ಕುಬೇರರದ್ದೇ ಕಾರುಬಾರು
Team Udayavani, Jan 22, 2019, 1:48 AM IST
ದಾವೋಸ್: ಕಳೆದ ವರ್ಷ ಭಾರತದಲ್ಲಿ ಕುಬೇರರ ಆಸ್ತಿ ದಿನವೊಂದಕ್ಕೆ 2,200 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಮೀಕ್ಷೆಯೊಂದು ಬಹಿ ರಂಗಪಡಿಸಿದೆ. ಅಷ್ಟೇ ಅಲ್ಲ, ಭಾರತದ ಜನಸಂಖ್ಯೆಯ ಅರ್ಧಕ್ಕೂ ಹೆಚ್ಚಿನ ಜನರ ಆಸ್ತಿ ದಿನವೊಂದಕ್ಕೆ ಶೇ.3ರಷ್ಟು ಹೆಚ್ಚಾಗಿದ್ದರೆ, ಕುಬೇ ರರ ಆಸ್ತಿ ಸರಾಸರಿ ಶೇ.39ರಷ್ಟು ಏರಿಕೆಯಾಗಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
‘ಆಕ್ಸಮ್ ಸ್ಟಡಿ’ ಅಧ್ಯಯನದಡಿ ವಿಶ್ವದ ವಿವಿಧ ದೇಶಗಳ ಆರ್ಥಿಕ ಸ್ಥಿತಿಗತಿ ಸಮೀಕ್ಷೆ ನಡೆಸಲಾಗಿದ್ದು, ವರದಿಯನ್ನು ದಾವೋಸ್‌ನಲ್ಲಿ ಸೋಮವಾರದಿಂದ ಆರಂಭಗೊಂಡ 5 ದಿನಗಳ ವರ್ಲ್ಡ್ ಎಕನಾಮಿಕ್ ಫೋರಂ (ಡಬ್ಲ್ಯೂಇಎಫ್)ನಲ್ಲಿ ಮಂಡಿಸಲಾಗಿದೆ. ಭಾರತದ ಸಮೀಕ್ಷೆಯಲ್ಲಿ ಮತ್ತೂಂದು ವಿಚಾರವೂ ಉಲ್ಲೇಖಗೊಂಡಿದ್ದು, ಭಾರತದ 13.6 ಕೋಟಿ ಕಡು ಬಡವರಲ್ಲಿ ಶೇ. 10ರಷ್ಟು ಮಂದಿ 2004ರಿಂದ ಇಲ್ಲಿಯವರೆಗೂ ಸಾಲದಲ್ಲಿ ಇರುವುದಾಗಿ ಉಲ್ಲೇಖೀಸಲಾಗಿದೆ. ಇನ್ನು, ಸಮೀಕ್ಷೆ ಪ್ರಕಾರ, ವಿವಿಧ ದೇಶಗಳ ಕುಬೇರರ ಆಸ್ತಿ ಕಳೆದ ವರ್ಷ ದಿನವೊಂದಕ್ಕೆ ಸರಾಸರಿ ಶೇ.12ರಷ್ಟು (ಅಂದಾಜು 17,800 ಕೋಟಿ ರೂ.) ಹೆಚ್ಚಾಗಿದ್ದರೆ, ಕಡುಬಡವರ ಆಸ್ತಿ ದಿನಕ್ಕೆ ಶೇ. 11ರಷ್ಟು ಕೈಬಿಡುತ್ತಾ ಸಾಗಿದೆ ಎಂದು ವಿಶ್ಲೇಷಿಸಲಾಗಿದೆ. ‘ಶ್ರೀಮಂತರು ಶ್ರೀಮಂತರಾಗೇ ಹೋಗುತ್ತಿದ್ದು, ಬಡವರು ನಿರ್ಗತಿಕರಾಗುತ್ತಿದ್ದಾರೆ’ ಎಂಬುದು ಈ ಸರ್ವ ಸಮೀಕ್ಷೆಗಳ ಒಟ್ಟಾರೆ ಸಾರಾಂಶ.
•ಕಳೆದ ವರ್ಷದ ಆರ್ಥಿಕ ಸ್ಥಿತಿಗತಿ ಬಗ್ಗೆ ವರದಿ ಕೊಟ್ಟ ಆಕ್ಸ್‌ಫರ್ಡ್ ವಿವಿ
•ಜಗತ್ತಿನ ಎಲ್ಲಾ ದೇಶಗಳ ಆರ್ಥಿಕತೆಯ ಬಗ್ಗೆ ‘ಆಕ್ಸಮ್ ಸ್ಟಡಿ’ ವರದಿ
•ಭಾರತದಲ್ಲಿ ಅರ್ಧಕ್ಕೂ ಹೆಚ್ಚು ಜನಸಂಖ್ಯೆಯ ಆಸ್ತಿ ದಿನಕ್ಕೆ ಶೇ. 3ರಷ್ಟು ಮಾತ್ರ ಹೆಚ್ಚಳ
•2004ರಿಂದೀಚೆಗೆ ಸಾಲದ ಸುಳಿಯಲ್ಲೇ ಸಿಲುಕಿರುವ ಶೇ. 10 ಕಡುಬಡವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Canada ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ?
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
MUST WATCH
ಹೊಸ ಸೇರ್ಪಡೆ
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
Mangaluru: ಜ.11, 12ರಂದು ಮಂಗಳೂರು ಲಿಟ್ ಫೆಸ್ಟ್… ಕಲೆ, ಸಾಹಿತ್ಯ, ಜಾನಪದಗಳ ಸಂಗಮ
Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.