ಬಾಹ್ಯಾಕಾಶ-ಮನುಕುಲದ ನಡುವೆ ಹೊಸ ಇತಿಹಾಸ ಸೃಷ್ಟಿ
Team Udayavani, Jun 1, 2020, 11:44 AM IST
ಶನಿವಾರ ಮಧ್ಯರಾತ್ರಿ ಭಾರತೀಯ ಕಾಲಮಾನ ಸುಮಾರು 12:30ರ ಹೊತ್ತಿಗೆ, ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ “ಫಾಲ್ಕನ್ 9′ ರಾಕೆಟ್‌ನಲ್ಲಿ ರಾಬರ್ಟ್ ಬೆಹ್°ಕೆನ್ ಹಾಗೂ ಡಗ್ಲಾಸ್ ಹರ್ಲೆ ಎಂಬಿಬ್ಬರು ಖಗೋಳ ಯಾತ್ರಿಕರು ಬಾಹ್ಯಾಕಾಶದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದಾರೆ. ಆ ರಾಕೆಟ್ ಬಾಹ್ಯಾಕಾಶಕ್ಕೆ ಆ ವಿಜ್ಞಾನಿಗಳನ್ನು ತಲುಪಿಸಿ ಮತ್ತೆ ಕೆನಡಿ ಬಾಹ್ಯಾಕಾಶಕ್ಕೆ ಹಿಂದಿರುಗುತ್ತದೆ! ಇದೇ ಅದರ ವಿಶೇಷ. ರಾಕೆಟ್ ಮೂಲಕ ಗಗನಯಾತ್ರಿಗಳನ್ನು ನಭಕ್ಕೆ ಡ್ರಾಪ್ ಮಾಡಿ ಬರುವಂಥ ತಂತ್ರಜ್ಞಾನ ನಿರ್ಮಿತವಾಗಿದ್ದು ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಸಾಧನೆ.
ಎಲಾನ್ ಮಸ್ಕ್ ಎಂಬ ಕನಸುಗಾರ
ಮೂಲತಃ ದಕ್ಷಿಣ ಆಫ್ರಿಕಾ ಈ ಉದ್ಯಮಿಗೆ, ಸಾಹಸ ಎನ್ನುವುದು ಒಂದು ಚಟ. ಹೈಸ್ಪೀಡ್ ಸಾರಿಗೆಯಾದ ಹೈಪರ್ ಲೂಪ್ ಕೂಡ ಈತನ ಪರಿಕಲ್ಪನೆಯೇ. 2002ರಲ್ಲಿ ಅವರು ಸ್ಥಾಪಿಸಿದ ಸ್ಪೇಸ್ ಎಕ್ಸ್ ಎಂಬ ಕಂಪನಿ, ಇಂಥದ್ದೊಂದು ಸಾಹಸಕ್ಕೆ ವೇದಿಕೆಯಾಯಿತು. ಇದಕ್ಕೆ ನಾಸಾ ಕೂಡ ಕೈ ಜೋಡಿಸಿತು. ಆದರೆ, ಈ ಪ್ರಯೋಗಗಳಲ್ಲಿ ಅವರು ಅಪಾರ ನಷ್ಟ ಹೊಂದಿದರು. ಇಡೀ ಜಗತ್ತೇ ಅವರನ್ನು ನೋಡಿ ಹುಚ್ಚ ಎಂದಿತು. ಆದರೆ, ಛಲ ಬಿಡದ ಅವರು ಈಗ, ಫಾಲ್ಕನ್ 9 ಎಂಬ ರೀ-ಯೂಸಬಲ್ ರಾಕೆಟ್ ನಿರ್ಮಿಸಿ ಇತಿಹಾಸ ನಿರ್ಮಿಸಿದ್ದಾರೆ.
ಫಾಲ್ಕನ್‌ಗೆ ಪ್ರೇರಣೆ
ನಭಕ್ಕೆ ಚಿಮ್ಮುವ ರಾಕೆಟ್ ಅನ್ನು ತಯಾರಿಸುವುದು ಅಂದ್ರೆ ಅದು ತಮಾಷೆಯಲ್ಲ.ಕೊಂಚ ಏರುಪೇರಾದರೂ ಉಡ್ಡಯನ ಫೇಲ್ಯೂರ್ ಆಗುತ್ತೆ. ಆಗ, ರಾಕೆಟ್‌ಗಾಗಿ ಮಾಡಲಾದ ಖರ್ಚು ನೀರಿನಲ್ಲಿ ಹೋಮ ಮಾಡಿದಂತೆ. ಹಾಗಾಗಿಯೇ, ಇದಕ್ಕೊಂದು ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಾಗಿತ್ತು. ಇದೇ ಆಲೋಚನೆ ಫಾಲ್ಕನ್-9 ಎಂಬ ರಾಕೆಟ್ ನಿರ್ಮಿಸಲು ಸಾಧ್ಯವಾಗಿದ್ದು.
679 ಕೋಟಿ ರೂ.ಫಾಲ್ಕನ್-9 ರಾಕೆಟ್ ನಿರ್ಮಾಣಕ್ಕೆ ಸುರಿದ ಹಣ
468 ಕೋಟಿ ರೂ. ಫಾಲ್ಕನ್-9 ಪ್ರತಿ ಉಡಾವಣೆಗೆ ತಗಲುವ ಖರ್ಚು
39,600 ಕಿ.ಮೀ. ಗಂಟೆಗೆ ಫಾಲ್ಕನ್ -9ರ ಗರಿಷ್ಟ ವೇಗ
2015 ಮೊದಲ ಬಾರಿಗೆ ರಾಕೆಟ್ ಪ್ರಯೋಗ ಯಶಸ್ವಿಯಾಗಿದ್ದು
14 ಫಾಲ್ಕನ್ ರಾಕೆಟ್ ಯಶಸ್ವಿಯಾಗುವ ಮೊದಲು 14 ಬಾರಿ ವಿಫಲವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.