ಅಂತರಿಕ್ಷದಲ್ಲೊಂದು ದೇಶ!
Team Udayavani, Nov 15, 2017, 6:50 AM IST
ವಾಷಿಂಗ್ಟನ್: ಭೂಮಿ ಯನ್ನು ಬಿಟ್ಟು ಅನ್ಯಗ್ರಹದಲ್ಲೋ, ಬಾಹ್ಯಾಕಾಶ ದಲ್ಲೋ ಜೀವಿಸಬೇಕೆಂಬ ಮಾನವನ ಆಸೆ ದಿನೇ ದಿನೇ ಪ್ರಬಲ ವಾಗುತ್ತಿದೆ. ಇದರ ಫಲವಾ ಗಿಯೇ, ಅಸ್ಗಾಡಿಯಾ ಎಂಬ ಮೊತ್ತ ಮೊದಲ ಬಾಹ್ಯಾಕಾಶ ದೇಶವೊಂದು ಅಸ್ತಿತ್ವಕ್ಕೆ ಬಂದಿದೆ!
ವರ್ಜೀನಿಯಾದಲ್ಲಿರುವ ಅಮೆ ರಿಕ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ನಾಸಾ)ದ ವ್ಯಾಲಾಪ್ಸ್ ಫ್ಲೈಟ್ ಫೆಸಿಲಿಟಿ ಕೇಂದ್ರದ ಮೂಲಕ “ಅಸ್ಗಾಡಿಯಾ 1 – ದ ಸ್ಪೇಸ್ ಕಿಂಗ್‌ಡಂ’ ಎಂಬ ಉಪ ಗ್ರಹವನ್ನು ಯಶಸ್ವಿ ಯಾಗಿ ಉಡಾವಣೆ ಮಾಡ ಲಾಗಿದೆ. ಈ ಉಪಗ್ರಹ ಬಾಹ್ಯಾ ಕಾಶದಲ್ಲಿ ಸುತ್ತುತ್ತಾ, ಅಸ್ಗಾಡಿಯಾ ದೇಶ ಇರಬಹುದಾದ ಗಡಿಯನ್ನು ಗುರುತಿಸಲಿದೆ! ಈಗಾಗಲೇ, ಈ ದೇಶದ ಪೌರತ್ವಕ್ಕಾಗಿ ಸುಮಾರು 3 ಲಕ್ಷ ಮಂದಿ ಆನ್‌ಲೈನ್ ಮೂಲಕ ಅರ್ಜಿಯನ್ನೂ ಹಾಕಿದ್ದಾರೆ.
ಪರಿಕಲ್ಪನೆ ಯಾರದ್ದು?
ದೇಶಗಳು, ಗಡಿಗಳು, ಯುದ್ಧಗಳು, ನೂರಾರು ಕಾಯ್ದೆ ಕಟ್ಟಲೆಗಳು, ತೆರಿಗೆಗಳು ಇತ್ಯಾದಿ ಜಂಜಾಟಗಳನ್ನು ಬಿಟ್ಟು ಹಾಯಾಗಿ ಭೂಮಿಯಿಂದಲೇ ದೂರ ಹೋಗಿ ಜೀವಿಸುವ ಸಂಕಲ್ಪ- ಪರಿಕಲ್ಪನೆ ಗಳೊಂದಿಗೆ ಅಸಾYಡಿಯಾ ದೇಶವನ್ನು ಸ್ಥಾಪಿಸಲು ಐಗರ್ ಅಶುರ್ಬೆಲಿ ಎಂಬ ಆಸ್ಟ್ರಿಯಾದ ವಿಜ್ಞಾನಿಯ ನೇತೃತ್ವದ ತಂಡವೊಂದು ಈ ಪ್ರಯತ್ನಕ್ಕೆ
ಕೈಹಾಕಿದೆ.
ಮುಂದಿನ ಯೋಜನೆ!
ಬಾಹ್ಯಾಕಾಶದಲ್ಲಿ ಹೋಗಿ ಮನುಷ್ಯ ಆಯುಷ್ಯ ಪೂರ್ತಿ ಜೀವಿಸುವುದು ಸದ್ಯದ ಮಟ್ಟಿಗೆ ಅಸಾಧ್ಯದ ಸಂಗತಿಯಾಗಿದೆ. ಆದರೂ ಮುಂದೊಂದು ದಿನ ಇದು ಸಾಧ್ಯವಾದರೆ ಆಗ ಅಸ್ಗಾಡಿಯಾ ದೇಶದ ಅಸ್ತಿತ್ವಕ್ಕೆ ಮಾನ್ಯತೆ ಸಿಗುತ್ತದೆ ಎಂಬುದು ಅದರ ಸೃಷ್ಟಿಕರ್ತರ ನಂಬಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.