ಗುಹೆಬಂದಿ ಬಾಲರಿಗೆ ಆಮ್ಲಜನಕ ಕೊರತೆ
Team Udayavani, Jul 7, 2018, 6:00 AM IST
ಬ್ಯಾಂಕಾಕ್: ಥಾಯ್ಲೆಂಡ್‌ನ ಗುಹೆಯಲ್ಲಿ ಸಿಲುಕಿಕೊಂಡ ಫುಟ್‌ಬಾಲ್ ತಂಡದ 12 ಬಾಲಕರು ಮತ್ತು ಕೋಚ್ ಅವರನ್ನು ಶೀಘ್ರ ರಕ್ಷಿಸಬೇಕಾದ ಅನಿವಾರ್ಯ ಈಗ ಉಂಟಾಗಿದೆ. ಗುಹೆಯಲ್ಲಿ ಆಮ್ಲಜನಕ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಆತಂಕಕಾರಿ ಮಟ್ಟ ತಲುಪಿದೆ. ಆರಂಭದಲ್ಲಿ ನೀರಿನ ಮಟ್ಟ ಇಳಿಯುವವರೆಗೆ, ಅಂದರೆ ಮೂರ್‍ನಾಲ್ಕು ತಿಂಗಳವರೆಗೆ ಅವರನ್ನು ಅಲ್ಲೇ ಉಳಿಸುವ ಬಗ್ಗೆ ಥಾಯ್ಲೆಂಡ್ ಅಧಿಕಾರಿಗಳು ಯೋಚಿ ಸಿದ್ದರು. ಈಗ ಆಮ್ಲ ಜನಕ ಅಪಾಯಕಾರಿ ಮಟ್ಟ ತಲುಪಿದ್ದು, ರಕ್ಷಣೆ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ಮುಳುಗುತಜ್ಞ ಸಾವು
ಗುಹೆಯಲ್ಲಿದ್ದವರಿಗೆ ಆಮ್ಲಜನಕ ಸಿಲಿಂಡರ್ ತಲುಪಿಸಿ ವಾಪಸ್ ಬರುತ್ತಿರು ವಾಗ ಆಮ್ಲಜನಕ ಕೊರತೆಯಾಗಿ ನೌಕಾ ಪಡೆ ಮಾಜಿ ಮುಳುಗುತಜ್ಞ ಸಮನ್ ಕುನನ್ ಸಾವನ್ನಪ್ಪಿದ್ದಾರೆ. ವಾಪಸ್ ಬರುವಾಗ ಸಮನ್ ಬಳಿ ಸಾಕಷ್ಟು ಪ್ರಮಾಣದ ಆಮ್ಲಜನಕ ಇರಲಿಲ್ಲ ಎಂದು ಹೇಳಲಾಗಿದೆ. ಜತೆಗಿದ್ದ ಮುಳುಗು ತಜ್ಞ ಅವರನ್ನು ರಕ್ಷಿಸಲು ಪ್ರಯತ್ನಿಸಿದರಾದರೂ ಫಲ ನೀಡಲಿಲ್ಲ. ಈ ಘಟನೆಯಿಂದಾಗಿ ಬಾಲಕರನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ಸಾಧ್ಯತೆಯ ಬಗ್ಗೆ ಆತಂಕ ಮೂಡಿದೆ. ನೌಕಾಪಡೆ ಸೀಲ್‌ನ ಮುಖ್ಯಸ್ಥ ಅಫಾಕೋರ್ನ್ ಯೂ ಕಾಂಗ್‌ಕೇವ್ ಹೇಳುವಂತೆ, ಗುಹೆಯಲ್ಲಿ ಆಮ್ಲಜನಕವು ಶೇ.15ರ ಮಟ್ಟಕ್ಕೆ ಕುಸಿದಿದ್ದು, ಇದರಿಂದಾಗಿ ಹೈಪಾಕ್ಸಿಯಾದಂತಹ ರೋಗ ಕಾಣಿಸಿಕೊಳ್ಳಬಹುದಾಗಿದೆ.
ಕೇಬಲ್ ಸಂಪರ್ಕಕ್ಕೆ ಪ್ರಯತ್ನ: ಈ ಬಾಲಕರು ತಮ್ಮ ಕುಟುಂಬದವರೊಂದಿಗೆ ಮಾತನಾಡಲು ಮತ್ತು ಹೊರಜಗತ್ತಿಗೆ ಸಂಪರ್ಕ ಸಾಧಿಸಲು ಅನುವಾಗುವುದಕ್ಕಾಗಿ ಒಎಫ್ಸಿ ಕೇಬಲ್ ಸಂಪರ್ಕಿಸಲೂ ತಜ್ಞರು ಪ್ರಯತ್ನ ನಡೆಸಿದ್ದಾರೆ. ಜತೆಗೆ ಕೇಬಲ್ ಮೂಲಕ ಆಕ್ಸಿಜನ್ ಪೂರೈಸುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.
ಮತ್ತೆ ಮಳೆ ಭೀತಿ: ಶನಿವಾರ ಹಾಗೂ ರವಿವಾರ ಮತ್ತೆ ಭಾರೀ ಮಳೆ ಸುರಿಯುವ ಭೀತಿಯಿದ್ದು, ನೀರಿನ ಮಟ್ಟ ಗುಹೆಯಲ್ಲಿ ಏರುವ ಸಾಧ್ಯತೆಯಿದೆ. ಸದ್ಯ ಸೇನೆಯು ಗುಹೆಯಲ್ಲಿನ ನೀರನ್ನು ಪಂಪ್ ಮೂಲಕ ಹೊರಹಾಕುತ್ತಿದೆ. ಆದರೆ ನೀರಿನ ಮಟ್ಟವನ್ನು ಗಮನಾರ್ಹ ಪ್ರಮಾಣದಲ್ಲಿ ಕಡಿಮೆ ಮಾಡಲು ಸಾಧ್ಯವಾಗಿಲ್ಲ.
ರಕ್ಷಣೆ ಸಾಧ್ಯತೆಯೇನು?: ಸಿಲುಕಿಕೊಂಡಿರುವ ಕೆಲವು ಬಾಲಕರಿಗೆ ಈಜಲೂ ತಿಳಿದಿಲ್ಲ. ಅಲ್ಲದೆ ಅವರಿಗೆ ಈಜುವ ಸಲಕರಣೆಗಳನ್ನು ಧರಿಸಲು ಮತ್ತು ಅದನ್ನು ಬಳಸಿ ಈಜಲು ಹೇಳಿಕೊಟ್ಟು ಹೊರಗೆ ಕರೆತರುವುದು ಅತ್ಯಂತ ಕಷ್ಟಕರವಾಗಿದೆ ಮತ್ತು ಇದು ಅವರ ಸಾವು ಬದುಕಿನ ಪ್ರಶ್ನೆಯೂ ಆಗಲಿದೆ. ಈ ಮಧ್ಯೆಯೇ ಗುಹೆಗೆ ಸಮೀಪದ ಪರ್ವತ ಪ್ರದೇಶಗಳಿಂದ ಇರಬಹುದಾದ ಗುಹೆ ಸಂಪರ್ಕದ ಬಗ್ಗೆಯೂ ಹುಡುಕಾಟ ನಡೆಸಲಾಗುತ್ತಿದೆ. ಈವರೆಗೆ ಇದು ಫಲ ನೀಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.