51 ವರ್ಷಗಳ ನಂತರ ಗ್ರಂಥಾಲಯಕ್ಕೆ ವಾಪಸಾದ ಪುಸ್ತಕ!
Team Udayavani, Jun 18, 2022, 7:10 AM IST
ಒಟ್ಟಾವಾ: ಸಾರ್ವಜನಿಕ ಗ್ರಂಥಾಲಯದಿಂದ ಪುಸ್ತಕ ತೆಗೆದುಕೊಂಡು ಬಂದು, ನಿರ್ದಿಷ್ಟ ಸಮಯದಲ್ಲಿ ಮರಳಿಸದೆ, ದಂಡ ಕಟ್ಟಿರುವ ನೆನಪು ನಿಮಗಿರಬಹುದು.
ವಿಶೇಷವೆಂಬಂತೆ ಕೆನಡಾದ ಈ ಗ್ರಂಥಾಲಯವು 51 ವರ್ಷದ ಹಿಂದೆ ವ್ಯಕ್ತಿಯೊಬ್ಬರಿಗೆ ಕೊಟ್ಟಿದ್ದ ಪುಸ್ತಕ, ಈ ವರ್ಷ ವಾಪಸು ಬಂದಿದೆ!
ಆದರೂ ಗ್ರಂಥಾಲಯವು ದಂಡ ವಿಧಿಸಿಲ್ಲ. ವಾಂಕೂವರ್‌ನ ಸಾರ್ವಜನಿಕ ಗ್ರಂಥಾಲಯ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ “ದಿ ಟೆಲಿಸ್ಕೋಪ್’ ಪುಸ್ತಕ ಗ್ರಂಥಾಲಯಕ್ಕೆ ವಾಪಸಾಗಿರುವ ಫೋಟೋವನ್ನು ಹಂಚಿಕೊಂಡಿದೆ.
ಪುಸ್ತಕದೊಳಗೆ “ವೆರಿ ಸಾರಿ. ತುಂಬಾ ತಡವಾಗಿದೆ’ ಎನ್ನುವ ಸಂದೇಶ ಅಂಟಿಸಲಾಗಿದೆ. ಅಂದ ಹಾಗೆ ಈ ಪುಸ್ತಕ ವಾಪಸು ಮಾಡಲು ಕೊಡಲಾಗಿದ್ದ ಗಡುವು 1971ರ ಏ.20. ಇಷ್ಟು ವರ್ಷಗಳ ನಂತರವಾದರೂ ನೆನಪು ಮಾಡಿಕೊಂಡು ಪುಸ್ತಕಕ್ಕೆ ಚೂರೂ ಹಾನಿ ಮಾಡದೆ ವಾಪಸು ತಲುಪಿಸಿರುವ ಹಿನ್ನೆಲೆ ಗ್ರಂಥಾಲಯವು ದಂಡ ವಿಧಿಸಿಲ್ಲ.
View this post on Instagram