ಚೀನದಲ್ಲಿ ಜುರಾಸಿಕ್ ಅವಧಿಯ ಡೈನೋಸರ್ ಮೊಟ್ಟೆ ಪತ್ತೆ
Team Udayavani, Jan 2, 2018, 3:27 PM IST
ಬೀಜಿಂಗ್ : ಚೀನದ ಜಿಯಾಂಗ್ಸಿ ಪ್ರಾಂತ್ಯದಲ್ಲಿನ ಗ್ವಾಂಗ್‌ಝೋ ನಗರ ಡೈನೋಸಾರ್‌ಗಳ ತವರು ಎಂದೇ ಖ್ಯಾತವಾಗಿದ್ದು ಈಚೆಗೆ ಇಲ್ಲಿ ಈಚೆಗೆ ಡೈನೋಸಾರ್‌ಗಳ ಪಳೆಯುಳಿಕೆ ರೂಪದಲ್ಲಿರುವ ಸುಮಾರು 30 ಮೊಟ್ಟೆಗಳು ಪತ್ತೆಯಾಗಿವೆ. ಪರಿಣತರು ಈ ಮೊಟ್ಟೆಗಳು ಸುಮಾರು 130 ದಶಲಕ್ಷ ವರ್ಷಗಳಷ್ಟು ಹಿಂದಿನವು ಎಂದು ಅಂದಾಜಿಸಿದ್ದಾರೆ.
ಕೋಟ್ಯಂತರ ವರ್ಷಗಳಷ್ಟು ಹಿಂದೆ ಈ ಭೂಮಿಯನ್ನು ಆಳುತ್ತಿದ್ದ ರಾಕ್ಷಸ ಗಾತ್ರದ ಡೈನೋಸರ್‌ಗಳ ಸಂತತಿ ವೃದ್ಧಿಸುತ್ತಿದ್ದ ವಿಶ್ವದ ಏಳು ಪ್ರಮುಖ ತಾಣಗಳಲ್ಲಿ ಚೀನವೂ ಒಂದಾಗಿದೆ ಎಂದು ನೇಚರ್ ಡಾಟ್ ಕಾಮ್ ವರದಿ ಮಾಡಿದೆ. ಚೀನದಲ್ಲಿ ಇದ್ದವೆಂದು ಹೇಳಲಾಗಿರುವ ಡೈನೋಸಾರ್‌ಗಳು ಹಕ್ಕಿಗಳಂತೆ ರೆಕ್ಕೆಗಳನ್ನು ಹೊಂದಿದ ಪ್ರಭೇದಕ್ಕೆ ಸೇರಿದವುಗಳಾಗಿವೆ.
ಚೀನದ ಗ್ವಾಂಗ್‌ಝೋ ದಲ್ಲಿ ಕಟ್ಟಡ ಕಾರ್ಮಿಕರು ದೊಡ್ಡದೊಂದು ಬಂಡೆಯನ್ನು ಸ್ಫೋಟಕವಿಟ್ಟು ಸಿಡಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾಗ ಅದೃಷ್ಟವಶಾತ್ ಪಳೆಯುಳಿಕೆ ರೂಪದಲ್ಲಿದ್ದ ಡೈನೋಸಾರ್‌ಗಳ ಸುಮಾರು 30 ಮೊಟ್ಟೆಗಳು ಯಥಾವತ್ ಸ್ಥಿತಿಯಲ್ಲಿ ಉಳಿದುಕೊಂಡವು.
ಕಪ್ಪು ಬಣ್ಣದಲ್ಲಿದ್ದ ಈ ಮೊಟ್ಟೆಗಳು 2ಎಂಎಂ ಗಾತ್ರದಲ್ಲಿವೆ. ಕಾರ್ಮಿಕರ ದೃಷ್ಟಿಗೆ ಬಿದ್ದ ಈ ಮೊಟ್ಟೆಗಳನ್ನು ಅವರು ಡೈನೋಸಾರ್‌ಗಳ ಮೊಟ್ಟೆ ಇರಬಹುದೆಂದು ಶಂಕಿಸಿದರೂ ಸ್ಥಳೀಯ ಪೊಲೀಸ್ ಠಾಣೆಗೆ ವಿಷಯ ತಿಳಿಸಿದರು. ಪರಿಣತರು ಬಂದು ನೋಡಿದಾಗಲೇ ಅದು ಡೈನೋಸಾರ್‌ಗಳ ಮೊಟ್ಟೆ ಎಂಬುದು ಖಚಿತವಾಯಿತು. ಇವುಗಳು ಕ್ರೆಟೇಶಿಯರ್ ಅವಧಿಗೆ ಸೇರಿದವುಗಳೆಂದು ಪರಿಣತರು ಅಭಿಪ್ರಾಯಪಟ್ಟರು. ಈ ಕ್ರೆಟೇಶಿಯಸ್ ಅವಧಿಯು ಜುರಾಸಿಕ್ ಪಾರ್ಕ್ ಅವಧಿಯನ್ನು ಅನುಸರಿಸಿ ಬಂದ ಅವಧಿಯಾಗಿದೆ.
ಪರಿಣತರು ಕ್ರೆಟೇವಿಯಸ್ ಯುಗ 145 ಮಿಲಿಯ ವರ್ಷಗಳ ಹಿಂದೆ ಆರಂಭವಾಯಿತೆಂದು ಅಭಿಪ್ರಾಯ ಪಡುತ್ತಾರೆ. ಇದು ಸುಮಾರು 66 ಮಿಲಿಯ ವರ್ಷಗಳ ಬಳಿಕ ಕೊನೆಗೊಂಡಿತು. ಇದನ್ನು ಅನುಸರಿಸಿ ಪ್ಯಾಲಿಯೋಜೀನ್ ಅವಧಿ ಬಂತು.
ಕ್ರೆಟೇಶಿಯಸ್ ಅವಧಿಯಲ್ಲಿದ್ದ ಡೈನೋಸಾರ್‌ಗಳು ಟೈರಾನೊಸರಸ್ ರೆಕ್ಸ್ (ಟಿ-ರೆಕ್ಸ್) ಪ್ರಭೇದವನ್ನು ಒಳಗೊಂಡಿವೆ. ಇವುಗಳಿಗೆ ಹಕ್ಕಿಗಳಂತೆ ರೆಕ್ಕೆ ಮತ್ತು ಮೂರು ಕೊಂಬುಗಳಿದ್ದವು ಎಂದು ಪರಿಣತರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.