ಅತ್ಯಂತ ಅಪ್ರಾಮಾಣಿಕರೆಂದರೆ ಪತ್ರಕರ್ತರು: ಟ್ರಂಪ್
Team Udayavani, Jan 23, 2017, 9:57 AM IST
ವಾಷಿಂಗ್ಟನ್: ತಮ್ಮ ಅಧಿಕಾರ ಸ್ವೀಕಾರ ಸಮಾರಂಭದ ಸುದ್ದಿಗಳನ್ನು ಮಾಧ್ಯಮಗಳು ತಪ್ಪಾಗಿ ಬಿತ್ತರಿಸಿವೆ ಎಂದು ಆರೋಪಿಸಿರುವ ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ರಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭೂಮಿಯ ಮೇಲೆ ವಾಸವಿರುವ ಜೀವರಾಶಿಗಳಲ್ಲೇ ಪತ್ರಕರ್ತರು ಅತ್ಯಂತ ಅಪ್ರಾಮಾಣಿಕರು. ನನ್ನ ಪದಗ್ರಹಣ ಸಮಾರಂಭದಲ್ಲಿ 10ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಆದರೆ ಮಾಧ್ಯಮಗಳು ಕೇವಲ ಎರಡೂವರೆ ಲಕ್ಷ ಮಂದಿ ಮಾತ್ರ ಭಾಗವಹಿಸಿದ್ದರು ಎಂದು ಸುದ್ದಿ ಬಿತ್ತರಿಸಿವೆ. ಕಾರ್ಯಕ್ರಮದ ಆವರಣದಲ್ಲಿ ಜನ ಕಿಕ್ಕಿರಿದು ತುಂಬಿದ್ದರು.
ಆದರೂ ಖಾಲಿಯಿದ್ದ ಆವರಣ ಮಾತ್ರ ತೋರಿಸಲಾಗಿದೆ. ಸುಳ್ಳು ವರದಿ ಮಾಡಿರುವ ಮಾಧ್ಯಮಗಳು ಪರಿಣಾಮ ಎದುರಿಸಬೇಕಾಗುತ್ತೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿ (ಸಿಐಎ)ಯ ಮುಖ್ಯ ಕಚೇರಿಯಲ್ಲಿ ಆಯೋಜಿಸಧಿಲಾಧಿಗಿದ್ದ ಕಾರ್ಯಕ್ರಮದಲ್ಲಿ ಟ್ರಂಪ್ ಮಾತನಾಡಿದರು. ಸಿಐಎನೊಂದಿಗೆ ಮನಸ್ತಾಪವಿದೆ ಎಂದು ಮಾಧ್ಯಮಗಳು ಸುದ್ದಿ ಮಾಡಿದ್ದವು.
**
ಟ್ರಂಪ್ ಪ್ರಾರ್ಥನೆಗೆ ಹಿಂದೂ ಸಂತ ಉಪಸ್ಥಿತಿ
ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಮುನ್ನ ನಡೆದ ಪ್ರಾರ್ಥನೆ ವೇಳೆ ಹಿಂದೂ ಸಂತರೊಬ್ಬರು ಭಾಗಿಯಾಗಿದ್ದರು. ಇದೇ ಮೊದಲ ಬಾರಿಗೆ ಅಧ್ಯಕ್ಷರೊಬ್ಬರು ಪ್ರಮಾಣ ಸ್ವೀಕರಿಸುವ ಮುನ್ನ ನಡೆದ ಪ್ರಾರ್ಥನೆಯಲ್ಲಿ ಹಿಂದೂ ಧರ್ಮದ ಸಂತರೊಬ್ಬರಿಗೆ ಅವಕಾಶ ಕಲ್ಪಿಸಲಾಗಿದೆ ಎಂದೇ ಹೇಳಲಾಗಿದೆ. ಲೆಹಾ°ನ್‌ನಲ್ಲಿರುವ ಶ್ರೀ ಶಿವ ವಿಷ್ಣು ದೇಗುಲದ ಪೂಜಾರಿ ನಾರಾಯಣಾಚಾರ್ ಎಲ್ ದಿಗಲಕೋಟ ಅವರು ಪ್ರಾರ್ಥನೆ ಸಲ್ಲಿಸಿದರು. ಕೇವಲ ಹಿಂದೂ ಸ್ವಾಮೀಜಿಯಷ್ಟೇ ಅಲ್ಲದೆ ಸಿಕ್ಖ್ ಧರ್ಮದ ಪ್ರಕಾರವಾಗಿಯೂ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂಪ್ರದಾಯ ಜಾರ್ಜ್ ವಾಷಿಂಗ್ಟನ್ ಅವರ ಕಾಲದಿಂದಲೂ ನಡೆದು ಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.