ಭಾರತಕ್ಕೆ ಟ್ರಂಪ್ ತೆರಿಗೆ ಬಿಸಿ?
Team Udayavani, Mar 6, 2019, 12:30 AM IST
ವಾಷಿಂಗ್ಟನ್: ಸತತ ಎಚ್ಚರಿಕೆಗಳ ಹೊರತಾಗಿಯೂ ಅಮೆರಿಕದ ಐಶಾರಾಮಿ ಉತ್ಪನ್ನಗಳಿಗೆ ಭಾರತವು ಹೆಚ್ಚಿನ ಆಮದು ಸುಂಕ ವಿಧಿಸುತ್ತಿರುವುದನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತಕ್ಕೆ ಅಮೆರಿಕವು ದಶಕಗಳ ಹಿಂದೆ ನೀಡಿರುವ “ಆದ್ಯತೆಯ ವ್ಯಾಪಾರಿ ರಾಷ್ಟ್ರ’ದ ಸ್ಥಾನಮಾನವನ್ನು ರದ್ದುಗೊಳಿಸಲು ಮುಂದಾಗಿದ್ದಾರೆ.
ಅಮೆರಿಕ ಸಂಸತ್ತಿಗೆ ಈ ವಿಚಾರವನ್ನು ತಿಳಿಸಿರುವ ಟ್ರಂಪ್, ಭಾರತ ಮತ್ತು ಟರ್ಕಿ ರಾಷ್ಟ್ರಗಳಿಗೆ ಸೇರಿದ, ಆಟೋಮೊಬೈಲ್ ಬಿಡಿಭಾಗಗಳು, ಜವಳಿ ಸಾಮಗ್ರಿ ಸೇರಿದಂತೆ ಸುಮಾರು 2,000 ವಸ್ತುಗಳು ಅಮೆರಿಕವನ್ನು ಸುಂಕ ರಹಿತವಾಗಿ ಪ್ರವೇಶಿಸುತ್ತಿವೆ. ಆದರೆ, ಇದರ ಲಾಭ ಪಡೆದಿರುವ ಭಾರತದ 40,000 ಕೋಟಿ ರೂ. ಮೌಲ್ಯದಷ್ಟು ಸಾಮಗ್ರಿಗಳು ತೆರಿಗೆ ಹಂಗಿಲ್ಲದೆ ಅಮೆರಿಕ ಪ್ರವೇಶಿಸಿವೆ. ಆದರೆ, ಅಮೆರಿಕದಿಂದ ಆಯಾ ದೇಶಗಳಿಗೆ ಆಮದಾಗುತ್ತಿರುವ ಸರಕುಗಳಿಗೆ ದುಬಾರಿ ಶುಲ್ಕ ವಿಧಿಸಲಾಗುತ್ತಿದೆ. ಸತತ ಮನವಿ, ಎಚ್ಚರಿಕೆಯ ಹೊರತಾಗಿಯೂ ಇದು ಮುಂದು ವರಿದಿದ್ದು ಭಾರತಕ್ಕೆ ನೀಡಲಾಗಿರುವ ಆದ್ಯತೆಯ ವ್ಯಾಪಾರಿ ರಾಷ್ಟ್ರದ ಸ್ಥಾನಮಾನ ರದ್ದುಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದಿದ್ದಾರೆ.
ಭಾರತ ಅಬಾಧಿತ
ಅಮೆರಿಕವು ಭಾರತಕ್ಕೆ ನೀಡಿರುವ ಆದ್ಯತೆಯ ವ್ಯಾಪಾರಿ ರಾಷ್ಟ್ರದ ಸ್ಥಾನ ಮಾನವನ್ನು ಹಿಂಪಡೆದರೆ, ಅದರಿಂದ ಭಾರತಕ್ಕೆ ಯಾವುದೇ ಧಕ್ಕೆ ಇಲ್ಲ. ಅಮೆರಿಕದ ನಿರ್ಧಾರ, ಭಾರತದ ರಫ್ತಿನ ಮೇಲೆ ಯಾವುದೇ ದುಷ್ಪರಿ ಣಾಮ ಬೀರುವುದಿಲ್ಲ ಎಂದು ಕೇಂದ್ರ ವಾಣಿಜ್ಯ ಇಲಾಖೆಯ ಕಾರ್ಯದರ್ಶಿ ಅನೂಪ್ ವಾಧ ವಾನ್ ತಿಳಿಸಿದ್ದಾರೆ. ಮಂಗಳವಾರ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸದ್ಯಕ್ಕೆ ಚಾಲ್ತಿ ಯಲ್ಲಿರುವ ಅಮೆರಿಕದ ಆದ್ಯತೆಯ ವ್ಯಾಪಾರಿ ರಾಷ್ಟ್ರದಿಂದ ಭಾರತಕ್ಕೆ ವಾರ್ಷಿಕ 1,300 ಕೋಟಿ ರೂ. ಲಾಭವಾಗು ತ್ತಿದೆಯಷ್ಟೇ. ಅಮೆರಿಕ ಆ ಸ್ಥಾನಮಾನ ಹಿಂಪಡೆದರೂ ಅದು ಭಾರತದ ರಫ್ತಿನ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.