ಈ ಬಾಲಕಿ 11ರಲ್ಲೇ ಪತ್ರಕರ್ತೆ
Team Udayavani, Dec 6, 2017, 7:40 AM IST
ವಾಷಿಂಗ್ಟನ್: ಪತ್ರಿಕೋದ್ಯಮದತ್ತ 11 ವರ್ಷದಲ್ಲೇ ಆಸಕ್ತಿ ಮೂಡಿಸಿಕೊಂಡಿರುವ ಅಮೆರಿಕ ಪೆನ್ಸಿಲ್ವೇನಿಯದ ಹಿಲ್ಡೆ ಕೇಟ್ ಲೈಸಿಯಾಕ್, ಸ್ವಂತವಾಗಿ ನಿಯತಕಾಲಿಕೆ ನಡೆಸುತ್ತಿದ್ದಾಳೆ. ಒರೇಂಜ್ ಸ್ಟ್ರೀಟ್ ನ್ಯೂಸ್ ಎಂಬ ಮಾಸಿಕವನ್ನು ಕಳೆದ ಹಲವು ವರ್ಷಗಳಿಂದಲೂ ಆಕೆ ನಡೆಸುತ್ತಿದ್ದಾಳೆ. ನ್ಯೂಯಾರ್ಕ್ ಡೈಲಿ ನ್ಯೂಸ್‌ನಲ್ಲಿ ಪತ್ರಕರ್ತರಾಗಿದ್ದ ತಂದೆಯ ಜತೆಗೆ ವರದಿಗಾರಿಕೆಗೆ ಕುತೂಹಲದಿಂದ ತೆರಳುತ್ತಿದ್ದ ಹಿಲ್ಡೆ, ತಂದೆ ಪತ್ರಿಕಾವೃತ್ತಿ ತೊರೆದ ನಂತರ ತಾನೇ ಮಾಸಿಕ ಪತ್ರಿಕೆ ಸ್ಥಾಪಿಸಿ ವರದಿಗಾರಿಕೆ ಮುಂದುವರಿಸಿದ್ದಾಳೆ.
ಪ್ರತಿ ಆವೃತ್ತಿಯಲ್ಲೂ ಏಳರಿಂದ ಎಂಟು ಸುದ್ದಿಗಳು, ಒಂದು ಕಥೆ ಇರುತ್ತದೆ. ಇವೆಲ್ಲವನ್ನೂ ಹಿಲ್ಡೆ ಬರೆಯುತ್ತಾಳೆ. ಆರಂಭದಲ್ಲಿ ತಂದೆ ಸುದ್ದಿಗಳನ್ನು ಸಂಪಾದಿಸುವಲ್ಲಿ ಸಹಾಯ ಮಾಡುತ್ತಿದ್ದರು. ಈಗ ಕೇವಲ ಸುದ್ದಿಯ ವಿನ್ಯಾಸದಲ್ಲಷ್ಟೇ ಸಹಾಯ ಮಾಡುತ್ತಾರೆ. ಈಕೆಯ ಸೋದರಿ ಇಝಿ ಕೂಡ ವರದಿಗಾರಿಕೆಯಲ್ಲಿ ಹಾಗೂ ವೆನ್‌ಸೈಟ್ ನಿರ್ವಹಣೆ ಮತ್ತು ವಿಡಿಯೋ ಅಪ್‌ಲೋಡ್‌ಗೆ ಸಹಾಯ ಮಾಡುತ್ತಾಳೆ. ಪೆನ್ಸಿಲ್ವೇನಿಯಾ ಪ್ರಾಂತ್ಯದಲ್ಲಿ ಯಾವುದೇ ಪ್ರಮುಖ ಘಟನೆ ನಡೆದರೂ ಅಲ್ಲಿಗೆ ಹಾಜರಾಗಿ ವರದಿ ಮಾಡುತ್ತಾಳೆ ಜತೆಗೆ ವಿಡಿಯೋ ಚಿತ್ರೀಕರಣ ಮಾಡಿ ಅದನ್ನು ತನ್ನ ಮಾಸಿಕದಲ್ಲಿ ವರದಿ ಮಾಡುತ್ತಾಳೆ. ಕಳೆದ ವರ್ಷ ಈ ಭಾಗದಲ್ಲಿ ನಡೆದ ಕೊಲೆಯೊಂದರ ವರದಿ ತೀವ್ರ ಸಂಚಲನ ಮೂಡಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Malpe: ಕೋಡಿಬೆಂಗ್ರೆ-ಹಂಗಾರಕಟ್ಟೆ ಸಂಪರ್ಕ ಇನ್ನು ದೂರ
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.