ಕರಾಚಿಯಲ್ಲಿ ಜೈಶ್ರೀರಾಂ ಘೋಷ
Team Udayavani, Aug 23, 2018, 6:00 AM IST
ಕರಾಚಿ: ಪಾಕಿಸ್ಥಾನದಲ್ಲಿ ಹಿಂದೂಗಳ ವಿರುದ್ಧ ದೌರ್ಜನ್ಯ ನಡೆಯುತ್ತಿರುವ ವಿಚಾರ ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತದೆ. ಆದರೆ ಪಾಕಿಸ್ತಾನದ ಪ್ರಮುಖ ನಗರ ಕರಾಚಿಯ ಬಸ್ತಿ ಗುರು ಪ್ರದೇಶದಲ್ಲಿರುವ ದೇಗುಲದಲ್ಲಿ ಮುಸ್ಲಿಂ ಮಹಿಳೆ ಅನುಂ ಅಗಾ ವಿದ್ಯಾರ್ಥಿಗಳಿಗೆ ಶಿಕ್ಷಣ, ಆರೋಗ್ಯ ಮತ್ತು ಅಲ್ಪಸಂಖ್ಯಾತ ಸಮುದಾಯದ ಹಕ್ಕುಗಳ ಬಗ್ಗೆ ಅರಿವು, ಶಿಕ್ಷಣ ನೀಡುತ್ತಿದ್ದಾರೆ. ಈ ಕಾಲೋನಿಯಲ್ಲಿ 80-90 ಹಿಂದೂ ಕುಟುಂಬಗಳು ಇವೆ. ತೀರಾ ಇಕ್ಕಟ್ಟಾಗಿರುವ ಈ ಸ್ಥಳ ಭೂಗಳ್ಳರ ಕೆಂಗಣ್ಣಿಗೆ ಕೂಡ ಗುರಿಯಾಗಿದೆ. ಅನುಂ ಅಗಾ ಅವರು “ಸಲಾಂ’ ಎಂದರೆ “ಜೈ ಶ್ರೀರಾಂ’ ಎಂದು ಪ್ರತಿಕ್ರಿಯೆ ನೀಡುತ್ತಾರೆ.
“ನಮ್ಮ ಶಾಲೆ ದೇಗುಲದ ಒಳಗೆ ಇದೆ ಎಂದು ಹೇಳಿದರೆ ಆಶ್ಚರ್ಯಪಡುತ್ತಾರೆ’ ಎನ್ನುತ್ತಾರೆ ಅಗಾ. ಬೇರೆ ಎಲ್ಲಿಯೂ ಸ್ಥಳದ ಅವಕಾಶ ಇಲ್ಲದೇ ಇರುವುದರಿಂದ ಅಲ್ಲಿಯೇ ತರಗತಿ ನಡೆಸುಬೇಕಾಗಿದೆ ಎಂದಿದ್ದಾರೆ. ಇನಿಶಿಯೇಟರ್ ಹ್ಯೂಮನ್ ಡೆವಲಪ್‌ಮೆಂಟ್ ಫೌಂಡೇಷನ್ ಎಂಬ ಸಂಘಟನೆಯ ನಾಯಕ ಆರೀಫ್ ಹಬೀಬ್ ಅನುಂ ಆಗಾರನ್ನು ದೇಗುಲದಲ್ಲಿ ತರಗತಿ ನಡೆಸಲು ನೇಮಿಸಿದ್ದರು. ಅಲ್ಲಿ ಇರುವವರಿಗೆ ತಮ್ಮ ಹಕ್ಕುಗಳ ಅರಿವು ಇಲ್ಲ ಎನ್ನುತ್ತಾರೆ ಅಗಾ.
ದೇಗುಲದ ಆವರಣದಲ್ಲಿ ಹಿಂದೂ ದೇವ ದೇವತೆಗಳ ಕೆತ್ತನೆಗಳೂ ಇವೆ. ನಾಲ್ಕು ವರ್ಷಗಳ ಅವಧಿಯಲ್ಲಿ ಬಸ್ತು ಗುರು ಪ್ರದೇಶದಲ್ಲಿರುವ ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿ ಸ್ಥಳದಿಂದ ತೆರಳುವಂತೆ ಎಚ್ಚರಿಕೆ ನೀಡಿದ ಘಟನೆಗಳೂ ನಡೆದಿವೆ ಎನ್ನುತ್ತಾರೆ ಸಮುದಾಯದ ಮುಖಂಡ ಶಿವ ಧರಣಿ. ಅಲ್ಲಿರುವ ನಿವಾಸಿಗಳು 1960ರ ದಶಕದಲ್ಲಿ ಸಿಂಧ್‌ನಿಂದ ಕರಾಚಿಗೆ ಬಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.