ಪಾಕ್ ನೆರವಿಂದಲೇ ಲಾಡೆನ್ ಅಂತ್ಯ
ಅಮೆರಿಕದಲ್ಲಿ ಪಾಕ್ ಪಿಎಂ ಖಾನ್ ಪ್ರತಿಪಾದನೆ
Team Udayavani, Jul 24, 2019, 5:00 AM IST
ವಾಷಿಂಗ್ಟನ್: ಉಗ್ರ ಸಂಘಟನೆ ಅಲ್ -ಖೈದಾ ಸಂಸ್ಥಾಪಕ, ವಿಶ್ವದ ನಂ.1 ಉಗ್ರನಾಗಿದ್ದ ಒಸಾಮಾ ಬಿನ್ ಲಾಡೆನ್‌ನನ್ನು ಕೊಲ್ಲಲು ಅಮೆರಿಕಕ್ಕೆ ಮಾಹಿತಿ ಕೊಟ್ಟದೇ ಪಾಕ್ ಐಎಸ್‌ಐ. ಅದರ ಸಹಾಯ ದಿಂದಲೇ ಅಮೆರಿಕದ ನೌಕಾಪಡೆಯ ಸೀಲ್ ಪಡೆ 2011ರಲ್ಲಿ ಕಾರ್ಯಾಚರಣೆ ನಡೆಸಿ ಆತನನ್ನು ಕೊಂದಿತು ಎಂಬ “ಕುತೂ ಹಲಕಾರಿ’ ಅಂಶವನ್ನು ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಬಹಿರಂಗ ಪಡಿಸಿದ್ದಾರೆ.
“ಫಾಕ್ಸ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಈವರೆಗೆ ಒಸಾಮಾ ಸಾವಿನಲ್ಲಿ ನಮ್ಮ ಪಾತ್ರವಿಲ್ಲ ಎಂದು ಹೇಳಿಕೊಂಡು ಬಂದಿದ್ದ ಪಾಕಿಸ್ಥಾನವು ಈಗ ಉಲ್ಟಾ ಹೊಡೆದಿರುವುದು ಅಚ್ಚರಿ ಮೂಡಿಸಿದೆ. ಇದೇ ವೇಳೆ, ಪಾಕಿಸ್ಥಾನದಲ್ಲಿ ಲಾಡೆನ್‌ನನ್ನು ಕೊಲ್ಲಲು ನೆರವಾದ ಪಾಕಿಸ್ಥಾನದ ವೈದ್ಯ ಶಕೀಲ್ ಅಫ್ರಿದಿ ಬಿಡುಗಡೆಗೆ ಸಿದ್ಧವಿರು ವುದಾಗಿಯೂ ಖಾನ್ ಹೇಳಿದ್ದಾರೆ. ಅಫ್ಘಾನಿಸ್ಥಾನದಲ್ಲಿ 2010ರಲ್ಲಿ ಎಫ್ಬಿಐ ಅಧಿಕಾರಿಗಳು, ಅಮೆರಿಕದ ಸೈನಿಕರತ್ತ ಗುಂಡು ಹಾರಿಸಿದ ಆರೋ ಪಕ್ಕೆ ಗುರಿಯಾಗಿ ಅಮೆರಿಕದ ಜೈಲಲ್ಲಿರುವ ನರ ವಿಜ್ಞಾನಿ ಆಫಿಯಾ ಸಿದ್ಧಿಕಿಯನ್ನು ಬಿಡುಗಡೆ ಮಾಡಿದರೆ ವೈದ್ಯನ ಬಿಡುಗಡೆ ಆಗಲಿದೆ ಎಂದಿದ್ದಾರೆ.
ಭಯೋತ್ಪಾದನೆ ಬಗ್ಗೆ ಚರ್ಚೆ: ಅಧ್ಯಕ್ಷ ಟ್ರಂಪ್ ಜತೆಗಿನ ಮೊದಲ ಭೇಟಿಯಲ್ಲಿ ಇಮ್ರಾನ್ ಖಾನ್ ಭಯೋತ್ಪಾದನೆ, ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಮಾತುಕತೆ ನಡೆಸಿದ್ದಾರೆ. 2015ರ ಬಳಿಕ ಎರಡೂ ದೇಶಗಳ ನಡುವಿನ ಅಧಿಕೃತ ಮಾತುಕತೆ ಇದಾಗಿದೆ. ಇದೇ ವೇಳೆ ಮಾತುಕತೆಯಲ್ಲಿ ಪಾಕಿಸ್ಥಾನಕ್ಕೆ ಸ್ಥಗಿತಗೊಳಿಸಿರುವ ನೆರವನ್ನು ಪುನಃಸ್ಥಾಪಿಸುವ ಬಗ್ಗೆ ಪ್ರಸ್ತಾವವಾಗಿಲ್ಲ. ದ್ವಿಪಕ್ಷೀಯ ವಾಗಿ ಬಾಂಧವ್ಯ ವೃದ್ಧಿಗೆ ಅವಕಾಶ ಇರುವ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುವುದಾಗಿ ಟ್ರಂಪ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.