ನಮ್ಮ ವಿಮಾನ ಕೊಂಡರೆ ದಿಗ್ಬಂಧನ ಇಲ್ಲ: ಅಮೆರಿಕ
Team Udayavani, Oct 21, 2018, 8:47 AM IST
ವಾಷಿಂಗ್ಟನ್: “ಕಾಟ್ಸಾ ಕಾಯ್ದೆಯ ದಿಗ್ಬಂಧನದಿಂದ ತಪ್ಪಿಸಿಕೊಳ್ಳಬೇಕಾದರೆ, ಅಮೆರಿಕದ ಎಫ್-16 ಯುದ್ಧ ವಿಮಾನಗಳನ್ನು ಖರೀದಿಸಿ’… ಇದು ಭಾರತದ ಮೇಲೆ ಅಮೆರಿಕ ಹಾಕಿರುವ ಒತ್ತಡ. ಈ ಸಂಬಂಧ ಭಾರತಕ್ಕೆ ಅನೌಪಚಾರಿಕವಾಗಿ ಸೂಚನೆ ನೀಡಿರುವ ಅಮೆರಿಕ, ಒಂದು ವೇಳೆ ಅಮೆರಿಕದ ಯುದ್ಧ ವಿಮಾನ ಖರೀದಿಸಿದ್ದೇ ಆದಲ್ಲಿ ನಿಮ್ಮ ಮೇಲೆ ಹೇರಬೇಕೆಂದಿರುವ ದಿಗ್ಬಂಧನ ಮನ್ನಾ ಮಾಡುತ್ತೇವೆ ಎಂದಿದೆ. ಆದರೆ, ಇದುವರೆಗೆ ಭಾರತ ಅಮೆರಿಕದ ಈ ಆಮಿಷಕ್ಕೆ ಯಾವುದೇ ರೀತಿಯ ಒಪ್ಪಿಗೆ ನೀಡಿಲ್ಲ.
ಈ ತಿಂಗಳ ಆರಂಭದಲ್ಲಿ ಭಾರತ, ರಷ್ಯಾದಿಂದ ಅತ್ಯಾಧುನಿಕ ಎಸ್-400 ಪ್ರತಿರೋಧಕ ಕ್ಷಿಪಣಿಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಂಡಿದೆ. ಇದು ಅಮೆರಿಕದ ಕಣ್ಣು ಕೆಂಪಾಗಿಸಿದೆ. ಸದ್ಯ ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾ ಜತೆ ಜಗತ್ತಿನ ಯಾವುದೇ ದೇಶಗಳೂ ಶಸ್ತ್ರಾಸ್ತ್ರ ಖರೀದಿ ಮಾಡಬಾರದು ಎಂದು ಅಮೆರಿಕ ನಿಯಮ ರೂಪಿಸಿದೆ. ಇದನ್ನು ಉಲ್ಲಂ ಸಿರುವ ಭಾರತ, ರಷ್ಯಾದಿಂದ ಪ್ರತಿರೋಧಕ ಕ್ಷಿಪಣಿಗಳ ಖರೀದಿಗೆ ಮುಂದಾಗಿದೆ. ಡಿಸೆಂಬರ್‌ನಲ್ಲಿ ಅಮೆರಿಕಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಮಾತುಕತೆ ನಡೆವ ಸಾಧ್ಯತೆಗಳಿವೆ.