3000 ವರ್ಷಗಳ ಬಳಿಕ ಮತ್ತೆ ಕಾಣಿಸಿಕೊಂಡ ‘ಟ್ಯಾಸ್ಮೆನಿಯನ್ ಡೆವಿಲ್’
Team Udayavani, May 28, 2021, 4:02 PM IST
ಸಿಡ್ನಿ : ಆಸ್ಟ್ರೇಲಿಯಾ ಕಾಡುಗಳಲ್ಲಿ ಅದ್ಬುತವೊಂದು ಜರುಗಿದೆ. ನಶಿಸಿ ಹೋಗಿದ್ದ ‘ಟ್ಯಾಸ್ಮೆನಿಯನ್ ಡೆವಿಲ್’ ಹೆಸರಿನ ಸಸ್ತನಿಯೊಂದು 3000 ವರ್ಷಗಳ ಬಳಿಕ ಮತ್ತೆ ಕಾಣಿಸಿಕೊಂಡಿದೆ.
ಟ್ಯಾಸ್ಮೆನಿಯನ್ ಡೆವಿಲ್ ಒಂದು ಪರಭಕ್ಷಕ ಪ್ರಾಣಿ. ಇದರ ದೇಹ ರಚನೆಯೂ ವಿಭಿನ್ನವಾಗಿದೆ. ಸಣ್ಣ ನಾಯಿಯ ಗಾತ್ರಕ್ಕೆ ಹೋಲಿಸಬಹುದಾದರೂ, ಇದು ಸಣ್ಣ ಕರಡಿಯಂತೆ ಕಾಣುತ್ತದೆ. ಅದರಲ್ಲೂ ಹೆಣ್ಣಿಗಿಂತ ಗಂಡು ಟ್ಯಾಸ್ಮೆನಿಯನ್ ದೇಹದ ಗಾತ್ರ ಹೆಚ್ಚು ಇರುತ್ತದೆ.
ಕಳೆದ 3000 ವರ್ಷಗಳ ಹಿಂದೆ ಆಸ್ಟ್ರೇಲಿಯಾ ಕಾಡುಗಳಲ್ಲಿ ಹೇರಳವಾಗಿ ವಾಸವಾಗಿದ್ದ ಟಾಸ್ಮೆನಿಯನ್ ಡೆವಿಲ್, ಡಿಂಗೋಸ್ ಹೆಸರಿನ ಕಾಡು ನಾಯಿಯ ನಿರಂತರ ದಾಳಿಯಿಂದ ನಶಿಸಿ ಹೋದವು. ಕೇವಲ ಕಾಡು ನಾಯಿಗಳು ಮಾತ್ರವಲ್ಲದೆ ತೋಳಗಳ ಬಾಯಿಗೆ ತುತ್ತಾಗಿ ಈ ಸಂತತಿ ಕಣ್ಮರೆಯಾದವು. ಇದೀಗ ಮತ್ತೆ ಕಾಣಿಸಿಕೊಂಡಿದ್ದು, ಸಿಡ್ನಿಯ ಉತ್ತರದ ಬ್ಯಾರಿಂಗ್ಟನ್ ಏಳು ಟಾಸ್ಮೆನಿಯನ್ ಡೆವಿಲ್ ಜನಿಸಿವೆ ಎಂದು ಅಲ್ಲಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡೆವಿಲ್ ಹೆಸರು ಯಾಕೆ ಬಂತು ?
ಟಾಸ್ಮೆನಿಯನ್ ಮಧ್ಯರಾತ್ರಿ ವೇಳೆ ದೆವ್ವಗಳಂತೆ ಚೀರುತ್ತಿದ್ದವಂತೆ. ವಿಕಾರವಾಗಿ ಧ್ವನಿ ಹೊರಡಿಸುತ್ತಿದ್ದರಿಂದ ಇವುಗಳನ್ನು ದೆವ್ವಗಳೆಂದು ಅಲ್ಲಿಯ ಜನರು ಕರೆಯತೊಡಗಿದರಂತೆ. ಅಂದಿನಿಂದ ಟಾಸ್ಮೆನಿಯನ್ ಡೆವಿಲ್ ಎಂದೇ ಇವು ಕರೆಯಲ್ಪಡುತ್ತಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.