ದ ಲೈನ್ ಸೌದಿ ಅರೇಬಿಯಾದ ಕನಸಿನ ನಗರ
Team Udayavani, Jul 31, 2022, 6:30 AM IST
ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅಧಿಕಾರಕ್ಕೇರಿದ ಬಳಿಕ ಸೌದಿ ಅರೇಬಿಯಾದ ಸ್ವರೂಪ, ಜನಜೀವನ ಶೈಲಿ ಬದಲಾಗುತ್ತಿದೆ. ಅದೀಗ ತೀರಾ ಸಾಂಪ್ರದಾಯಿಕತೆಯಿಂದ ಅಭಿವೃದ್ಧಿ ಪಥದತ್ತ ಹೊರಳುತ್ತಿದೆ. 1957ರಿಂದ 2018ರ ವರೆಗೆ ಅಲ್ಲಿ ಮಹಿಳೆಯರಿಗೆ ನಿಷೇಧಿ ಸಲಾಗಿದ್ದ ವಾಹನ ಚಾಲನೆಗೀಗ ಅವಕಾಶ ಸಿಕ್ಕಿದೆ. ಆ ಮೂಲಕ ಸ್ವಾತಂತ್ರ್ಯದ ಗಾಳಿಗೆ ಕಿಟಕಿ ತೆರೆದಂತಾಗಿದೆ.
ದೇಶವನ್ನು ಜಗತ್ತೇ ತಿರುಗಿ ನೋಡುವಂತೆ ಮಾಡಬೇಕು ಎಂಬ ಮಹದಾಸೆ ಸಲ್ಮಾನ್ ಅವರದ್ದು. ಅದಕ್ಕಾಗಿಯೇ Neom (ಇದು ತಾಜುಕ್ ಪ್ರಾಂತ್ಯದಲ್ಲಿ ನಿರ್ಮಾಣವಾಗುತ್ತಿರುವ ಒಂದು ಆಧುನಿಕ ನಗರ) ಎಂಬ ಒಂದು ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಿದ್ದಾರೆ. ದೇಶದ ಅಭಿವೃದ್ಧಿಯನ್ನು ಆಕರ್ಷಕ ರೀತಿಯಲ್ಲಿ ಬಿಂಬಿಸುವ ಪ್ರಯತ್ನ ಅವರದ್ದು. ಇದರಲ್ಲಿರುವ M ಅಕ್ಷರವು ದೊರೆಯ ಹೆಸರಿನ ಮೊದಲಕ್ಷರವೂ ಆಗಿದೆ, ಅರೆಬಿಕ್‌ನ ಭವಿಷ್ಯ ಎಂಬ ಅರ್ಥದ ಮುಷ್ತಾಕ್‌ಬಲ್ ಶಬ್ದದ ಮೊದಲಕ್ಷರವೂ ಆಗಿದೆ.
ಈ ಯೋಜನೆಯ ಒಂದು ಭಾಗವಾಗಿ The Line ಹೆಸರಿನ ಒಂದು ಆಕರ್ಷಕ ಹಾಗೂ ಪರಿಸರಸ್ನೇಹಿ ನಗರ ತಲೆ ಎತ್ತಲಿದೆ. ಸಂಪೂರ್ಣವಾಗಿ ನವೀಕರಿಸಬಹುದಾದ ಇಂಧನವನ್ನು ಆಧರಿಸಿದ ನಗರವಿದು. ಇಲ್ಲಿ ಪಾದಚಾರಿ ಮಾರ್ಗ ಮಾತ್ರ ಇರಲಿದೆ. ವಾಹನ ಗಳಿಗೆ ಅವಕಾಶ ಇಲ್ಲ. ಶುದ್ಧ ಗಾಳಿಗೆ ಕೊರತೆ ಇಲ್ಲ. ಇಲ್ಲಿ 3.80 ಲಕ್ಷ ಮಂದಿಗೆ ಉದ್ಯೋಗವೂ ಸೃಷ್ಟಿಯಾಗಲಿದೆ ಎಂಬುದು ಲೆಕ್ಕಾಚಾರ.
ಈ ನಗರವು 170 ಕಿ.ಮೀ. ಉದ್ದ ಇರಲಿದ್ದು, ಸದ್ಯದ ಅಂದಾಜಿನ ಪ್ರಕಾರ ಇಲ್ಲಿ 9 ಮಿಲಿಯನ್ ಜನರು ಇರಬಹುದಾದ ನಗರವೆನ್ನಲಾಗಿದೆ.
2021ರ ಜ. 10ರಂದು ಯೋಜನೆಗೆ ಚಾಲನೆ ನೀಡಲಾಗಿದ್ದು, ಅಕ್ಟೋಬರ್‌ನಲ್ಲಿ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಮೊದಲ ಹಂತದ ಕಾಮಗಾರಿಯನ್ನು 2030ರಲ್ಲಿ ಪೂರ್ತಿಗೊಳಿಸುವ ಗುರಿ ಇರಿಸಿಕೊಳ್ಳಲಾಗಿದೆ. ಇದರಲ್ಲಿ ಅತಿ ಉದ್ದದ 500 ಮೀಟರ್ ಎತ್ತರದ ಎರಡು ಗಾಜಿನ ಕಟ್ಟಡಗಳಿದ್ದು, ಅವುಗಳ ಮಧ್ಯೆ 200 ಮೀಟರ್ ಅಗಲದ ಪಾದಚಾರಿ ಮಾರ್ಗ ಇರಲಿದೆ. ಇಲ್ಲಿನ ನಿವಾಸಿಗಳ ದಿನಬಳಕೆಯ ಎಲ್ಲ ವಸ್ತುಗಳು 5 ನಿಮಿಷಗಳ ನಡಿಗೆ ದೂರದ ಅಂತರದೊಳಗೆ ಸಿಗಲಿದೆ.
ಭೂಗತವಾಗಿ ಮೂಲಸೌಲಭ್ಯಕ್ಕೊಂದು ಹಾಗೂ ಸಾರಿಗೆ ಉದ್ದೇಶಕೆಕ ಮಾರ್ಗವೊಂದನ್ನು ನಿರ್ಮಿಸಲಾಗುತ್ತಿದೆ. ಕೃತಕ ಬುದ್ಧಿಮತ್ತೆ ವ್ಯವಸ್ಥೆ ಮೂಲಕ ಇಡೀ ನಗರದ ಮೇಲೆ ನಿಗಾ ಇರಿಸಲಾಗುವುದು. ಇದು ವಾಣಿಜ್ಯ ಹಾಗೂ ವಸತಿ ನಗರ ಆಗಿರಲಿದೆ.
ಕನಿಷ್ಠ ಭೂಮಿಯನ್ನು ಬಳಸಿ ಗರಿಷ್ಠ ಮಂದಿಗೆ ನೈಸರ್ಗಿಕವಾದಂಥ ನೈಜ ಪರಿಸರದಲ್ಲಿ ವಸತಿ ಅವಕಾಶ ಕಲ್ಪಿಸಬೇಕೆನ್ನುವುದು ಇದರ ಒಟ್ಟೂ ಉದ್ದೇಶ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.