ಬ್ರೆಕ್ಸಿಟ್ ಆರಂಭಿಸುವ ನಿರ್ಣಾಯಕ ಮಸೂದೆಗೆ ಬ್ರಿಟನ್ ಸಂಸತ್ತು ಅಸ್ತು
Team Udayavani, Feb 9, 2017, 3:22 PM IST
ಲಂಡನ್ : ಐರೋಪ್ಯ ಒಕ್ಕೂಟವನ್ನು ತ್ಯಜಿಸುವ ಬಗ್ಗೆ ಮಾರ್ಚ್ 31ರೊಳಗೆ ನಿರ್ಣಾಯಕ ಮಾತುಕತೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಪ್ರಧಾನಿ ತೆರೆಸಾ ಮೇ ಅವರಿಗೆ ಅಧಿಕಾರವನ್ನು ನೀಡುವ ಮಸೂದೆಗೆ ಬ್ರಿಟಿಷ್ ಸಂಸತ್ತಿನಲ್ಲಿ ಇಂದು ಅಭೂತಪೂರ್ವ ಬೆಂಬಲ ದೊರಕಿತು.
ಐರೋಪ್ಯ ಒಕ್ಕೂಟ (ಅಧಿಸೂಚನೆ ಹಿಂಪಡೆಯುವಿಕೆ) ಮಸೂದೆಗೆ, ಅಂತಿಮ ಚರ್ಚೆಯ ಬಳಿಕ, ಹೌಸ್ ಆಫ್ ಕಾಮನ್ಸ್ನಲ್ಲಿ 494 – 122 ಮತಗಳ ಅಂತರದಲ್ಲಿ ಅನುಮೋದನೆ ದೊರಕಿತು.
2019ರ ಒಳಗೆ ಐರೋಪ್ಯ ಒಕ್ಕೂಟದ ಸದಸ್ಯನಲ್ಲದ ಬ್ರಿಟನ್ನ ಹೊಸ ವಹಿವಾಟಿಗಾಗಿ ಎರಡು ವರ್ಷಗಳ ಮಾತುಕತೆಯನ್ನು ಲಿಸ್ಬನ್ ಒಪ್ಪಂದದ 50 ನೇ ವಿಧಿಯನ್ವಯ ಆರಂಭಿಸಲು ಪ್ರಧಾನಿ ಮೇ ಅವರಿಗೆ ಈ ಮಸೂದೆಯು ಪೂರ್ಣಾಧಿಕಾರ ನೀಡುತ್ತದೆ.
ಈಗ ಈ ಮಸೂದೆಯು ಕಾಮನ್ಸ್ನಲ್ಲಿ ಅಂಗೀಕಾರವಾಗಿರುವುದರಿಂದ ಇದನ್ನು ಇನ್ನು ಹೌಸ್ ಆಫ್ ಲಾರ್ಡ್ಸ್ (ಮೇಲ್ಮನೆ) ಚರ್ಚಿಸಲಿದೆ. ಇದೇ ಫೆ.20ರಂದ ಬ್ರಿಟಿಷ್ ಮೇಲ್ಮನೆಯ ಕಲಾಪಗಳು ಆರಂಭಗೊಳ್ಳಲಿದ್ದು ಅದು ಈ ಮಸೂದೆಗೆ ಅಂತಿಮ ಒಪ್ಪಿಗೆ ನೀಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.