South Korea: ವಿಮಾನ ದುರಂತದಲ್ಲಿ ಬದುಕುಳಿದವನಿಗೆ ಮರೆವು!
ದ.ಕೊರಿಯಾ: ಪವಾಡಸದೃಶ ಬದುಕುಳಿದಿದ್ದ ಇಬ್ಬರು
Team Udayavani, Dec 31, 2024, 7:00 AM IST
ಸಿಯೋಲ್: “ಏನಾಯ್ತು?, ನಾನ್ಯಾಕೆ ಇಲ್ಲಿದ್ದೇನೆ?’ ಇದು ದಕ್ಷಿಣ ಕೊರಿಯಾದಲ್ಲಿ ಭಾನುವಾರ ಸಂಭವಿಸಿದ ವಿಮಾನ ದುರಂತದಲ್ಲಿ ಬದುಕುಳಿದ ಪ್ರಯಾಣಿಕರೊಬ್ಬರ ಪ್ರಶ್ನೆ!.
ಮುವಾನ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಗೋಡೆಗೆ ಗುದ್ದಿ ಸ್ಫೋಟಗೊಂಡ ವಿಮಾನದಲ್ಲಿ ಪ್ರಯಾಣಿಸಿದ್ದ 181 ಮಂದಿಯಲ್ಲಿ ಲೀ(32) ಮತ್ತು ಕ್ವನ್(25) ಎಂಬ ಇಬ್ಬರನ್ನು ಅವಶೇಷಗಳಡಿಯಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲೀಗೆ ಪ್ರಜ್ಞೆ ಬಂದ ಬಳಿಕ ಪುನರಾವರ್ತಿತವಾಗಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಕ್ವನ್ಗೆ ತಲೆ, ಕಾಲು ಸೇರಿ ಹಲವು ಕಡೆ ಗಾಯಗಳಾಗಿದ್ದು, ಅಪಾಯವಿಲ್ಲ. ಆದರೂ ಮಾನಸಿಕವಾಗಿ ಆಘಾತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸಿಕ್ಕಿದ ಬ್ಲಾಕ್ಬಾಕ್ಸ್:
ಇದೇ ವೇಳೆ, ದುರಂತದ ಬಗ್ಗೆ ತನಿಖೆ ನಡೆಯುತ್ತಿದ್ದು, ವಿಮಾನದ ಬ್ಲಾಕ್ ಬಾಕ್ಸ್ಗಳು ದೊರೆತಿದ್ದು ಇದರಿಂದ ಘಟನೆಯ ಮಾಹಿತಿ ಸಂಗ್ರಹಕ್ಕೆ ಸಹಾಯವಾಗಲಿದೆ. ಇನ್ನು ಘಟನೆ ಬೆನ್ನಲ್ಲೇ ದಕ್ಷಿಣ ಕೊರಿಯಾದ ತನ್ನಲ್ಲಿರುವ ಎಲ್ಲಾ ಬೋಯಿಂಗ್ 737-800 ವಿಮಾನಗಳ ಸುರಕ್ಷತಾ ತಪಾಸಣೆ ನಡೆಸುವುದಾಗಿ ಹೇಳಿದೆ.
ನಿಲ್ದಾಣಕ್ಕೆ ವಾಪಸ್:
ಜೆಜು ಏರ್ನ ಮತ್ತೊಂದು ಬೋಯಿಂಗ್ 737-800 ವಿಮಾನ ಸೋಮವಾರ ತಾಂತ್ರಿಕ ದೋಷದಿಂದಾಗಿ ಟೇಕ್ ಆಫ್ ಆದ ನಿಮಿಷಗಳಲ್ಲೇ ಮತ್ತೆ ಸಿಯೋಲ್ನ ಗಿಂಪೊ ವಿಮಾನ ನಿಲ್ದಾಣಕ್ಕೆ ವಾಪಸ್ಸಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
Burqa ban; ಸ್ವಿಟ್ಜರ್ಲೆಂಡ್ ನಲ್ಲಿ ಬುರ್ಖಾ ನಿಷೇಧ ಕಾನೂನು ಜಾರಿ: ಗರಿಷ್ಠ ದಂಡ
Court Verdict: ಹಿಂದೂ ಸಂತ ಚಿನ್ಮಯ್ ದಾಸ್ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್
Chinmay Das: ಇಂದು ಬಾಂಗ್ಲಾದಲ್ಲಿ ಚಿನ್ಮಯ್ ದಾಸ್ ಬೇಲ್ ಅರ್ಜಿ ವಿಚಾರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ
Lalu Prasad Yadav: “ಐಎನ್ಡಿಐಎ’ಗೆ ಬರೋದಿದ್ದರೆ ನಿತೀಶ್ಗೆ ಸ್ವಾಗತ
Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್ ಆಸ್ತಿ ಈಗ ವರ್ಗಾವಣೆ
Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.