ಬ್ರಿಟನ್‌ನಲ್ಲಿ ಕಳವಳಕ್ಕೆ ಕಾರಣವಾದ ಪಿಪಿಇ ಕೊರತೆ
ಸುರಕ್ಷಾ ಸಾಧನಕ್ಕೆ ಅಪಾರ ಬೇಡಿಕೆ
Team Udayavani, Apr 13, 2020, 6:07 PM IST
ಗಂಭೀರ ಲೋಪ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್‌ಕಾಕ್ ಎನ್‌ಎಚ್‌ಎಸ್ ಸಿಬಂದಿ ಅಗತ್ಯಕ್ಕಿಂತ ಹೆಚ್ಚು ಪಿಪಿಇ ಉಪಯೋಗಿಸಬಾರದು ಎಂದು ಹೇಳಿದ ಬಳಿಕ ದೇಶದಲ್ಲಿ ಪಿಪಿಇ ಕೊರತೆ ಇರುವ ವಿಚಾರ ಬೆಳಕಿಗೆ ಬಂದಿದೆ. ಈ ಬಳಿಕ ಕಾಲೇಜು ಸಮೀಕ್ಷೆಯೊಂದನ್ನು ನಡೆಸಿದಾಗ ದೇಶದ ಕೆಲವು ಭಾಗಗಳಲ್ಲಿ ಶೇ.70 ವೈದ್ಯರಿಗೆ ಸಮರ್ಪಕವಾದ ಪಿಪಿಇ ಇಲ್ಲದಿರುವುದು ಬೆಲಕಿಗೆ ಬಂದಿದೆ. ಇದೊಂದು ಗಂಭೀರವಾದ ಲೋಪ. ಶಸ್ತ್ರಾಸ್ತ್ರಗಳನ್ನೇ ನೀಡದೆ ಸೈನಿಕರನ್ನು ಯುದ್ಧ ಭೂಮಿಗೆ ಕಳುಹಿಸಿದಂತೆ ಎಂದಿದ್ದಾರೆ ಸ್ಯೂ ಹಿಲ್.
ಲಂಡನ್ : ಬ್ರಿಟನ್‌ನಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಪರ್ಸನಲ್ ಪ್ರೊಟೆಕ್ಟಿವ್ ಈಕ್ವಿಪ್‌ಮೆಂಟ್ (ಪಿಪಿಇ-ಸುರಕ್ಷಾ ಉಡುಗೆ) ಕೊರತೆ ಎದುರಾಗಿರುವುದು ಭಾರೀ ಕಳವಳಕ್ಕೆ ಕಾರಣವಾಗಿದೆ.
ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬಂದಿ ಈ ಸೋಂಕಿಗೆ ತುತ್ತಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಿಪಿಇಗೆ ಈಗ ಅಪಾರ ಬೇಡಿಕೆಯಿದೆ. ಆದರೆ ಪೂರೈಕೆ ಸಾಕಷ್ಟು ಇಲ್ಲದಿರುವುದರಿಂದ ಅನೇಕ ದೇಶಗಳು ಕಂಗಾಲಾಗಿವೆ. ಬ್ರಿಟನ್ ಕೂಡ ಇದಕ್ಕೆ ಹೊರತಾಗಿಲ್ಲ.
ಬ್ರಿಟನ್‌ನ ಶೇ. 33ರಷ್ಟು ಸರ್ಜನ್‌ಗಳು ತಮಗೆ ಸಮರ್ಪಕವಾದ ಪಿಪಿಇ ಲಭ್ಯವಾಗುತ್ತಿಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಈ ವಿಚಾರ ವ್ಯಾಪಕ ಟೀಕೆಗೂ ಗುರಿಯಾಗಿದೆ. ಕೋವಿಡ್-19 ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುವವರಿಗೆ ಸಮರ್ಪಕ ರಕ್ಷಣಾ ತೊಡುಗೆಗಳು ಇಲ್ಲದಿರುವುದು ನಾಚಿಕೆಗೇಡು ಎಂದು ಇಂಗ್ಲಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಟೀಕಿಸಿದೆ.
ವೈದ್ಯರು ಮತ್ತು ನರ್ಸ್‌ಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ಪೈಕಿ ಅನೇಕರಿಗೆ ಮನೆ, ಸಂಸಾರ ಮಕ್ಕಳು ಮರಿಗಳು ಇವೆ. ಇವರ ಪ್ರಾಣವನ್ನು ಅಪಾಯಕ್ಕೆ ದೂಡುವುದು ಸರಿಯಲ್ಲ. ಸರಕಾರ ಕ್ಷಿಪ್ರವಾಗಿ ಪಿಪಿಇ ಪೂರೈಕೆಗೆ ಮುಂದಾಗಬೇಕೆಂದು ಕಾಲೇಜಿನ ಉಪಾಧ್ಯಕ್ಷ ಸ್ಯೂ ಹಿಲ್ ಹೇಳಿದ್ದಾರೆ.
ಪ್ರತಿಭಟನೆ ಅಗತ್ಯ
ಇದೇ ಸಂದರ್ಭದಲ್ಲಿ ವೈದ್ಯರು ಸರಕಾರವಾಗಿ ಈ ಕೊರತೆಯನ್ನು ಗಂಭೀರವಾಗಿ ಪರಿಗಣಿಸದಿರುವುದನ್ನು ಪ್ರತಿಭಟಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ತಮ್ಮ ಕೊರತೆ ಹಾಗೂ ಅಪಾಯವನ್ನು ಸರಕಾರದ ಗಮನಕ್ಕೆ ತರಲು ಇರುವ ಮಾರ್ಗ ಅದೊಂದೇ ಎಂಬ ಅಭಿಪ್ರಾಯ ಆರೋಗ್ಯ ಕಾರ್ಯಕರ್ತರ ವಲಯದಲ್ಲಿ ನಿರ್ಮಾಣವಾಗುತ್ತಿರುವುದು ಬ್ರಿಟನ್ ಸರಕಾರಕ್ಕೆ ಹೊಸ ತಲೆನೋವಾಗಿ ಪರಿಣಮಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
Cricket: ಐಪಿಎಲ್ ಹರಾಜಿನಲ್ಲಿ 574 ಕ್ರಿಕೆಟಿಗರು
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Tennis: ಏಷ್ಯಾಡ್ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್ ನಿವೃತ್ತಿ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.