಘೋಷಿ ಸಿದೆ. ಜಲಾಲಾಬಾದ್‌ನಲ್ಲಿ  ಸ್ಥಳೀಯರು ತಾಲಿಬಾನ್‌ ಧ್ವಜವನ್ನು  ಕೆಳಕ್ಕಿಳಿಸಿ, ಅಫ್ಘಾನ್‌ ಧ್ವಜ ಹಾರಿಸಿದಾಗ ಉಗ್ರರ ಗುಂಡಿಗೆ ಓರ್ವ ಮೃತಪಟ್ಟ.

ಉಗ್ರರ ಕೈಯಲ್ಲಿ ಅಮೆರಿಕದ ಶಸ್ತ್ರಾಸ್ತ್ರಗಳು :

ಅಮೆರಿಕ ಸೇನೆಯ ಶಸ್ತ್ರಸಜ್ಜಿತ 2 ಸಾವಿರ ವಾಹನಗಳು, 40 ವಿಮಾನಗಳು ಹಾಗೂ ಭಾರೀ ಸಂಖ್ಯೆಯ ಶಸ್ತ್ರಾಸ್ತ್ರ ಗಳು ಉಗ್ರರ ವಶ ದಲ್ಲಿವೆ ಎಂದು ಅಮೆರಿಕದ ಅಧಿಕಾರಿಯೊ ಬ್ಬರು ತಿಳಿಸಿದ್ದಾರೆ. ಇದೇ ವೇಳೆ 460 ದಶಲಕ್ಷ ಡಾಲರ್‌ ಮೀಸಲು ನಿಧಿಯು ತಾಲಿಬಾನ್‌ ಆಡಳಿತದ ಕೈಗೆ ಸಿಗದಂತೆ ತಡೆಯೊಡ್ಡಲಾಗುವುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಘೋಷಿಸಿದೆ.

ತಂತಿಬೇಲಿಯಾಚೆ ಮಕ್ಕಳನ್ನು ಎಸೆದ ಅಮ್ಮಂದಿರು! :

ತಾಲಿಬಾನ್‌ನ ಕಪಿಮುಷ್ಟಿಯಿಂದ ತಮ್ಮ ಮಕ್ಕಳನ್ನು ಉಳಿಸುವ ಸಲುವಾಗಿ ಅಫ್ಘಾನ್‌ನ ಅಮ್ಮಂದಿರು ಕಾಬೂಲ್‌ ವಿಮಾನ ನಿಲ್ದಾಣದ ತಂತಿಬೇಲಿಯಿಂದಾಚೆಗೆ ಮಕ್ಕಳನ್ನು ಎಸೆದಿರುವ ಮನಮಿಡಿಯುವ ವೀಡಿಯೋಗಳು ವೈರಲ್‌ ಆಗಿವೆ. ಅಮೆರಿಕದ ಪ್ರಜೆಗಳನ್ನು ಕರೆದೊಯ್ಯಲು ಬಂದಿದ್ದ ವಾಯುಪಡೆ ವಿಮಾನಗಳಲ್ಲಿ ಜನರನ್ನು ತುಂಬಿಸಿಕೊಳ್ಳುವಾಗ ವಿಮಾನ ನಿಲ್ದಾಣದ ಕಾಂಪೌಂಡ್‌ ಗೋಡೆಯನ್ನೇರಿದ ಕೆಲವು ಮಹಿಳೆಯರು ತಮ್ಮ ಕಂದಮ್ಮಗಳನ್ನು ಸೈನಿಕರತ್ತ ನೂಕುತ್ತಾ “ದಯವಿಟ್ಟು ಇವರನ್ನು ಕರೆದುಕೊಂಡು ಹೋಗಿ’ ಎಂದು ಗೋಗರೆದಿದ್ದಾರೆ. ಇಂಗ್ಲೆಂಡ್‌ನ‌ ಸೈನಿಕರಿಗೂ ಇದೇ ಅನುಭವವಾಗಿದೆ.

ಎಸೆಯುವ ವೇಳೆ ಕೆಲವು ಮಕ್ಕಳು ರೇಜರ್‌ ತಂತಿ ಬೇಲಿಗೆ ಸಿಲುಕಿದ್ದು, ಯುಕೆ ಸೈನಿಕರೇ ಅವರನ್ನು ಬೇಲಿಯಿಂದ ಬಿಡಿಸಿಕೊಂಡು ಆಲಂಗಿಸಿಕೊಂಡಾಗ ಎಲ್ಲರ ಕಣ್ಣಾಲಿಗಳೂ ಒದ್ದೆಯಾಗಿದ್ದವು.

ತಾಲಿಬಾನ್‌ಗೆ ಪಾಕ್‌ ಉಗ್ರರ ತರಬೇತಿ! :

ತಲೆಮರೆಸಿಕೊಂಡಿದ್ದ ತಾಲಿಬಾನಿಗರಿಗೆ ಏಕಾಏಕಿ ಇಡೀ ದೇಶವನ್ನೇ ಕೈವಶ ಮಾಡಿಕೊಳ್ಳುವಷ್ಟು ಶಕ್ತಿ, ಸಾಮರ್ಥ್ಯ ಬಂದಿದ್ದು ಎಲ್ಲಿಂದ ಎಂಬ ಪ್ರಶ್ನೆಗೆ ಗುಪ್ತಚರ ವರದಿಯು ಉತ್ತರ ನೀಡಿದೆ. ಇದರ ಹಿಂದೆಯೂ ಕೆಲಸ ಮಾಡಿದ್ದು ಕುತಂತ್ರಿ ಪಾಕಿಸ್ಥಾನ ಎಂದು ಈ ವರದಿ ಹೇಳಿದೆ.

ಪಾಕ್‌ ಮೂಲದ ಜೈಶ್‌, ಲಷ್ಕರ್‌ ಉಗ್ರ ಸಂಘಟನೆಗಳು ತಮ್ಮ ಸದಸ್ಯರನ್ನು ಅಫ್ಘಾನ್‌ಗೆ  ಕಳುಹಿಸಿ, ಯುವಕರಿಗೆ ತರಬೇತಿ ನೀಡಿದ್ದವು. ಉಗ್ರ ತರಬೇತಿ ಶಿಬಿರಗಳೂ ಪಾಕ್‌ನಿಂದ ಅಫ್ಘಾನ್‌ಗೆ  ಸ್ಥಳಾಂತರಗೊಂಡಿದ್ದವು. ಉಗ್ರರಾದ ಹಫೀಜ್‌ ಸಯೀದ್‌ ಮತ್ತು ಝಕೀವುರ್‌ ರೆಹಮಾನ್‌ ಲಖೀÌ ಇದಕ್ಕಾಗಿ ದೇಣಿಗೆ ಸಂಗ್ರಹ ನಿರತರಾಗಿದ್ದರು ಎಂದೂ ವರದಿ ಉಲ್ಲೇಖೀಸಿ ಟೈಮ್ಸ್‌ ನೌ ವರದಿ ಮಾಡಿದೆ.

ಉಗ್ರರು ಯಾವತ್ತೂ ಉಗ್ರರೇ. ಅವರನ್ನು ವೈಭವೀಕರಿಸಲೇಬಾರದು. ಭಯೋತ್ಪಾದನೆ ಕೂಡ ಕೊರೊನಾ ಸೋಂಕು ಇದ್ದಂತೆ. ನಾವೆಲ್ಲರೂ ಸುರಕ್ಷಿತವಾಗುವವರೆಗೂ ಯಾರೊಬ್ಬರೂ ಸುರಕ್ಷಿತರಲ್ಲ. ಉಗ್ರ ನಿಗ್ರಹದ ವಿಚಾರದಲ್ಲಿ ಎಲ್ಲ ದೇಶಗಳೂ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲಿ.ಎಸ್‌. ಜೈಶಂಕರ್‌, ವಿದೇಶಾಂಗ ಸಚಿವ (ಯುಎನ್‌ಎಸ್‌ಸಿ ಸಭೆಯಲ್ಲಿ)

ಟಾಪ್ ನ್ಯೂಸ್

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.