ರಾತ್ರಿಯೂ ಹಗಲಾಗುತ್ತಿದೆ!
Team Udayavani, Nov 24, 2017, 6:15 AM IST
ವಾಷಿಂಗ್ಟನ್: ಹಗಲು ಮತ್ತು ರಾತ್ರಿಯ ಮಧ್ಯೆ ಈಗ ವ್ಯತ್ಯಾಸ ಕಡಿಮೆಯಾಗುತ್ತಿದೆ. ರಾತ್ರಿ ಅವಧಿ ಕ್ಷೀಣಿಸುತ್ತಿದ್ದರೆ, ಹಗಲಿನ ಅವಧಿ ವಿಸ್ತರಿಸುತ್ತಿದೆ. ಇದರಿಂದಾಗಿ ಜನರು, ಪಶು ಪಕ್ಷಿಗಳಿಗೆ ಮಾನಸಿಕ ಒತ್ತಡ ಉಂಟಾಗುತ್ತಿದೆ ಎಂದು ಜರ್ಮನಿಯ ಭೂವಿಜ್ಞಾನ ಸಂಶೋಧನೆ ಸಂಸ್ಥೆಯು ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.
2012 ರಿಂದ 2016ರ ಅವಧಿಯಲ್ಲಿ ವಿವಿಧ ಭೂಭಾಗಗಳ ಚಿತ್ರಣವನ್ನು ಸೆಟಲೈಟ್‌ಗಳಿಂದ ಸಂಗ್ರಹಿಸಿ ವಿಶ್ಲೇಷಿಸಲಾಗಿದ್ದು, ಏಷ್ಯಾ ಮತ್ತು ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಈ ಅವಧಿಯಲ್ಲಿ ರಾತ್ರಿ ದೀಪಗಳು ಹೆಚ್ಚಾಗಿವೆ. ಈ ಭಾಗದ ಭೂಮಿ ಹೆಚ್ಚಿನ ಪ್ರಮಾಣದಲ್ಲಿ ರಾತ್ರಿಯೂ ಪ್ರಕಾಶಮಾನವಾಗಿರುತ್ತದೆ ಎಂದು ವರದಿ ಮಂಡಿಸಿದೆ. ಪ್ರತಿ ವರ್ಷ ಭೂಮಿಯ ಮೇಲೆ ರಾತ್ರಿ ವೇಳೆ ಕೃತಕ ಬೆಳಕಿನ ಪ್ರಮಾಣ ಶೇ.2.2ರಷ್ಟು ಏರಿಕೆಯಾಗುತ್ತಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.
ಇನ್ನೊಂದೆಡೆ ಎಲ್‌ಇಡಿ ಬಳಕೆ ಹೆಚ್ಚುತ್ತಿರುವಂತೆಯೇ ಬೆಳಕಿನ ಪ್ರಖರತೆ ಜಾಸ್ತಿಯಾ ಗಿದೆ. ಹಳೆಯ ವಿಧಾನದ ಬಲ್ಬ್ಗಳಿಗಿಂತ ಹೆಚ್ಚು ಪ್ರಕಾಶಮಾನವಾಗಿರುವ ಎಲ್‌ಇಡಿಗಳನ್ನು ನಗರಗಳಲ್ಲಿ ಬಳಸುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. 100 ವರ್ಷಗಳ ಹಿಂದಿನಿಂದಲೇ ರಾತ್ರಿ ದೀಪ ಬೆಳಗುವ ವಿಧಾನ ಚಾಲ್ತಿಗೆ ಬಂದಿದ್ದು, ಇತ್ತೀಚಿನ ವರ್ಷಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಭೂಮಿಯ ಮೇಲೆ ವಾಸಿಸುತ್ತಿರುವ ಜೀವಿಗಳಿಗೆ ಇದು ಹೊಸ ರೀತಿಯ ಒತ್ತಡವಾಗಿದ್ದು, ಮನುಷ್ಯನನ್ನು ಹೊರತು ಪಡಿಸಿ ಇತರ ಜೀವಿಗಳು ಈ ಒತ್ತಡವನ್ನು ನಿರ್ವಹಿಸಲಾರವು. ಮನುಷ್ಯರಲ್ಲೂ ನಿದ್ರೆ ಕೊರತೆ ಮತ್ತು ಇತರ ಆರೋಗ್ಯ ಸಮಸ್ಯೆಯನ್ನು ಇದು ಹೊಂದಿದೆ ಎಂದು ಅಧ್ಯಯನದಲ್ಲಿ ವಿವರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇಂದು ಜೆಡಿಎಸ್ ಸಭೆ: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಒತ್ತು
Support Price: ಬೆಂಬಲ ಬೆಲೆ ಘೋಷಿಸದಿದ್ರೆ ರೈತ ಸಂಪರ್ಕ ಕೇಂದ್ರಕ್ಕೆ ಬೀಗ: ಆರ್.ಅಶೋಕ್
Puttur: ಅಂತಾರಾಜ್ಯ ಮನೆ ಕಳ್ಳನ ಬಂಧನ ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ
Actor Darshan: ಇಂದು ನಟ ದರ್ಶನ್ ಮೈಸೂರಿಗೆ ಆಗಮನ
Milk Price: ರೈತರಿಂದ ಖರೀದಿಸುವ ಹಾಲಿನ ದರ ಜೂನ್‌ಗೆ ಏರಿಕೆ: ಪಶುಸಂಗೋಪನೆ ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.