ಜಗತ್ತಿನ ತಲೆ ತಿನ್ನುತ್ತಿರುವ ನಿಗೂಢ ಶಿಲಾ ಸ್ತಂಭಗಳು

Team Udayavani, Dec 23, 2020, 5:58 AM IST

ಜಗತ್ತಿನ ತಲೆ ತಿನ್ನುತ್ತಿರುವ ನಿಗೂಢ ಶಿಲಾ ಸ್ತಂಭಗಳು

ಕಳೆದ ಕೆಲವು ದಿನಗಳಿಂದ ಜಗದ ವಿವಿಧೆಡೆ ಏಕಶಿಲೆ ಸ್ತಂಭಗಳು ದಿಢೀರಾಗಿ ಕಾಣಿಸಿಕೊಂಡವು ಎಂಬ ಸುದ್ದಿಯನ್ನು ನೀವು ಓದಿರಬಹುದು. ಇವು ಎಲ್ಲಿಂದ ಬಂದವು, ಯಾಕೆ ಬಂದವು ಎನ್ನುವುದು ದೊಡ್ಡ ಚರ್ಚೆಗೆ ಕಾರಣವಾಯಿತು. ಏನಿದು? ಅನ್ಯಗ್ರಹಜೀವಿಗಳ ತರಲೆಯೇ? ಕಲಾವಿದರ ಕೈಚಳಕವೇ? ಯಾರಿಗೂ ತಿಳಿದಿಲ್ಲ… ಉತ್ತರ ಹುಡುಕುವ ಪ್ರಯತ್ನ ಸಾಗಿದೆ.

ಉಟಾಹ್‌: ನಿಗೂಢ ಶಿಲಾಸ್ತಂಭಗಳ ವದಂತಿ ಪರ್ವ ಆರಂಭವಾದದ್ದು ಪಶ್ಚಿಮ ಅಮೆರಿಕದ ಈ ರಾಜ್ಯದಿಂದಲೇ. ಆ ರಾಜ್ಯದ ಮರುಭೂಮಿಯಲ್ಲಿ ಕಂಡುಬಂದ ಲೋಹದ ಶಿಲಾಸ್ತಂಭದ ಚಿತ್ರ ವೈರಲ್‌ ಆಗಿಬಿಟ್ಟಿತು. ಗಮನಾರ್ಹ ಸಂಗತಿಯೆಂದರೆ, ಕೆಲವೇ ದಿನಗಳಲ್ಲಿ ಇದು ಆ ಸ್ಥಳದಿಂದ ಒಂದಿಷ್ಟೂ ಕುರುಹಿಲ್ಲದಂತೆ ಮಾಯವಾಗಿದ್ದು. ಪೊಲೀಸರ ಪ್ರಕಾರ, ಅಮೆರಿಕದಲ್ಲಿ ಮೊದಲಿಂದಲೂ ಲೋಹದ ಸ್ತಂಭಗಳ ಕುರಿತು ಕಟ್ಟುಕಥೆಗಳು ಅಧಿಕವಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಯಾರೋ ಅದನ್ನು ಅಲ್ಲಿ ಸ್ಥಾಪಿಸಿರಬಹುದಂತೆ.

ನೆದರ್‌ಲ್ಯಾಂಡ್ಸ್‌ : ಇದಾದ ಕೆಲವೇ ದಿನಗಳಲ್ಲಿ ಕೀಕನ್‌ಬರ್ಗ್‌ ಸಂರಕ್ಷಿತ ಪ್ರದೇಶದ ಕುರುಚಲು ಭೂಮಿಯಲ್ಲಿಯೂ ನಿಗೂಢ ಲೋಹದ ಶಿಲಾಸ್ತಂಭವೊಂದು ಕಾಣಿಸಿಕೊಂಡಿತ್ತು. “ನಾನು ಹೈಕಿಂಗ್‌ ಮಾಡುತ್ತಿದ್ದ ಸಮಯದಲ್ಲಿ ಇದು ಕಣ್ಣಿಗೆ ಬಿತ್ತು ಹತ್ತಿರ ಹೋಗಿ ನೋಡಿದರೆ, ಅದನ್ನು ಯಾರೋ ತಂದು ಅಲ್ಲಿ ಸ್ಥಾಪಿಸಿದ್ದಾರೆ ಎಂಬ ಒಂದು ಕುರುಹೂ ಸಿಗಲಿಲ್ಲ. ಯಾರೋ ಮೇಲಿಂದಲೇ ತಂದು ನೆಟ್ಟಿದ್ದಾರೆ ಎಂಬಂತೆ ಅದು ಇತ್ತು’ ಎನ್ನುತ್ತಾರೆ ಇದನ್ನು ಮೊದಲು ಗಮನಿಸಿದ ಡಾಂಗ್‌ ಎನ್ನುವ ಚಾರಣಿಗ. ಈಗ ಈ ಶಿಲಾಸ್ತಂಭದ ಜತೆ ಸೆಲ್ಫಿ ತೆಗೆಸಿಕೊಳ್ಳಲು ಜನರು ಮುಗಿಬೀಳುತ್ತಿದ್ದಾರಂತೆ!

ರೊಮೇನಿಯಾ: ರೊಮೇನಿಯಾದ ಬೆಟ್ಟವೊಂದರ ಮೇಲೂ ಲೋಹದ ಶಿಲಾಸ್ತಂಭ ಕಾಣಿಸಿಕೊಂಡಿತು. ಆದರೆ ನೆದರ್‌ಲ್ಯಾಂಡ್ಸ್‌ನಲ್ಲಿ ಕಾಣಿಸಿ ಕೊಂಡದ್ದಕ್ಕಿಂತಲೂ ಇದು ಭಿನ್ನ ವಾಗಿತ್ತು. ಇದನ್ನು ಮೊದಲು ಗಮನಿಸಿದ ಇಬ್ಬರು ಚಾರಣಿಗರು, “”ಯಾವುದೋ ಹಳೆಯ ಲೋಹದ ಸ್ತಂಭವನ್ನು ಯಾರೋ ತರಲೆಗಳು ತಂದಿಟ್ಟಿದ್ದಾರೆ. ನಮ್ಮ ದೇಶದವರಿಗೆ ಸರಿಯಾಗಿ ಕಾಪಿ ಕೂಡ ಮಾಡಲು ಬರುವುದಿಲ್ಲ” ಎಂದು ನಗೆಯಾಡುತ್ತಾರೆ.

ಬ್ರಿಟನ್‌: ಕಾಂಪ್ಟನ್‌ ಬೀಚ್‌ನಲ್ಲಿ ಹಠಾತ್ತನೆ ಕಾಣಿಸಿಕೊಂಡು ಮಿರುಗುವ ಶಿಲಾಸ್ತಂಭವೂ ಜನರನ್ನು ಬಹಳ ಸೆಳೆಯಿತು. ಅನೇಕರು ಇದು ಯಾರೋ ತಮಾಷೆಗಾಗಿ ಮಾಡಿದ್ದು ಎಂದರೆ, ಉಳಿದವರು ಇದು ದೇವರ ನಿಗೂಢ ಸಂದೇಶವಿರಬೇಕು ಎಂದು ಅಚ್ಚರಿ ವ್ಯಕ್ತಪಡಿಸಿದರು. ಉಳಿದವರು, ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಆರಾಮಾಗಿ ಸಾಗರದಲ್ಲಿ ಈಜಾಡುತ್ತಿದ್ದರೆಂದು ಬ್ರಿಟನ್‌ ಮಾಧ್ಯಮಗಳು ವರದಿ ಮಾಡಿದವು.

ಟಾಪ್ ನ್ಯೂಸ್

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-lasike

Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ

Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!

Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!

ಅಮೆರಿಕದಲ್ಲಿ ಶೂಟೌಟ್‌: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ

New York: ಅಮೆರಿಕದಲ್ಲಿ ಶೂಟೌಟ್‌: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ

Moscow: ಕೆಮಿಕಲ್‌ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ

Moscow: ಕೆಮಿಕಲ್‌ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ

Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ

Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.