ಬೆಂಕಿ ಅವಘಡಕ್ಕೆ ಫ್ರಿಡ್ಜ್ ಕಾರಣ!
Team Udayavani, Jun 25, 2017, 3:45 AM IST
ಲಂಡನ್: ಕಳೆದ ವಾರ ಇಡೀ ಲಂಡನ್‌ಗೆ ಲಂಡನ್ ಅನ್ನೇ ಆಘಾತಕ್ಕೆ ನೂಕಿದ್ದ ಅಗ್ನಿ ಅನಾಹುತ ಸಂಭವಿಸಿದ್ದು ಹೇಗೆ ಗೊತ್ತೇ? ರೆಫ್ರಿಜರೇಟರ್‌ನ ಫ್ರೀಜರ್‌ನಿಂದ!
ಅಚ್ಚರಿಯಾದರೂ ಇದು ಸತ್ಯ ಎನ್ನುತ್ತದೆ ಪ್ರಾಥಮಿಕ ತನಿಖಾ ವರದಿ. ಗ್ರೀನ್‌ಫೆಲ್ ಟವರ್‌ನ ಅಪಾರ್ಟ್‌ಮೆಂಟ್‌ನ ಅಡುಗೆ ಮನೆಯಲ್ಲಿದ್ದ ಫ್ರಿಡ್ಜ್ವೊಂದರಲ್ಲಿ ಹತ್ತಿಕೊಂಡ ಬೆಂಕಿಯು 24 ಮಹಡಿಗಳಿಗೆ ವ್ಯಾಪಿಸಿದ ಪರಿಣಾಮ ಕನಿಷ್ಠ 79 ಮಂದಿ ಸಾವಿಗೀಡಾಗಿದ್ದಾರೆ. ದುರಸ್ತಿಗೀಡಾಗಿದ್ದ ಫ್ರಿಡ್ಜ್ನ ಬಳಕೆ ಮುಂದುವರಿಸಿದ್ದೇ ಬೆಂಕಿ ಹತ್ತಿಕೊಳ್ಳಲು ಕಾರಣ ಎಂದು ಲಂಡನ್ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಈ ಫ್ರಿಡ್ಜ್ ಅನ್ನು 20-6ರ ಮಾರ್ಚ್‌ನಿಂದ 2009ರ ಜುಲೈ ಮಧ್ಯೆ ತಯಾರಿಸಲಾಗಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.
ಸಾವಿರಾರು ಮಂದಿಯ ಸ್ಥಳಾಂತರ: ಗ್ರೀನ್‌ಫೆಲ್ ಟವರ್ ದುರಂತದಿಂದ ಎಚ್ಚೆತ್ತಿರುವ ಯುಕೆ ಸರಕಾರ ಶನಿವಾರ ನಾಲ್ಕು ವಸತಿ ಸಂಕೀರ್ಣಗಳ ಸಾವಿರಾರು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ. ಸುರಕ್ಷತಾ ಪರೀಕ್ಷೆಯಲ್ಲಿ ಈ ಸಂಕೀರ್ಣಗಳು ವಿಫಲವಾದ ಹಿನ್ನೆಲೆಯಲ್ಲಿ 650 ಫ್ಲ್ಯಾಟ್‌ಗಳಲ್ಲಿ ನೆಲೆಸಿದ್ದ ಜನರನ್ನು ಸ್ಥಳಾಂತರಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.