ಹಂದಿಯ ಚಿತ್ರಕ್ಕಿದೆ 45,500 ವರ್ಷಗಳ ಇತಿಹಾಸ!
Team Udayavani, Jan 15, 2021, 7:20 AM IST
ಜಕಾರ್ತಾ: 2017ರಲ್ಲಿ ಇಂಡೋನೇಷ್ಯಾದ ಗುಹೆಯೊಂದರಲ್ಲಿ ಪತ್ತೆಯಾಗಿದ್ದ ಕಾಡುಹಂದಿಯ ವರ್ಣಚಿತ್ರ45,500 ವರ್ಷಗಳ ಹಿಂದೆ ರಚನೆಯಾಗಿದ್ದು ಎಂದು ಪುರಾತತ್ವಜ್ಞರು ಪತ್ತೆಹಚ್ಚಿದ್ದಾರೆ!
ಈ ಕುರಿತು ಜರ್ನಲ್ ಸೈನ್ಸ್ ಆಡ್ವಾನ್ಸ್‌ನಲ್ಲಿ ಅಧ್ಯಯನ ತಂಡವು ಬೆಳಕು ಚೆಲ್ಲಿದೆ. ಆಗಿನ ಮನುಷ್ಯ ಗಿಡಗಳ ದ್ರಾವಣ ಹಾಗೂ ಕೆಲವು ಕೆಂಪುಹೂವುಗಳ ಮಿಶ್ರಣ ಮಾಡಿ ಸುಲಾವೇಸಿ ಎಂದು ಕರೆಸಿಕೊಳ್ಳುವ ಕಾಡು ಹಂದಿಯ ಚಿತ್ರವನ್ನು ಬಿಡಿಸಿದ್ದನಂತೆ. ಗಮನಾರ್ಹ ಸಂಗತಿಯೆಂದರೆ, 2017ರ ವರೆಗೂ ಈ ಚಿತ್ರ ಪತ್ತೆಯಾಗಿರಲೇ ಇಲ್ಲ. ಅನಂತರದಿಂದ ಈ ಚಿತ್ರವು ಇಂಡೋನೇಷ್ಯಾದಲ್ಲಿ ಮಾನವಜೀವನಾರಂಭದ ಕುರಿತೂ ಕುತೂಹಲ ಸೃಷ್ಟಿಸಿದೆ. ಸುಲಾವೇಸಿ ಹಂದಿಗಳನ್ನು ಮನುಷ್ಯ ಸಹಸ್ರಾರು ವರ್ಷಗಳಿಂದ ಬೇಟೆಯಾಡುತ್ತಾ ಬಂದಿದ್ದಾನೆ. ವಿಶೇಷವಾಗಿ ಹಿಮಯುಗದ ಸಮಯದಲ್ಲಿ ಆ ಭಾಗದಲ್ಲಿ ಸುಲಾವೇಸಿ ಹಂದಿಯೇ ಮನುಷ್ಯನ ಪ್ರಮುಖ ಆಹಾರವಾಗಿತ್ತು. ಈ ಕಾರಣಕ್ಕಾಗಿಯೇ, ಗುಹೆಯಲ್ಲಿ ಪತ್ತೆಯಾದ ಚಿತ್ರವೂ ಅದರದ್ದೇ ಆಗಿದೆ ಎನ್ನುತ್ತಾರೆ ಪುರಾತತ್ವಜ್ಞರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.