ಮೆದುಳು ತಿನ್ನೋ ಸೂಕ್ಷ್ಮಾಣು ಅಮೀಬಾಕ್ಕೆ ಬಾಲಕ ಸಾವು! ಅಮೆರಿಕಕ್ಕೆ ಮತ್ತೊಂದು ಹೊಡೆತ
ಇದೊಂದು ಅತೀ ಚಿಕ್ಕ ಅಮೀಬಾ, ಮೈಕ್ರೋಸ್ಕೋಪ್ ನಲ್ಲಿ ಕಾಣಬಹುದಾಗಿದ್ದ ಈ ಏಕಕೋಶ ಜೀವಾಣು
Team Udayavani, Sep 29, 2020, 12:05 PM IST
ಹೂಸ್ಟನ್/ವಾಷಿಂಗ್ಟನ್: ಅಮೆರಿಕ ಜನರು ಕೋವಿಡ್ ಗೆ ತತ್ತರಿಸಿಹೋಗಿರುವ ನಡುವೆಯೇ ಆರು ವರ್ಷದ ಬಾಲಕನೊಬ್ಬ ಮೆದುಳನ್ನೇ ತಿನ್ನುವ ಅಮೀಬಾದಿಂದ(ಏಕಕೋಶ ಜೀವಿ) ಸಾವನ್ನಪ್ಪಿರುವ ಘಟನೆ ನಂತರ ಟೆಕ್ಸಾಸ್ ರಾಜ್ಯಪಾಲರು ವಿಪತ್ತನ್ನು ಘೋಷಿಸಿರುವುದಾಗಿ ವರದಿ ತಿಳಿಸಿದೆ. ನೀರಿನ ಮೂಲಕ ಈ ಅಮೀಬಾ ಮನುಷ್ಯನ ದೇಹ ಸೇರುತ್ತದೆ ಎಂದು ವರದಿ ವಿವರಿಸಿದೆ.
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿಯೂ ಮಾರಣಾಂತಿಕ ಅಮೀಬಾಕ್ಕೆ ಬಾಲಕಿಯೊಬ್ಬಳು ಬಲಿಯಾಗಿದ್ದಳು. ಇದೀಗ 8 ವರ್ಷದ ಬಾಲಕ ನಯೆಗ್ಲೇರಿಯಾ ಪೊವ್ಲೇರಿ ಹೆಸರಿನ ಈ ಅಮೀಬಾದಿಂದ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ಇದೊಂದು ಅತೀ ಚಿಕ್ಕ ಅಮೀಬಾ, ಮೈಕ್ರೋಸ್ಕೋಪ್ ನಲ್ಲಿ ಕಾಣಬಹುದಾಗಿದ್ದ ಈ ಏಕಕೋಶ ಜೀವಾಣು ಕೆರೆ, ನದಿ ಅಥವಾ ಈಜು ಕೊಳದಲ್ಲಿನ ನೀರಿನ ಮೂಲಕ ದೇಹವನ್ನು ಪ್ರವೇಶಿಸಿ ಮೆದುಳನ್ನು ತಿನ್ನುತ್ತದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಅಧಿಕಾರ ಇಲ್ಲದಿದ್ದಾಗ ಬೆಂಕಿ ಹಾಕೋದು; ಇದ್ದಾಗ ಭ್ರಷ್ಟಾಚಾರ ಮಾಡೋದು ‘ಕೈ’ ಕೆಲಸ: ಕಟೀಲ್ ಕಿಡಿ
ಮೆದುಳನ್ನು ಹೇಗೆ ಪ್ರವೇಶಿಸುತ್ತೇ?
ಈ ಸೂಕ್ಷ್ಮಾಣು ಅಮೀಬಾ ಮೂಗಿನ ಹೊಳ್ಳೆ ಮೂಲಕ ದೇಹವನ್ನು ಸೇರಿ, ಮೂಗಿನ ಸೂಕ್ಷ್ಮ ದ್ವಾರದ ಮೂಲಕ ಮೆದುಳನ್ನು ಪ್ರವೇಶಿಸುತ್ತದೆ. ಇದರ ಪರಿಣಾಮ ವಿಪರೀತ ತಲೆನೋವು, ವಿಪರೀತ ಜ್ವರ, ಕುತ್ತಿಗೆ ನೋವು, ವಾಂತಿ ಶುರುವಾದ ನಂತರ ತಲೆಸುತ್ತು ಬಂದು ಭ್ರಾಂತಿಗೊಳಗಾಗುತ್ತಾರೆ ಎಂದು ವರದಿ ತಿಳಿಸಿದೆ.
ಇದು ಒಬ್ಬ ಮನುಷ್ಯನಿಂದ ಮತ್ತೊಬ್ಬ ಮನುಷ್ಯನಿಗೆ ಹರಡುವ ರೋಗ ಅಲ್ಲ. ಪರೀಕ್ಷೆಯಲ್ಲಿ ತಿಳಿದು ಬಂದ ಅಂಶದ ಪ್ರಕಾರ, ಬಾಲಕನ ಮನೆಯ ಗಾರ್ಡನ್ ನಲ್ಲಿರುವ ಕೊಳವೆ ನೀರಿನಲ್ಲಿ ಅಮೀಬಾ ಇದ್ದಿರುವುದು ಪತ್ತೆಯಾಗಿತ್ತು ಎಂದು ಲೇಕ್ ಜಾಕ್ಸನ್ ನಗರದ ವಕ್ತಾರ ತಿಳಿಸಿರುವುದಾಗಿ ವರದಿ ಹೇಳಿದೆ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.