ರೋಬೋಗಳೇ ಸುದ್ದಿ ಬರೀತವೆ!
Team Udayavani, Jul 8, 2017, 8:30 AM IST
ಲಂಡನ್: ವಿವಿಧ ತಾಂತ್ರಿಕ ಕೆಲಸಗಳಲ್ಲಿ ರೊಬೋಟ್‌ಗಳು ಮಾನವರ ಕೆಲಸಗಳನ್ನು ಈಗಾಗಲೇ ಕಸಿದುಕೊಂಡಿವೆ. ಜಗತ್ತು ರೊಬೋ ಕಾಲಕ್ಕೆ ಕಾಲಿಡುತ್ತಿವೆ. ಇದಕ್ಕೆ ಸಾಕ್ಷಿಯಾಗಿ ಇದೀಗ ಬ್ರಿಟನ್‌ನಲ್ಲಿ ರೊಬೋಟ್ ಸುದ್ದಿ ಬರೆಯಲೂ ಕೂರಲಿವೆ!
ಬ್ರಿಟನ್‌ನ ಪ್ರಸ್ ಅಸೋಸಿಯೇಷನ್ (ಪಿಎ) ಯುನೈಟೆಡ್ ಕಿಂಗ್‌ಡಮ್ ಮತ್ತು ಐರೆಲಂಡ್‌ನಲ್ಲಿ ವಿವಿಧ ಮಾಧ್ಯಮ ಸಂಸ್ಥೆಗಳಿಗೆ ಸುದ್ದಿ ಏಜೆನ್ಸಿಯಾಗಿ ಕೆಲಸ ಮಾಡುತ್ತಿದೆ. ಇದರಲ್ಲೀಗ ರೊಬೋಟ್‌ಗಳನ್ನು ನೇಮಿಸಲು ಅದು ಸಿದ್ಧವಾಗಿದೆ. ದತ್ತಾಂಶ ಆಧರಿತವಾಗಿ ಸುದ್ದಿಗಳನ್ನು ರೊಬೋಟ್‌ಗಳ ಮೂಲಕ ಬರೆ ಸುವ ಸ್ಟಾರ್ಟಪ್ ಕಂಪನಿ ಉಬ್ಸ್ì ಮೀಡಿ ಯಾ ಸಹಯೋಗದಲ್ಲಿ 5 ರೊಬೋಟ್ ಪತ್ರ ಕ ರ್ತರು ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡಲಿದ್ದು, ತಿಂಗಳಿಗೆ 30 ಸಾವಿರ ಸುದ್ದಿಗಳನ್ನು ಸ್ಥಳೀಯ ಮಾಧ್ಯಮಗಳಿಗೆ ನೀಡಲಿದೆಯಂತೆ.
ಈ ಯೋಜನೆಗಾಗಿ ಪಿಎ, ಗೂಗಲ್‌ನಿಂದ 5.17 ಕೋಟಿ ರೂ.ಗಳ ನೆರವನ್ನೂ ಪಡೆದಿದೆ. ಪಿಎ ಮತ್ತು ಉಬ್ಸ್ì ಮೀಡಿಯಾಗಳು ರಿಪೋರ್ಟರ್ ಆ್ಯಂಡ್ ಡಾಟಾ ಆ್ಯಂಡ್ ರೊಬೋಟ್ಸ್ ಹೆಸರಿನ ವ್ಯವಸ್ಥೆ ಸ್ಥಾಪಿಸಲಿದ್ದು, ತಿಂಗಳಿಗೆ ಸಾವಿರಾರು ಸುದ್ದಿಗಳನ್ನು ಬರೆಯ ಲಿದೆ. ಮಾನವನಿಂದ ಹೊರತಾಗಿ ಕೃತಕ ಬುದ್ಧಿ ಮತ್ತೆ ಬಳಸಿ ರೊಬೋಟ್‌ಗಳು ಸುದ್ದಿ ಬರೆ ಯಲಿವೆ. ನುರಿತ ಪತ್ರಕರ್ತರು, ವ್ಯಾಪಕ ಜವಾಬ್ದಾರಿ ಹೊಂದಿದ್ದರೂ, ರೊಬೋಗಳ ಮೂಲಕ ಸುದ್ದಿ ಬರೆಸುವುದರಿಂದ ಹೆಚ್ಚಿನ ಸ್ಥಳೀಯ ಸುದ್ದಿ ಬರೆಸಲು ಸಾಧ್ಯ ಎಂದು ಪಿಎ ಸಂಪಾದ ಪೀಟ್ ಕ್ಲಿಫ್ಟನ್ ಹೇಳಿದ್ದಾರೆ.
ಏನು ಬರೆಯುತ್ತವೆ?
ಸದ್ಯ ರೊಬೋಟ್‌ಗಳಿಂದ ಉದ್ಯೋಗ ವಾರ್ತೆ, ಆರೋಗ್ಯ, ಅಪರಾಧ ಸುದ್ದಿಗಳು, ಇತರ ಸಾಮಾನ್ಯ ಸುದ್ದಿಗಳನ್ನು ಬರೆಸಲು ಉದ್ದೇಶಿಲಾಗಿದೆ. ಸರಕಾರಿ, ಸ್ಥಳೀಯ ವಿಚಾರಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪತ್ರಕರ್ತರೇ ಬರೆಯಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ
Neuralink; ಮತ್ತೊಬ್ಬನ ಮೆದುಳಿಗೆ ಚಿಪ್ : ಏನಿದು ತಂತ್ರಜ್ಞಾನ?
Wildfires; ಲಾಸ್ ಏಂಜಲೀಸ್ ಬೆಂಕಿಗೆ 10000 ಕೋಟಿ ಬಂಗಲೆ ಭಸ್ಮ
Donald Trump ಸೋಲಿಸುತ್ತಿದ್ದೆ, ಪಕ್ಷಕ್ಕಾಗಿ ಹಿಂದೆ ಸರಿದೆ: ಅಧ್ಯಕ್ಷ ಜೋ ಬೈಡೆನ್
ಹವಾಮಾನ ಇಲಾಖೆಗೆ 150: ಕಾರ್ಯಕ್ರಮಕ್ಕೆ ಬರಲ್ಲ ಬಾಂಗ್ಲಾ
MUST WATCH
ಹೊಸ ಸೇರ್ಪಡೆ
Congress: ಇದೇ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ: ಶಾಸಕ ಶಿವಗಂಗಾ
Chhattisgarh: ಮೂವರು ನಕ್ಸಲರ ಎನ್‌ಕೌಂಟರ್… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್
Ajekar: ಎಷ್ಟು ದಿನ ಟವರ್ ನೋಡ್ಕೊಂಡಿರ್ಲಿ, ನಮ್ಗೆ ಬೇಗನೆ ಕನೆಕ್ಷನ್ ಕೊಡಿ ಸ್ವಾಮಿ!
Champions Trophy: ಬಾಂಗ್ಲಾದೇಶ ತಂಡ ಪ್ರಕಟ; ಇಬ್ಬರು ಹಿರಿಯ ಆಟಗಾರರಿಗೆ ಇಲ್ಲ ಸ್ಥಾನ
Kundapura: ಕೋಡಿ ಸಮುದ್ರ ತೀರದಲ್ಲಿ ಶೌಚಾಲಯ ಸಿದ್ಧವಾದರೂ ಪ್ರವಾಸಿಗರ ಬಳಕೆಗೆ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.