ಟೈಮ್ಸ್ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ತಾಲಿಬಾನ್ ಉಗ್ರ ಮುಲ್ಲಾ ಬರಾದಾರ್ ಹೆಸರು!


Team Udayavani, Sep 16, 2021, 12:15 PM IST

ಟೈಮ್ಸ್ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ತಾಲಿಬಾನ್ ಉಗ್ರ ಮುಲ್ಲಾ ಬರಾದಾರ್ ಹೆಸರು!

ವಾಷಿಂಗ್ಟನ್: ಪ್ರಸಿದ್ದ ಟೈಮ್ಸ್ ಪತ್ರಿಕೆ ಬಿಡುಗಡೆ ಮಾಡಿದ 2021ರ ನೂರು ಪ್ರಭಾವಿ ನಾಯಕರ ಪಟ್ಟಿಯಲ್ಲಿ ತಾಲಿಬಾನ್ ಉಗ್ರ, ಸದ್ಯ ಅಫ್ಘಾನಿಸ್ಥಾನ ಸರ್ಕಾರದ ಉಪ ಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಹೆಸರು ಸೇರ್ಪಡೆಯಾಗಿದೆ.

ಅಫ್ಘಾನಿಸ್ಥಾನದಿಂದ ಅಮೆರಿಕ ಪಡೆಗಳನ್ನು ಹಿಂಪಡೆಯುವ ಬಗ್ಗೆ ಮಾತುಕತೆ ನಡೆಸಿದವರಲ್ಲಿ ಮುಲ್ಲಾ ಬರಾದಾರ್ ಪ್ರಮುಖನಾಗಿದ್ದ. ತಾಲಿಬಾನ್ ನ ದೋಹಾ ಪಡೆಯ ಮುಖ್ಯಸ್ಥನಾಗಿರುವ ಮುಲ್ಲಾ ಬರಾದಾರ್, 2020ರ ಫೆಬ್ರವರಿಯಲ್ಲಿ ನಡೆದ ದೋಹಾ ಶಾಂತಿ ಒಪ್ಪಂದದಲ್ಲಿ ತಾಲಿಬಾನ್ ಪರವಾಗಿ ಭಾಗವಹಿಸಿದ್ದ.

ಯುಎಸ್ ಪಡೆ ಅಫ್ಘಾನಿಸ್ಥಾನದಿಂದ ಹೊರಹೋಗುತ್ತಿದ್ದಂತೆ ತಾಲಿಬಾನ್ ಸಂಘಟನೆಯು ಅಫ್ಘಾನ್ ನ್ನು ವಶಕ್ಕೆ ಪಡೆದಿತ್ತು. ತಾಲಿಬಾನ್ ನ ಪ್ರಮುಖ ನಿರ್ಧಾರಗಳು, ಅಫ್ಘಾನ್ ಆಡಳಿತದ ಹಿಂದಿನ ಸದಸ್ಯರಿಗೆ ಕ್ಷಮಾದಾನ ನೀಡುವ ತೀರ್ಮಾನ, ಕಾಬೂಲ್ ನಲ್ಲಿ ರಕ್ತಪಾತ ನಡೆಸದೇ ಇರುವ ನಿರ್ಧಾರ, ನೆರೆ ದೇಶಗಳಾದ ಪಾಕಿಸ್ಥಾನ ಮತ್ತು ಚೀನಾದೊಂದಿಗೆ ಆಡಳಿತಾತ್ಮಕ ಸಂಪರ್ಕದ ಬಗೆಗಿನ ತೀರ್ಮಾನಗಳಲ್ಲಿ ಮುಲ್ಲಾ ಬರಾದಾರ್ ಪ್ರಮುಖ ಪಾತ್ರ ವಹಿಸಿದ್ದ.

ಇದನ್ನೂ ಓದಿ:‘ಅರಿವಿಲ್ಲದೆ ಐಸಿಸ್‌ ಸೇರಿದೆ’: ಸಂದರ್ಶನದಲ್ಲಿ ಸಂಘಟನೆಯಲ್ಲಿದ್ದ ಶಮೀಮಾ ಪ್ರತಿಪಾದನೆ

2010ರಲ್ಲಿ ಪಾಕಿಸ್ಥಾನ ಪಡೆಗಳಿಂದ ಬಂಧಿತನಾಗಿದ್ದ ಮುಲ್ಲಾ ಬರಾದಾರ್ 2018ರವರೆಗೆ ಪಾಕ್ ನಲ್ಲಿ ಸೆರೆಮನೆ ವಾಸ ಅನುಭವಿಸಿದ್ದ. ಅಫ್ಘಾನ್ ನಿಂದ ಯುಎಸ್ ಪಡೆ ತೊರೆಯುವ ಸಾಧ್ಯತೆಗಳು ಗೋಚರವಾಗುತ್ತಿದ್ದಂತೆ ಬಿಡುಗಡೆಯಾಗಿದ್ದ ಬರಾದಾರ್ ದೋಹಾಗೆ ತೆರಳಿದ್ದ.

ತಾಲಿಬಾನ್ ಉಗ್ರ ಸಂಘಟನೆಯ ಸಹ ಸಂಸ್ಥಾಪಕನೂ ಆಗಿರುವ ಮುಲ್ಲಾ ಬರಾದಾರ್, ಅಮೆರಿಕದೊಂದಿಗೆ ಮಾತುಕತೆ ನಡೆಸುವಲ್ಲೂ ಪ್ರಮುಖ ಪಾತ್ರ ವಹಿಸಿದ್ದ. ಅಫ್ಘಾನ್ ನಲ್ಲಿನ ನೂತನ ತಾಲಿಬಾನ್ ಸರ್ಕಾರದಲ್ಲಿ ಮುಲ್ಲಾ ಬರಾದಾರ್ ಅವರೇ ಪ್ರಧಾನಿಯಾಗುತ್ತಾರೆ ಎನ್ನಲಾಗಿತ್ತು. ಆದರೆ ಮುಲ್ಲಾ ಬರಾದಾರ್ ಗೆ ಉಪ ಪ್ರಧಾನಿ ಸ್ಥಾನ ನೀಡಲಾಗಿದೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

KSD-

Kasaragodu: ಆದೂರು ಶ್ರೀಭಗವತಿ ದೈವಸ್ಥಾನ: 351 ವರ್ಷ ಬಳಿಕ ಪೆರುಂಕಳಿಯಾಟ ಸಂಭ್ರಮ

Police

Kodagu: ಬ್ಯಾಂಕ್‌ ಅಧಿಕಾರಿಗಳು, ಜುವೆಲರಿ ಮಾಲಕರ ಜೊತೆ ಎಸ್‌ಪಿ ಸಭೆ

cOurt

Mangaluru: ಪೋಕ್ಸೋ ಪ್ರಕರಣದ ಆರೋಪಿ ದೋಷಮುಕ್ತ

ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ

ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ

MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣMLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ

MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ

ಸಮಾಜಘಾತಕ ಶಕ್ತಿಗಳ ವಿರುದ್ಧ ಗಂಭೀರ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ

ಸಮಾಜಘಾತಕ ಶಕ್ತಿಗಳ ವಿರುದ್ಧ ಗಂಭೀರ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vivek Ramaswamy leaves Trump administration

US: ಟ್ರಂಪ್‌ ಸರ್ಕಾರದ ಹುದ್ದೆ ತೊರೆದ ವಿವೇಕ್‌ ರಾಮಸ್ವಾಮಿ

resort

Ski resort: ಟರ್ಕಿಯಲ್ಲಿ ಹೋಟೆಲ್‌ಗೆ ಬೆಂಕಿ: 66 ಮಂದಿ ಸಾವು

Trump dances holding a military sword: Video goes viral

US: ಮಿಲಿಟರಿ ಖಡ್ಗ ಹಿಡಿದು ಟ್ರಂಪ್‌ ನೃತ್ಯ: ವಿಡಿಯೋ ವೈರಲ್‌

US New President: ಭಾರತವನ್ನು ಪ್ರತಿನಿಧಿಸುವುದು ದೊಡ್ಡ ಗೌರವ: ಸಚಿವ ಎಸ್.ಜೈಶಂಕರ್

US New President: ಭಾರತವನ್ನು ಪ್ರತಿನಿಧಿಸುವುದು ದೊಡ್ಡ ಗೌರವ: ಸಚಿವ ಎಸ್.ಜೈಶಂಕರ್

1-bbb

Oxfam report; ಬಿಲಿಯನೇರ್‌ಗಳ ಸಂಖ್ಯೆ 2769 ಕ್ಕೇರಿಕೆ

MUST WATCH

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

ಹೊಸ ಸೇರ್ಪಡೆ

Suside-Boy

Manipal: ಪಶ್ಚಿಮ ಬಂಗಾಲದ ವ್ಯಕ್ತಿಯ ಶವ ಪತ್ತೆ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Frud

Udupi: ಷೇರು ಮಾರುಕಟ್ಟೆಯಲ್ಲಿ 21ಲಕ್ಷ ರೂ. ಹೂಡಿಕೆ: ವಂಚನೆ

balaparadha

Kumbale: ಮೊಬೈಲ್‌ ಫೋನ್‌ ಕಳವು: ಆರೋಪಿ ಸೆರೆ

Suside-Boy

Vitla: ಅನಂತಾಡಿ: ಸೀರೆಗೆ ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.