ಈ ಟಾಯ್ಲೆಟ್‌ನಲ್ಲಿ “ಅದು’ ಅಂಟುವ ವಿಷ್ಯಾನೇ ಇಲ್ಲ!
ಹೊಸ ಸ್ಪ್ರೆ ಬಳಸಿದರೆ ಕಮೋಡ್‌ಗೆ ನೀರು ಅತ್ಯಂತ ಕಡಿಮೆ ಸಾಕು
Team Udayavani, Nov 19, 2019, 6:16 PM IST
ವಾಷಿಂಗ್ಟನ್: ಟಾಯ್ಲೆಟ್‌ನಲ್ಲಿ “ಆ’ ಕೆಲಸ ಎಲ್ಲ ಮುಗೀತು.. ಆದ್ರೆ ಗಡಿಬಿಡಿಯಲ್ಲಿ ಕಮೋಡ್‌ನಲ್ಲಿ “ಅದು’ ಅಂಟ್ಕೊಂಡು ಬಿಟ್ಟಿದೆ ಅಂದ್ರೆ..? ಫ್ಲಶ್ ಬಟನ್ ಒತ್ತುತ್ತಲೇ ಇರುತ್ತೇವೆ. ಇದರಿಂದ ನೀರೂ ದಂಡಿಯಾಗಿ ಹೋಗುತ್ತಲೇ ಇರುತ್ತದೆ. ಇಂತಹ ಸಮಸ್ಯೆ ಪರಿಹಾರಕ್ಕೇ ಬಂದಿದೆ ಈಗ ಹೊಸ ಐಡಿಯಾ ನೀರಿನ ಬಳಕೆ ಬಗ್ಗೆ ಇದೀಗ ಜಗತ್ತಿನ ಎಲ್ಲೆಡೆಯಲ್ಲಿ ಜಾಗೃತಿ, ಅಂದೋಲನಗಳು ನಡೆಯುತ್ತಿರುತ್ತವೆ. ಟಾಯ್ಲೆಟ್‌ನಲ್ಲಿ ಅತಿ ಹೆಚ್ಚು ನೀರು ಫ್ಲಶ್‌ಗಾಗಿ ಖರ್ಚಾಗುತ್ತದೆ, ಇದನ್ನು ನಿಯಂತ್ರಿಸುವುದು ಹೇಗೆ ಎನ್ನುವುದರ ಬಗ್ಗೆ ತಲೆಕೆಡಿಸಿಕೊಂಡಿದ್ದ ವಿಜ್ಞಾನಿಗಳು ಪರಿಹಾರವೊಂದನ್ನು ಕಂಡುಕೊಂಡಿದ್ದಾರೆ.
ಸಾಮಾನ್ಯವಾಗಿ ಟಾಯ್ಲೆಟ್‌ಗಳಲ್ಲಿ ಮಲ ವಿಸರ್ಜನೆಯಾದ ಬಳಿಕ ಕಮೋಡ್‌ಗಳಿಗೆ ಮಲ ಹಿಡಿದುಕೊಳ್ಳುವುದರಿಂದ ದೀರ್ಘಾವಧಿ ಫ್ಲಶ್ ಮಾಡುತ್ತೇವೆ. ಇದರಿಂದ ನೀರು ಹೆಚ್ಚು ಮುಗಿಯುತ್ತದೆ. ಇದನ್ನು ತಪ್ಪಿಸಲು ಈಗ ಹೊಸ ಕಮೋಡ್ ಕೋಟಿಂಗ್ ಸ್ಪ್ರೆ ಆವಿಷ್ಕರಿಸಲಾಗಿದೆ.
ಅದ್ರಲ್ಲೇನಪ್ಪಾ ವಿಶೇಷ ಅಂದಿರಾ? ಈ ಕಮೋಡ್‌ಗೆ ಹೆಚ್ಚು ನೀರೇ ಬೇಡ. ಮಲ ಹಿಡಿದುಕೊಳ್ಳುವ ಪ್ರಮೇಯವೂ ಇಲ್ಲ. ಮಲ, ಮೂತ್ರ ಬಿದ್ದರೆ ಜಾರುತ್ತದೆ. ಮೇಲ್ಮೆ„ ಆ ರೀತಿ ಇರುವುದರಿಂದ ಶುಚಿತ್ವಕ್ಕೂ ಅನುಕೂಲಕರ. ಶೇ.90ರಷ್ಟು ನೀರು ಬಳಕೆಯನ್ನು ಇದು ಕಡಿಮೆ ಮಾಡುತ್ತದಂತೆ. ಅಲ್ಲದೇ ಟಾಯ್ಲೆಟ್‌ನಲ್ಲಿ ಬ್ಯಾಕ್ಟೀರಿಯಾಗೂ ನಿಯಂತ್ರಣ ಹೇರುತ್ತದಂತೆ.
ಹೊಸ ಬಗೆಯ ಕಮೋಡ್ ಕೋಟಿಂಗ್ ಸ್ಪ್ರೆ 50 ಫ್ಲಶ್‌ವರೆಗೆ ಪರಿಣಾಮಕಾರಿಯಾಗಿರುತ್ತದಂತೆ. ಮೂತ್ರ ಬೀಳುವುದರಿಂದ ಇದು ಕಡಿಮೆ ಪರಿಣಾಮಕಾರಿಯಾಗುತ್ತದೆ. ಆದ್ದರಿಂದ 50 ಫ್ಲಶ್ ಬಳಿಕ ಮತ್ತೆ ಸ್ಪ್ರೆ ಮಾಡಬೇಕಾಗುತ್ತದೆ ಎಂದು ಹೇಳಲಾಗಿದೆ. ಈ ಕುರಿತ ಸಂಶೋಧನೆಯ ವಿವರಗಳನ್ನು ನೇಚರ್ ಸಸ್ಟೈನಿಬಿಲಿಟಿ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.
ಇಡೀ ವಿಶ್ವದಲ್ಲಿ ಒಂದು ದಿನದಲ್ಲಿ ಕೇವಲ ಟಾಯ್ಲೆಟ್ ಫ್ಲಶ್‌ಗಾಗಿ ನೀರು ಎಷ್ಟು ಖರ್ಚಾಗುತ್ತೆ ಎಂದರೆ, ಅದೇ ನೀರು ಇಡೀ ಆಫ್ರಿಕಾದ ಬೇಡಿಕೆಯ ಆರು ಪಟ್ಟಿನಷ್ಟು ಆಗುತ್ತಂತೆ. ಆದ್ದರಿಂದ ಹೊಸ ಮಾದರಿಯ ಈ ಕೋಟಿಂಗ್ ಸ್ಪ್ರೆ ಉತ್ತಮವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.