ಅಮೆರಿಕ ಕೊಟ್ಟಿತು ವೀಸಾ ಅಭಯ
Team Udayavani, Jan 10, 2018, 6:35 AM IST
ವಾಷಿಂಗ್ಟನ್: ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಟೆಕ್ಕಿಗಳ ಕನಸಿಗೆ ಕೊಳ್ಳಿ ಇಡಲಿದ್ದ ಎಚ್1ಬಿವೀಸಾ ನಿಯಮಗಳ ತಿದ್ದುಪಡಿ ಪ್ರಸ್ತಾವನೆಯನ್ನು ಅಮೆರಿಕ ಸರ್ಕಾರ ಸದ್ಯಕ್ಕೆ ಪಕ್ಕಕ್ಕಿಟ್ಟಿದೆ.
ಮಂಗಳವಾರ, ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿದ ಅಮೆರಿಕ ಪೌರತ್ವ ಹಾಗೂ ವಲಸೆ ಸೇವೆಗಳ ಇಲಾಖೆ (ಯುಎಸ್‌ಸಿಐಎಸ್), ಎಚ್1ಬಿ ವೀಸಾ ನಿಯಮಾವಳಿಗಳ ತಿದ್ದುಪಡಿ ಕುರಿತಾದ ಪ್ರಸ್ತಾವನೆ ಪರಿಗಣಿಸುವ ವಿಚಾರ ಸದ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ, ಅಮೆರಿಕದಿಂತ ಏಕಾಏಕಿ ಹೊರದಬ್ಬಲ್ಪಡುವ ಭೀತಿಗೆ ಸಿಲುಕಿದ್ದ 5ರಿಂದ 7.5 ಲಕ್ಷ ಭಾರತೀಯರು ನಿಟ್ಟುಸಿರು ಬಿಡುವಂತಾಗಿದೆ.
ಈ ಬಗ್ಗೆ ಮತ್ತಷ್ಟು ಸ್ಪಷ್ಟನೆ ನೀಡಿದ ಯುಎಸ್‌ಸಿಐಎಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥ ಜೊನಾಥನ್ ವಿಥಿಂಗ್ಟನ್, “”ಹಾಗೊಂದು ವೇಳೆ ನಾವು ವಲಸೆ ನಿಯಮ ಬದಲಾವಣೆ ತರಲು ಉದ್ದೇಶಿದರೂ ಅದು ಎಚ್1ಬಿ ವೀಸಾದಾರರನ್ನು ಬಾಧಿಸದು. “21ನೇ ಶತಮಾನದ ಅಮೆರಿಕದ ಸ್ಪರ್ಧಾತ್ಮಕ ಕಾಯ್ದೆ’ಯ ಕೆಲವು ಪರಿಚ್ಛೇದದನ್ವಯ ಹಾಲಿ ಎಚ್1ಬಿ ವೀಸಾಗಳ ಅವಧಿಯನ್ನು 6 ವರ್ಷಗಳಿಗೂ ಹೆಚ್ಚಿನ ಅವಧಿಗೆ ವಿಸ್ತರಿಸಲು ಅವಕಾಶವಿದೆ. ಅಂದು ಕಂಪನಿಗಳ ಮನವಿಯ ಮೇರೆಗೆ ತೀರ್ಮಾನಿಸಲಾಗುತ್ತದೆ’ ಎಂದರು.
ಇನ್ನು, ಅಮೆರಿಕ ಅಧ್ಯಕ್ಷ ಟ್ರಂಪ್ ಅವರ “ಬೈ ಅಮೆರಿಕನ್, ಹೈರ್ ಅಮೆರಿಕನ್’ ಘೋಷಣೆ ಕುರಿತಂತೆ ಮಾತನಾಡಿದ ಜೊನಾಥನ್, “”ಅಧ್ಯಕ್ಷರ ಘೋಷ ವಾಕ್ಯಗಳನ್ನು ಪರಿಪಾಲನೆ ಮಾಡಲು ವಲಸೆ ನೀತಿಯಡಿ ಇರುವ ಎಚ್1ಬಿವೀಸಾ ನಿಯಮಗಳಿಗೆ ಹೊರತಾದ ಇನ್ನಿತರ ನಿಯಮಗಳ ಬದಲಾವಣೆ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.