ಬೀಜಿಂಗ್‌ನಲ್ಲಿ ತಲೆ ಎತ್ತಿದೆ ಜಗತ್ತಿನ ಅತೀ ದೊಡ್ಡ ಏರ್‌ಪೋರ್ಟ್
173 ಎಕರೆಯಲ್ಲಿ ನಿಲ್ದಾಣ; 80,460 ಕೋಟಿ ರೂ. ವೆಚ್ಚ
Team Udayavani, Sep 26, 2019, 7:00 PM IST
ಬೀಜಿಂಗ್: ಐದು ವರ್ಷಗಳ ಹಿಂದೆ ಡಾಕ್ಸಿಂಗ್ ಏರಿಯಾ ಒಂದು ಧೂಳು ತುಂಬಿದ ಪ್ರದೇಶವಾಗಿತ್ತು. ಆದರೆ ಈಗ ಇಲ್ಲೊಂದು ಅದ್ಭುತ, ಅತೀ ದೊಡ್ಡ ವಿಮಾನ ನಿಲ್ದಾಣ ರೂಪು ತಳೆದಿದೆ.
ಸದ್ಯ ಜಗತ್ತಿನಲ್ಲೇ ಇಂತಹ ವಿಮಾನ ನಿಲ್ದಾಣ ಇಲ್ಲ ಎಂದು ಹೇಳಲಾಗಿದೆ. ಅಮೆರಿಕ ಜಗತ್ತಿನಲ್ಲೇ ಅತಿ ದೊಡ್ಡ ವೈಮಾನಿಕ ಮಾರುಕಟ್ಟೆಯಾಗಿದ್ದು, ಅದಕ್ಕೆ ಸಡ್ಡು ಹೊಡೆಯುವಂತೆ ಬೀಜಿಂಗ್‌ನ ಈ ವಿಮಾನ ನಿಲ್ದಾಣ ನಿರ್ಮಾಣವಾಗಿದೆ.
ಹೇಗಿದೆ ನಿಲ್ದಾಣ ?
173 ಎಕರೆಯಲ್ಲಿ ಬೀಜಿಂಗ್ ಡಾಕ್ಸಿಂಗ್ ಅಂ.ರಾ. ವಿಮಾನ ನಿಲ್ದಾಣ ನಿರ್ಮಾಣವಾಗಿದ್ದು, ಬರೋಬ್ಬರಿ 80,460 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಇದರ ಗಾತ್ರ ಸುಮಾರು 100 ಫುಟ್ಬಾಲ್ ಕ್ರೀಡಾಂಗಣಕ್ಕೆ ಸಮವಾಗಿದೆ. ಸ್ಟಾರ್‌ಫಿಶ್ ಮಾದರಿಯಲ್ಲಿ ವಾಸ್ತು ಹೊಂದಿದೆ. ಇದನ್ನು ಇರಾಕ್-ಬ್ರಿಟಿಷ್ ವಾಸ್ತುಶಿಲ್ಪಿ ಝಹಾ ಹದೀದ್ ಅವರು ವಿನ್ಯಾಸ ಮಾಡಿದ್ದಾರೆ. ವಿಮಾನ ನಿಲ್ದಾಣದ ಕೆಳಭಾಗದಲ್ಲಿ ರೈಲು ನಿಲ್ದಾಣವಿದ್ದು, ಬೀಜಿಂಗ್ ನಗರವನ್ನು ಕೇವಲ 20 ನಿಮಿಷಲ್ಲಿ ತಲುಪಬಹುದು. ಕೇವಲ ನಾಲ್ಕೇ ವರ್ಷದಲ್ಲಿ ಈ ನಿಲ್ದಾಣ ನಿರ್ಮಾಣವಾಗಿದೆ. 2014 ಡಿ.26ರಂದು ಇದರ ಕೆಲಸ ಶುರುವಾಗಿತ್ತು.
ಭವಿಷ್ಯದ ವಿಮಾನ ನಿಲ್ದಾಣ
2050 ವರ್ಷವನ್ನು ಗಮನದಲ್ಲಿಟ್ಟುಕೊಂಡು, ಆ ವೇಳೆಗೆ ಇರಬಹುದಾದ ಪ್ರಯಾಣಿಕರ ದಟ್ಟಣೆ ಪರಿಗಣಿಸಿ ಈ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಇದರಲ್ಲಿ ದೇಶೀಯ ಮತ್ತು ಅಂ.ರಾ. ವಿಮಾನ ನಿಲ್ದಾಣವಿದ್ದು, ಪ್ರತಿ ವರ್ಷ 1 ಟರ್ಮಿನಲ್‌ನಲ್ಲಿ 10 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
ಸದ್ಯ ನಾಲ್ಕು ರನ್‌ವೇಗಳನ್ನು ಇದು ಹೊಂದಿದ್ದು, 7 ರನ್‌ವೇಗಳು ಮುಂದೆ ಕಾರ್ಯ ನಿರ್ವಹಿಸಲಿವೆ. ಜತೆಗೆ 1 ಹೆಚ್ಚುವರಿ ರನ್‌ವೇ ಮಿಲಿಟರಿ ಬಳಕೆಗೆ ಸೀಮಿತವಾಗಿರಲಿದೆ. 2025ರವೇಳೆಗೆ 7.2 ಕೋಟಿ ಮಂದಿ ಪ್ರಯಾಣಿಕರು, 20 ಲಕ್ಷ ಕಾರ್ಗೋ, 6.20 ಲಕ್ಷ ವಿಮಾನಗಳ ನಿರ್ವಹಣೆಯ ಗುರಿಯನ್ನು ಹೊಂದಿದೆ.
ಸದ್ಯ ಅಮೆರಿಕದ ಅಟ್ಲಾಂಟಾ ಮತ್ತು ಬೀಜಿಂಗ್‌ನ ಈಗಿನ ವಿಮಾನ ನಿಲ್ದಾಣಗಳು ಜಗತ್ತಿನಲ್ಲೇ ಅತಿ ನಿಬಿಡ ವಿಮಾನ ನಿಲ್ದಾಣಗಳಾಗಿದ್ದು ವಾರ್ಷಿಕ 10 ಕೋಟಿ ಪ್ರಯಾಣಿಕರ ನಿರ್ವಹಣೆ ಮಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Qatar: ಕತಾರ್ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ
ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.