ಟ್ವಿಟರ್ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!
ಭಾರತೀಯ ಟ್ಯಾಲೆಂಟ್‌ಗಳಿಂದ ಅಮೆರಿಕಕ್ಕೆ ಸಾಕಷ್ಟು ಕೊಡುಗೆ ಸಿಗುತ್ತಿದೆ
Team Udayavani, Dec 1, 2021, 10:40 AM IST
ವಾಷಿಂಗ್ಟನ್: ಟ್ವಿಟರ್ ಸಂಸ್ಥೆಯ ಸಿಇಒ ಸ್ಥಾನಕ್ಕೇರಿ ಸುದ್ದಿಯಲ್ಲಿರುವ ಭಾರತೀಯ ಮೂಲದ ಪರಾಗ್ ಅಗರ್ವಾಲ್ ಅವರ ತಿಂಗಳ ವೇತನ ಎಷ್ಟಿರಬಹುದು?
ಬರೋಬ್ಬರಿ 62.56 ಲಕ್ಷ ರೂ.! ಹೌದು, ಪರಾಗ್‌ಗೆ ಸಂಸ್ಥೆಯು ವಾರ್ಷಿಕವಾಗಿ 1 ಬಿಲಿಯನ್ ಡಾಲರ್(7.5 ಕೋಟಿ ರೂ.) ಸಂಬಳ ನೀಡಲಿದೆ. ಅಷ್ಟೇ ಅಲ್ಲ, ವಾರ್ಷಿಕವಾಗಿ ಬೇಸ್ ಸಂಬಳದ ಶೇ.150ರಷ್ಟು ಹಣವನ್ನು ಬೋನಸ್ ರೂಪದಲ್ಲಿ ನೀಡಲಾಗುವುದು. ಹಾಗೆಯೇ 12.5 ಮಿಲಿಯನ್ ಡಾಲರ್ ಮೌಲ್ಯದ ನಿಯಂತ್ರಿತ ಷೇರನ್ನು(ಆರ್‌ಎಸ್‌ಯು) ಕೂಡ ಪರಾಗ್ ಹೆಸರಿಗೆ ವರ್ಗಾಯಿಸಲಾಗಿದೆ.
ಪರಾಗ್‌ರ ಈ ಸಾಧನೆಯನ್ನು ದೇಶದ ಜನತೆ ಸಂಭ್ರಮಿಸುತ್ತಿದೆ. ವಿಶೇಷವೆಂದರೆ ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲಾನ್ ಮಸ್ಕ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, “ಭಾರತೀಯ ಟ್ಯಾಲೆಂಟ್‌ಗಳಿಂದ ಅಮೆರಿಕಕ್ಕೆ ಸಾಕಷ್ಟು ಕೊಡುಗೆ ಸಿಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.
10 ವರ್ಷದ ಹಳೆ ಟ್ವೀಟ್:
ಪರಾಗ್ ಟ್ವಿಟರ್ ಸಂಸ್ಥೆ ಸೇರಿ 10 ವರ್ಷ ಕಳೆದಿದೆ. 2011ರ ಅಕ್ಟೋಬರ್‌ನಲ್ಲಿ ಸಂಸ್ಥೆ ಸೇರಿದ್ದ ಪರಾಗ್‌ಗೆ, ಸಂಸ್ಥೆ ಡ್ರಿಂಕ್ಸ್ ಬಾಟೆಲ್ ಕೊಟ್ಟು, “ವೆಲ್‌ಕಮ್’ ಎಂದಿತ್ತು. ಅದನ್ನು ಪರಾಗ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, “ಬಹುಶಃ ನಾನು ಈ ಕೆಲಸವನ್ನು ಪ್ರೀತಿಸಬಹುದು’ ಎಂದು ಬರೆದುಕೊಂಡಿದ್ದರು. ಇದೀಗ ಅವರು ಅದೇ ಸಂಸ್ಥೆಯ ಅತ್ಯುನ್ನತ ಹುದ್ದೆಗೆ ಏರಿದ್ದಾರೆ. ಕೂಡಲೇ ನೆಟ್ಟಿಗರು ಅವರ ಟ್ವಿಟರ್ ಖಾತೆ ಕೆದಕಿದ್ದು, ಆ ಹಳೆಯ ಟ್ವೀಟ್ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ:ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಿರಿಯ ವೈದ್ಯರ ಮುಷ್ಕರ
ಶ್ರೇಯಾ ಫ್ರೆಂಡ್ ಪರಾಗ್:
ಇದೀಗ ವಿಶ್ವದಲ್ಲೇ ಹೆಸರಾಗಿರುವ ಪರಾಗ್, ಭಾರತದ ಹೆಸರಾಂತ ಗಾಯಕಿ ಶ್ರೇಯಾ ಘೋಷಾಲ್ ಅವರ ಬಾಲ್ಯದ ಸ್ನೇಹಿತ. ಈ ವಿಚಾರವನ್ನು ಶ್ರೇಯಾ 2010ರಲ್ಲೇ ಹೇಳಿಕೊಂಡಿದ್ದರು. “ಮತ್ತೊಬ್ಬ ಬಾಲ್ಯದ ಸ್ನೇಹಿತ ಸಿಕ್ಕಿದ್ದಾನೆ’ ಎಂದು ಟ್ವಿಟರ್‌ನಲ್ಲಿ ಪರಾಗ್‌ರನ್ನು ಟ್ಯಾಗ್ ಮಾಡಿದ್ದರು. ಅವರ ಫೋಟೋಗಳು ಕೂಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.