ಚೀನಾ ರಾಯಭಾರಿ ಕಚೇರಿ ಮೇಲೆ ಉಗ್ರ ದಾಳಿ ಯತ್ನ
Team Udayavani, Nov 24, 2018, 6:00 AM IST
ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿರುವ ಚೀನಾ ರಾಯಭಾರ ಕಚೇರಿ ಮೇಲೆ ಆತ್ಮಾಹುತಿ ದಾಳಿ ಯತ್ನವನ್ನು ಶುಕ್ರವಾರ ತಡೆಯಲಾಗಿದೆ. ಘಟನೆಯಲ್ಲಿ ಮೂವರು ಉಗ್ರರು ಹಾಗೂ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಉಗ್ರರು ಬಲೂಚ್ ಲಿಬರೇಶನ್ ಆರ್ಮಿಯವರು ಎಂದು ಘೋಷಿಸಿಕೊಂಡಿದ್ದು, ಚೀನೀಯರು ಬಲೂಚಿಸ್ತಾನದಲ್ಲಿ ಮಧ್ಯಪ್ರವೇಶಿಸು ವುದನ್ನು ಸಹಿಸುವುದಿಲ್ಲ ಎಂದಿದೆ.
ಕ್ಲಿಫ್ಟನ್ ಪ್ರದೇಶದಲ್ಲಿ ರಾಯಭಾರ ಕಚೇರಿಯಿದ್ದು, ಶುಕ್ರವಾರ ಬೆಳಗ್ಗೆ ಇಲ್ಲಿಗೆ ನುಗ್ಗಲು ಮೂವರು ಉಗ್ರರು ಯತ್ನಿಸಿದ್ದರು. ಇವರನ್ನು ಗುಂಡಿಟ್ಟು ಹತ್ಯೆಗೈಯಲಾಗಿದ್ದು, ಭಾರಿ ಅವಘಡ ತಪ್ಪಿದಂತಾಗಿದೆ. ಒಂಬತ್ತು ಗ್ರೆನೇಡ್‌ಗಳು, ಕಲಾಶ್ನಿಕೋವ್ ಬುಲೆಟ್‌ಗಳು, ಮದ್ದುಗುಂಡುಗಳು ಹಾಗೂ ಸ್ಫೋಟಕಗಳನ್ನು ಭದ್ರತಾ ಪಡೆ ವಶ ಪಡಿಸಿಕೊಂಡಿದೆ. ಆಹಾರ, ಔಷಧ ವನ್ನೂ ಉಗ್ರರು ಹೊತ್ತು ತಂದಿದ್ದು, ರಾಯಭಾರ ಕಚೇರಿ ಅಧಿಕಾರಿಗಳನ್ನು ಒತ್ತೆಯಾಳುಗಳನ್ನಾಗಿಸಿಕೊಳ್ಳುವ ಉದ್ದೇಶವನ್ನು ಹೊಂದಿದ್ದರು ಎನ್ನಲಾಗಿದೆ.
ವ್ಯಾಪಾರ ಒಪ್ಪಂದಕ್ಕೆ ಪ್ರತಿಯಾಗಿ ದಾಳಿ: ಚೀನಾಗೆ ಇತ್ತೀಚೆಗೆ ತೆರಳಿದ್ದಾಗ ಮಾಡಿಕೊಂಡ ಒಪ್ಪಂದದ ಪರಿಣಾಮವಾಗಿ ಈ ದಾಳಿ ನಡೆದಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಪಾಕಿಸ್ತಾನದ ಅಭಿವೃದ್ಧಿ ಬೇಕಿಲ್ಲದ ವ್ಯಕ್ತಿಗಳು ನಡೆಸಿದ ಯೋಜಿತ ದಾಳಿ ಇದು ಎಂದಿದ್ದಾರೆ.
ಭದ್ರತೆ ಹೆಚ್ಚಿಸಿ ಎಂದ ಚೀನಾ: ದಾಳಿ ಹಿನ್ನೆಲೆಯಲ್ಲಿ ಚೀನಾದ ಸಿಪಿಇಸಿ ಯೋಜನೆ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಿ ಎಂದು ಪಾಕಿಸ್ತಾನಕ್ಕೆ ಚೀನಾ ಆಗ್ರಹಿಸಿದೆ. ದಾಳಿ ಖಂಡಿಸಿರುವ ಚೀನಾ, ಪಾಕಿಸ್ತಾನ ಸದ್ಯ ತನಿಖೆ ನಡೆಸುತ್ತಿದ್ದು , ಈ ಘಟನೆಯಿಂದ ಕಾರಿಡಾರ್ ಯೋಜನೆಗೆ ಯಾವುದೇ ಬಾಧೆಯಿಲ್ಲ ಎಂದಿದೆ. ಖೈಬರ್ ಪಖು¤ಂಖಾ ಪ್ರದೇಶದಲ್ಲಿ ಚೀನಾ ನಿರ್ಮಿಸುತ್ತಿರುವ ರಸ್ತೆ ಹಾದುಹೋಗಲಿದ್ದು, ಇದಕ್ಕೆ ಬಲೂಚಿ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಉಗ್ರರ ಹಿಮ್ಮೆಟ್ಟಿಸಿದ ಮಹಿಳಾ ಅಧಿಕಾರಿ
ಉಗ್ರರ ದಾಳಿ ವಿಫಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಹಿರಿಯ ಮಹಿಳಾ ಪೊಲೀಸ್ ಅಧಿಕಾರಿ ಸುಹಾಯ್ ಅಜೀಜ್ ತಲ್ಪುರ್! ಶಸ್ತ್ರ ಸಜ್ಜಿತ ಉಗ್ರರು ರಾಯಭಾರ ಕಚೇರಿಗೆ ಉಗ್ರರು ಪ್ರವೇಶಿಸಲು ಯತ್ನಿಸಿದಾಗ ಇವರು ಮಹತ್ವದ ಪಾತ್ರ ವಹಿಸಿ ದಾಳಿಯನ್ನು ತಡೆಯಲು ಯಶಸ್ವಿಯಾದರು. ಉಗ್ರರು ಮುಂಭಾಗದ ಗೇಟ್ ಬಳಿ ಬರುತ್ತಿದ್ದಂತೆಯ ಭದ್ರತಾ ಸಿಬ್ಬಂದಿಯೊಂದಿಗೆ ಗುಂಡಿನ ಚಕಮಕಿ ನಡೆಸಿದ್ದರು. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆಯೇ ಕಟ್ಟಡದ ಬಾಗಿಲನ್ನು ಮುಚ್ಚಿ ಉಗ್ರರು ಒಳನುಗ್ಗಲು ಸಾಧ್ಯವಾಗದಂತೆ ಸಹಾಯ್ ತಡೆದಿದ್ದಾರೆ.
ಸ್ಫೋಟಕ್ಕೆ 32 ಬಲಿ
ಕರಾಚಿಯ ಚೀನಾ ರಾಯಭಾರ ಕಚೇರಿ ಮುಂದೆ ದಾಳಿ ನಡೆದ ಬೆನ್ನಲ್ಲೇ ಪಾಕಿಸ್ತಾನದ ಖೈಬರ್ ಪಖು¤ಂಖ್ವಾ ಮಾರುಕಟ್ಟೆಯಲ್ಲಿ ಆತ್ಮಾಹುತಿ ದಾಳಿಕೋರರು ನಡೆಸಿದ ಪ್ರಬಲ ಸ್ಫೋಟಕ್ಕೆ ಮೂವರು ಪಾಕಿಸ್ತಾನಿ-ಸಿಖ್ಭರು ಸೇರಿದಂತೆ 32 ಮಂದಿ ಬಲಿ¿ಚÞಗಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಶಿಯಾ ಧಾರ್ಮಿಕ ಕೇಂದ್ರದ ಸಮೀಪದಲ್ಲೇ ಇರುವ ಜುಮಾ ಬಜಾರ್‌ನಲ್ಲಿ ಈ ಸ್ಫೋಟ ನಡೆದಿದೆ. ತರಕಾರಿ ಸಾಗಾಟ ಮಾಡಲು ಬಳಸುತ್ತಿದ್ದ ಬೈಕ್‌ನಲ್ಲಿ ಸುಧಾರಿತ ಸ್ಫೋಟಕಗಳನ್ನು ಸ್ಫೋಟಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.