ಪ್ರಾಣಿ ಪ್ರಪಂಚದ ಚಿತ್ರಣವನ್ನೇ ಬದಲಿಸಲಿದೆ ತಾಪಮಾನ


Team Udayavani, Oct 20, 2020, 1:46 AM IST

ಪ್ರಾಣಿ ಪ್ರಪಂಚದ ಚಿತ್ರಣವನ್ನೇ ಬದಲಿಸಲಿದೆ ತಾಪಮಾನ

ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ ಶತಮಾನದಲ್ಲಿ ಆಕ್ಟಿಕ್‌ನಲ್ಲಿನ ಮಂಜುಗಡ್ಡೆಯ ಪದರವು ಕರಗುತ್ತಿದೆ ಎಂಬ ಅಂಶವನ್ನು ನ್ಯಾಷನಲ್‌ ಸ್ನೋ ಆ್ಯಂಡ್‌ ಐಸ್‌ ಡೇಟಾ ಸೆಂಟರ್‌ ಬಹಿರಂಗಪಡಿಸಿದೆ. ಈ ವರ್ಷದ ಸೆಪ್ಟೆಂಬರ್‌ ವೇಳೆಗೆ ಮಂಜಿನ ಗಡ್ಡೆಗಳು 14 ಲಕ್ಷ ಎಕರೆಗಳಷ್ಟು ತಗ್ಗಿವೆ ಎಂದು ವರದಿ ಹೇಳಿದೆ. ಇದೇ ವೇಳೆ, ಹವಾಮಾನ ವೈಪರೀತ್ಯವನ್ನು ತಡೆಯದೇ ಹೋದರೆ ಇನ್ನು ಕೆಲವೇ ವರ್ಷಗಳಲ್ಲಿ ಪ್ರಾಣಿ ಪ್ರಪಂಚ ಹೇಗೆ ವಿನಾಶದತ್ತ ಸಾಗಲಿದೆ ಎಂಬುದನ್ನು ನ್ಯಾಚುರಲಿಸ್ಟ್‌ ಸ್ಟೀವ್‌ ಬ್ಯಾಕ್‌ಶಲ್‌ ಕಲ್ಪಿಸಿಕೊಂಡಿದ್ದಾರೆ. ತಾಪಮಾನ ಹೆಚ್ಚಳ, ನಿರ್ಗಲ್ಲುಗಳ ಕರಗುವಿಕೆ, ಸಮುದ್ರದ ಉಷ್ಣತೆ ಏರಿಕೆಯಿಂದ ಆಕ್ಟಿìಕ್‌ನ ಪ್ರಾಣಿಗಳ ದೇಹಸ್ಥಿತಿಯಲ್ಲಿ ಯಾವ ರೀತಿ ಬದಲಾವಣೆ ಆಗಲಿದೆ ಎಂಬುದನ್ನು ವಿವರಿಸಿದ್ದಾರೆ. ಅವರ ಊಹೆ ಹೀಗಿದೆ:

ಹಿಮ ಕರಡಿಯ ಬಣ್ಣ ಬದಲು
2040ರ ವೇಳೆಗೆ ಆಕ್ಟಿìಕ್‌ನಲ್ಲಿ ಮಂಜು ಕಾಣೆಯಾಗುತ್ತದೆ. ಹಿಮಕರಡಿಗಳು ಒಂದೋ ಹಸಿವಿನಿಂದ ಸಾಯುತ್ತವೆ ಅಥವಾ ದೀರ್ಘ‌ಕಾಲ ಈಜುತ್ತಾ ಕೊನೆಗೊಂದು ದಿನ ಮುಳುಗಿ ಸಾಯುತ್ತವೆ. ಹೇಗೋ ಭೂಪ್ರದೇಶ ತಲುಪುವ ಬೆರಳೆಣಿಕೆಯ ಕರಡಿಗಳು, ತಮ್ಮ ಶುಭ್ರ ಶ್ವೇತವರ್ಣ ಕಳೆದುಕೊಂಡು ಬೂದು ಬಣ್ಣಕ್ಕೆ ತಿರುಗಬಹುದು. ಯಾವುದೋ ತ್ಯಾಜ್ಯದ ರಾಶಿಯಲ್ಲಿ ಆಹಾರ ಹುಡುಕುತ್ತಾ ದಿನಕಳೆಯಬಹುದು.

ಪಫಿನ್‌ಗೂ ತಟ್ಟಲಿದೆ ಬಿಸಿ
ಅಟ್ಲಾಂಟಿಕ್‌ ಸಾಗರದಲ್ಲಿ ಕಂಡುಬರುವ ದೊಡ್ಡ ಕೊಕ್ಕಿನ ಹಕ್ಕಿಯಿದು. ನೀರಿನ ತಾಪಮಾನ ಹೆಚ್ಚುವ ಕಾರಣ ಪಫಿನ್‌ಗಳು ಆಕ್ಟಿìಕ್‌ನ ಉತ್ತರ ಭಾಗದತ್ತ ಸಂಚರಿಸಬಹುದು. ಸಾಮಾನ್ಯವಾಗಿ ಒಂದು ಋತುವಿನಲ್ಲಿ ಈ ಹಕ್ಕಿಗಳ ಕೊಕ್ಕು ಪ್ರಖರ ಬಣ್ಣಕ್ಕೆ ತಿರುಗುತ್ತದೆ. ಆದರೆ ಹವಾಮಾನ ವೈಪರೀತ್ಯ ದಿಂದಾಗಿ ಈ ಪ್ರಕ್ರಿಯೆಯೇ ಸ್ಥಗಿತಗೊಳ್ಳಬಹುದು. ಕೊಕ್ಕು ಮತ್ತು ರೆಕ್ಕೆಗಳ ಬಣ್ಣ ಪೇಲವವಾಗಬಹುದು.

ಕುಗ್ಗಲಿದೆ ಕಡಲ ಸಿಂಹ
ಸೀಲ್‌ ಜಾತಿಯ ಕಡಲ ಪ್ರಾಣಿ ವಾಲಸ್‌ನ ದೇಹದ ಬಣ್ಣ ಕಡುಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ತಿನ್ನಲು ಆಹಾರವಿಲ್ಲದೇ ಇದರ ಗಾತ್ರ ಕುಗ್ಗುತ್ತಾ ಸಾಗುತ್ತದೆ. ಸಾಮಾನ್ಯವಾಗಿ ಮಂಜುಗಡ್ಡೆಯಿಂದ ಹೊರಬರಲು ಸಹಾಯಮಾಡುವಂಥ ಇದರ ಕೋರೆಹಲ್ಲುಗಳಿಗೆ ಕೆಲಸವೇ ಇಲ್ಲದಂತಾಗುತ್ತದೆ. ಇತರೆ ಪ್ರಾಣಿಗಳ ಆಕ್ರಮಣದಿಂದ ತಪ್ಪಿಸಿಕೊಳ್ಳಲಷ್ಟೇ ಈ ಹಲ್ಲುಗಳು ಬಳಕೆಯಾಗಬಹುದು.

ಸಣಕಲಾಗುವ ನರಿ
ಬದಲಾದ ಹೊಸ ಜಗತ್ತಿನಲ್ಲಿ ಬದುಕುಳಿಯುವ ಸಲುವಾಗಿ ನರಿಗಳ ದೇಹದ ಗಾತ್ರವೇ ಬದಲಾಗಲಿದೆ. ಉಷ್ಣತೆ ಹೆಚ್ಚುತ್ತಾ ಹಸಿರು ಹೊದಿಕೆಯ ನೆಲವೂ ಮರುಭೂಮಿ ಯಂತಾಗುವ ಕಾರಣ, ನರಿಗಳ ಕಿವಿಗಳು ದೊಡ್ಡದಾಗುತ್ತಾ, ಕಾಲುಗಳು ಉದ್ದವಾಗುತ್ತಾ ಸಾಗಲಿದೆ. ಹಸಿವಿನಿಂದಾಗಿ ಹೊಟ್ಟೆಯು ಬೆನ್ನಿಗೆ ಅಂಟಲಿದೆ, ದೇಹವು ಸಣಕಲಾಗಲಿದೆ.

ಲೋಳೆ ಮೀನಿಗೆ ಹೆಚ್ಚು ಶಕ್ತಿ
ತಾಪಮಾನ ಏರಿಕೆಯು ಎಲ್ಲ ಪ್ರಾಣಿಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಿದರೆ, ಅಚ್ಚರಿಯೆಂಬಂತೆ ಲೋಳೆ ಮೀನು(ಜೆಲ್ಲಿ ಫಿಶ್‌) ಮಾತ್ರ ಉಷ್ಣತೆ ಹೆಚ್ಚಿರುವ ನೀರಿನಲ್ಲಿ ಹೆಚ್ಚು ಶಕ್ತಿಶಾಲಿಯಾಗಲಿದೆ. ಅವುಗಳ ಗಾತ್ರವೂ ಹಿಗ್ಗಲಿದ್ದು, ಇನ್ನಷ್ಟು ವಿಷಯುಕ್ತವಾಗಲಿವೆ. ಅಂದರೆ, ಈ ಮೀನುಗಳು ಬಾಟಲ್‌ನೋಸ್‌ ಡಾಲ್ಫಿನ್‌ಗಳಂಥ ಬೃಹದಾಕಾರದ ಮೀನುಗಳನ್ನೂ ಬೇಟೆಯಾಡುವಷ್ಟು ಶಕ್ತಿ ಗಳಿಸಲಿವೆ.

ಟಾಪ್ ನ್ಯೂಸ್

KJ-Goerge

Pending: ಸರಕಾರಿ ಕಚೇರಿಗಳ 6 ಸಾವಿರ ಕೋಟಿ ವಿದ್ಯುತ್‌ ಬಿಲ್‌ ಬಾಕಿ: ಸಚಿವ ಕೆ.ಜೆ.ಜಾರ್ಜ್‌

Udupi: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿ: ಯಶ್‌ಪಾಲ್‌

Udupi: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿ: ಯಶ್‌ಪಾಲ್‌

1-prayag

Mahakumbh; ಪ್ರಯಾಗ್‌ರಾಜ್‌ ಸಂಗಮ್‌ ನಿಲ್ದಾಣ ಫೆ.28ರ ವರೆಗೆ ಬಂದ್‌

1-us

ಹಾವು, ಮೊಸಳೆಗಳಿದ್ದ ಹಾದಿಯಲ್ಲಿ ದಿನಕ್ಕೆ 12 ಗಂಟೆ “ಅಕ್ರಮ’ ಪಯಣ

IND VS PAK

Champions Trophy; ಕರಾಚಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಭಾರತದ ತ್ರಿವರ್ಣ ಧ್ವಜವಿಲ್ಲ?

1-adani

Adani ಕಂಪೆನಿಯಿಂದ ಚಿಕ್ಕ ರಾಕೆಟ್‌ ಉತ್ಪಾದನೆ?

Hardik Pandya

IPL ಮೊದಲ ಪಂದ್ಯದಲ್ಲೇ ನಿಷೇಧಕ್ಕೊಳಗಾಗುವ ಹಾರ್ದಿಕ್‌ ಪಾಂಡ್ಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ioo

Ukraine ಯುದ್ಧ ಸ್ಥಗಿತಕ್ಕೆ ಇಂದು ರಷ್ಯಾ-ಅಮೆರಿಕ ಸಭೆ: ಏನಿದು ಮಾತುಕತೆ?

Isaac Newton: ಇನ್ನು 35 ವರ್ಷಗಳ ಬಳಿಕವಿಶ್ವ ಅಂತ್ಯ- ನ್ಯೂಟನ್‌ ಭವಿಷ್ಯ

Isaac Newton: ಇನ್ನು 35 ವರ್ಷಗಳ ಬಳಿಕ ವಿಶ್ವ ಅಂತ್ಯ- ನ್ಯೂಟನ್‌ ಭವಿಷ್ಯ

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Trump-musk

Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

KJ-Goerge

Pending: ಸರಕಾರಿ ಕಚೇರಿಗಳ 6 ಸಾವಿರ ಕೋಟಿ ವಿದ್ಯುತ್‌ ಬಿಲ್‌ ಬಾಕಿ: ಸಚಿವ ಕೆ.ಜೆ.ಜಾರ್ಜ್‌

Udupi: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿ: ಯಶ್‌ಪಾಲ್‌

Udupi: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿ: ಯಶ್‌ಪಾಲ್‌

1-prayag

Mahakumbh; ಪ್ರಯಾಗ್‌ರಾಜ್‌ ಸಂಗಮ್‌ ನಿಲ್ದಾಣ ಫೆ.28ರ ವರೆಗೆ ಬಂದ್‌

1-us

ಹಾವು, ಮೊಸಳೆಗಳಿದ್ದ ಹಾದಿಯಲ್ಲಿ ದಿನಕ್ಕೆ 12 ಗಂಟೆ “ಅಕ್ರಮ’ ಪಯಣ

IND VS PAK

Champions Trophy; ಕರಾಚಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಭಾರತದ ತ್ರಿವರ್ಣ ಧ್ವಜವಿಲ್ಲ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.