380 ಮಿಲಿಯನ್ ವರ್ಷದಷ್ಟು ಹಳೆಯ ಮೀನಿನ ಹೃದಯ ಪತ್ತೆ!
ಅಳಿವಿನಂಚಿನಲ್ಲಿರುವ ಆರ್ತ್ರೋಡೈರ್ ಕುಟುಂಬದ ಮೀನುಗಳ ಪ್ರಬೇಧಕ್ಕೆ ಸೇರಿದೆ
Team Udayavani, Sep 17, 2022, 6:43 PM IST
ಆಸ್ಟ್ರೇಲಿಯಾ: ಮೊದಲ ಬಾರಿಗೆ ಆಸ್ಟ್ರೇಲಿಯಾದ ಕರ್ಟಿನ್ ವಿಶ್ವವಿದ್ಯಾನಿಲಯದ ರೇಸಿಂಗ್‌ನ ಸಂಶೋಧಕರು ಸುಮಾರು 380 ಮಿಲಿಯನ್ ವರ್ಷದಷ್ಟು ಹಳೆಯ ಮೀನಿನ ಹೃದಯದ ಪಳೆಯುಳಿಕೆಯನ್ನು ಪಶ್ಚಿಮ ಆಸ್ಟ್ರೇಲಿಯಾದ ಕಿಂಬರ್ಲಿ ಪ್ರದೇಶದಲ್ಲಿ ಪತ್ತೆ ಹಚ್ಚಿದ್ದು, ಈ ಮೀನಿನ ಹೃದಯವನ್ನು ಸುರಕ್ಷಿತವಾಗಿ ಸಂರಕ್ಷಿಸಿದ್ದಾರೆ.
ಇದನ್ನೂ ಓದಿ:ಈಕೆ ಬೆಂಕಿಯಲ್ಲಿ ಅರಳಿದ ಬ್ಯೂಟಿ… ಕಾಲೇಜಿನಲ್ಲಿನ ಕರಾಳ ಘಟನೆ ಬದುಕಿಗೆ ತಿರುವು ಕೊಟ್ಟಿತ್ತು…
ಮೀನಿನ ಹೃದಯದ ಪಳೆಯುಳಿಕೆಯನ್ನು ಪರೀಕ್ಷಿಸಿದಾಗ ಮಾನವರಿಗೆ ಇರುವಂತೆ ದವಡೆಯ ಕಶೇರುಕಗಳ ವಿಕಾಸದ ಬಗ್ಗೆ ಸುಳಿವುಗಳನ್ನು ನೀಡುತ್ತದೆ ಎಂದು ಸಿಎನ್‌ಇಟಿ ನೀಡಿರುವ ವರದಿ ತಿಳಿದುಬಂದಿದೆ. ಈ ಪಳೆಯುಳಿಕೆಯು ಹೊಟ್ಟೆ, ಕರುಳು ಮತ್ತು ಯಕೃತ್ತನ್ನು ಸಹ ಒಳಗೊಂಡಿದೆ, ಈ ಅಂಗಗಳು ಶಾರ್ಕ್ ಮೀನಿನ ಅಂಗರಚನಾಶಾಸ್ತ್ರವನ್ನು ಹೋಲುತ್ತವೆ.
ಈ ಮೀನಿನ ಹೃದಯದ ಪಳೆಯುಳಿಕೆ 358 ಮಿಲಿಯನ್ ವರ್ಷಗಳ ಹಿಂದೆ ಅಳಿವಿನಂಚಿನಲ್ಲಿರುವ ಆರ್ತ್ರೋಡೈರ್ ಕುಟುಂಬದ ಮೀನುಗಳ ಪ್ರಬೇಧಕ್ಕೆ ಸೇರಿದೆ. ಆದರೆ ಈಗ ಸಿಕ್ಕಿರುವ ಮಾದರಿಯು ಪ್ರಸ್ತುತ ದಾಖಲೆ ಹೊಂದಿರುವ ಪಳೆಯುಳಿಕೆಗಿಂತ ಹಳೆಯದಾದ ಪಳೆಯುಳಿಕೆ ಆಗಿದೆ. ಅದರಲ್ಲಿ ಮುಖ್ಯವಾಗಿ ಮೀನಿನಲ್ಲಿರುವ ದವಡೆಯ ವಿಕಾಸವು ವಿಭಿನ್ನವಾಗಿದೆ.
ಈ ಮೀನಿನ ಹೃದಯವು ಎಸ್-ಆಕಾರದಲ್ಲಿದ್ದು, ಎರಡು ಹೃದಯದ ಕೋಣೆಗಳನ್ನು ಹೊಂದಿದೆ. ಇದು ಮೀನು ಮತ್ತು ಆಧುನಿಕ ಶಾರ್ಕ್‌ಗಳ ನಡುವೆ ಹೋಲಿಕೆಗಳನ್ನು ಕಂಡುಹಿಡಿಯಲು ಸಂಶೋಧಕರಿಗೆ ಒಂದು ನೇರ ಕಾರಣವಾಯಿತು. “ಈ ವಿಕಸನವನ್ನು ಸಾಮಾನ್ಯವಾಗಿ ಸಣ್ಣ ಹಂತಗಳ ಸರಣಿ ಎಂದು ಭಾವಿಸಲಾಗುತ್ತದೆ. ಆದರೆ ಈ ಪುರಾತನ ಪಳೆಯುಳಿಕೆಗಳು ದವಡೆಯಿಲ್ಲದ ಮತ್ತು ದವಡೆಯ ಕಶೇರುಕಗಳ ನಡುವೆ ದೊಡ್ಡ ಬದಲಾವಣೆಯನ್ನು ಸೂಚಿಸುತ್ತವೆ ಎಂದು ಕರ್ಟಿನ್ ವಿಶ್ವವಿದ್ಯಾಲಯದ ಕಶೇರುಕ ಪ್ರಾಗ್ಜೀವಶಾಸ್ತ್ರಜ್ಞ ಮತ್ತು ಸಂಶೋಧನೆಗಳ ಅಧ್ಯಯನದ ಸಹ-ಲೇಖಕ, ಪ್ರೊಫೆಸರ್ ಕೇಟ್ ಟ್ರಿನಾಜ್ಸ್ಟಿಕ್ ಹೇಳಿದ್ದಾರೆ.
ಈ ಮೀನುನಲ್ಲಿ ಹೃದಯವು ಬಾಯಿಯಲ್ಲಿ ಮತ್ತು ಕಿವಿರುಗಳ ಅಡಿಯಲ್ಲಿ ಹೊಂದಿವೆ. ಶಾರ್ಕ್ ಮೀನುಗಳು ಹೊಂದಿರುವ ಹಾಗೆಯೇ ಇದು ಕೂಡ ಅದೇ ಅಂಗರಚನೆಯನ್ನು ಹೊಂದಿದೆ” ಎಂದು ಪ್ರೋಫೆಸರ್ ಕೇಟ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.