ಮಹಿಳೆಯ ಹೊಟ್ಟೆ ಒಳಗಿತ್ತು 10 ಮಗು ತೂಕದ ಚೀಲ!
Team Udayavani, Mar 22, 2017, 3:50 AM IST
ಮೆಕ್ಸಿಕೋ ಸಿಟಿ: 24 ವರ್ಷದ ಆ ಮಹಿಳೆಯ ಹೊಟ್ಟೆಯಲ್ಲಿ 10 ಮಗು ಇದ್ದಷ್ಟು ತೂಕ ಇತ್ತು! ಚಂದ್ರನ ಮೇಲೆ ನಡೆದಂತೆ ಭಾರದ ಹೆಜ್ಜೆ ಇಡುತ್ತಿದ್ದ ಆಕೆ ಅಷ್ಟು ದಪ್ಪಗಿರಲು ಕಾರಣ ಅಂಡಾಶಯದ ಬೊಕ್ಕೆ (ಒವರಿಯನ್ ಸಿಸ್ಟ್). ವೈದ್ಯರ 157 ಸೆಂ.ಮೀ. ಗಾತ್ರದ ಆ ಪೊಳ್ಳು ಚೀಲವನ್ನು ಕೊನೆಗೂ ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ಯಶಸ್ವಿಯಾದರು.
ಮೆಕ್ಸಿಕೋದ ಜನರಲ್ ಆಸ್ಪತ್ರೆಯ ವೈದ್ಯ ಡಾ. ಎರಿಕ್ ಹನ್ಸನ್ ಈ ಚಿಕಿತ್ಸೆಯನ್ನು ಯಶಸ್ವಿಯಾಗಿಸಿದ್ದು, 11 ತಿಂಗಳ ನಂತರ ಮಹಿಳೆ ಸಹಜ ಜೀವನಕ್ಕೆ ಮರಳಿದ್ದಾರೆ. ಕಳೆದ 6 ತಿಂಗಳಿಂದ ಓಡಾಡಲೂ ಆಗದೆ, ಉಸಿರಾಡಲಾಗದೆ, ಹಸಿವಾದರೂ ಹೊಟ್ಟೆಗೆ ಆಹಾರ ಸೇವಿಸಲು ಅಸಾಧ್ಯವಾಗಿ ಮಹಿಳೆಗೆ ಮರುಜೀವ ಬಂದಂತಾಗಿದೆ.
1902ರಲ್ಲಿ ಇಂಥದ್ದೇ ಪ್ರಕರಣ ಅಮೆರಿಕದಲ್ಲಿ ನಡೆದಿದ್ದು, ಅಂಡಾಶಯದ ಪೊಳ್ಳು ಚೀಲದಲ್ಲಿ ತುಂಬಿಕೊಂಡಿದ್ದ ನೀರನ್ನು ಹೊರಹಾಕಿ ಆಪರೇಶನ್ ನಡೆಸಲಾಗಿತ್ತು. ಆದರೆ, ಚೀಲದೊಳಗೆ ನೀರಿದ್ದೂ ಶಸ್ತ್ರಚಿಕಿತ್ಸೆ ನಡೆಸಿದ್ದು ಇದೇ ಮೊದಲು. ಮಹಿಳೆಯ ದೇಹದಿಂದ 33 ಕೆಜಿ ತೂಕದ ವಸ್ತು ಹೊರಬಿದ್ದಂತಾಗಿದೆ.
ಏನಿದು ಒವರಿಯನ್ ಸಿಸ್ಟ್?
20-30ರ ಆಸುಪಾಸಿನ ಮಹಿಳೆಯರನ್ನು ಕಾಡುವ ಸಮಸ್ಯೆ. ಇದನ್ನು ನಿಯಮಿತ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್, ಎಂಆರ್‌ಐ, ಸಿಟಿ ಸ್ಕ್ಯಾನ್, ಗರ್ಭಧಾರಣೆ ಅಥವಾ ಕ್ಯಾನ್ಸರ್ ಶೋಧಕ ರಕ್ತಪರೀಕ್ಷೆಗಳ ಮೂಲಕ ಪತ್ತೆ ಹಚ್ಚುತ್ತಾರೆ. ಹೊಟ್ಟೆಯೊಳಗೆ ಈ ಅನಗತ್ಯ ಗಂಟು ಇದ್ದಾಗ, ಹೊಟ್ಟೆನೋವು, ಒತ್ತಡ, ಯೋನಿ ಮೂಲಕ ಸಣ್ಣ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ. ಈ ಬೊಕ್ಕೆಗಳು ಹಲ್ಲು, ಕೂದಲು, ದ್ರವ, ಕೊಬ್ಬು, ಉಗುರುಗಳನ್ನು ಒಳಗೊಂಡಿರುತ್ತವೆ. ದೇಹಕ್ಕೆ ಅಪಾಯ ಅಲ್ಲದೆ ಇದ್ದರೂ ಆದಷ್ಟು ಬೇಗ ಇವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಸುವುದು ಉತ್ತಮ. ಕ್ರಮೇಣ ಇವು ಮಧುಮೇಹ, ಹೃದಯಾಘಾತ, ರಕ್ತದೊತ್ತಡದಂಥ ಕಾಯಿಲೆಗಳಿಗೂ ಕಾರಣ ಆಗಬಲ್ಲವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Canada ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ?
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Network Problem: ಹಲೋ…ಹಲೋ…ಹಲೋ ಟೆಸ್ಟಿಂಗ್!
Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ
Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.