ವೈದ್ಯಕೀಯ ವ್ಯಾಸಂಗ.. ಅಡ್ಡಿಯಾದ ಆ ನಾಲ್ಕು ನಿಯಮ!
Team Udayavani, Mar 7, 2022, 11:45 AM IST
ಉಕ್ರೇನ್‌ನಿಂದ ಭಾರತಕ್ಕೆ ಹಿಂದಿರುಗಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಭಾರತದಲ್ಲೇ ವ್ಯಾಸಂಗ ಮುಂದುವರಿಸಲು ಅವಕಾಶ ಕಲ್ಪಿಸಬೇಕು ಎಂದು ಭಾರತೀಯ ವೈದ್ಯಕೀಯ ಕೌನ್ಸಿಲ್ (ಐಎಂಸಿ) ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ. ಆದರೆ ಇದಕ್ಕೆ ಪೂರಕವಾಗಿ ಭಾರತದಲ್ಲಿ ಚಾಲ್ತಿಯಲ್ಲಿರುವ ಪ್ರಮುಖ ನಾಲ್ಕು ನಿಯಮಗಳಲ್ಲಿ ತಿದ್ದುಪಡಿಯಾಗಬೇಕಿದೆ ಅಥವಾ ಅವುಗಳನ್ನು ಕೈಬಿಡಬೇಕಿದೆ. ಯಾವುದು ಆ ನಿಯಮಗಳು? ಇಲ್ಲಿದೆ ವಿವರಣೆ…
ವಲಸೆಗೆ ಅವಕಾಶವಿಲ್ಲ
ಒಬ್ಬ ವಿದ್ಯಾರ್ಥಿ ಒಂದು ವೈದ್ಯಕೀಯ ಕಾಲೇಜಿನಿಂದ ಮಾತ್ರ ಪದವಿ ಪಡೆಯಲು ಅವಕಾಶವಿದೆ. ಒಂದು ಕಾಲೇಜಿನಿಂದ ಮತ್ತೂಂದು ಕಾಲೇಜಿಗೆ ವಲಸೆ ಹೋಗಿ ಅಲ್ಲಿ ವ್ಯಾಸಂಗ ಮುಂದುವರಿಸಲು ಅವಕಾಶವಿಲ್ಲ. ತುರ್ತು ಸಂದರ್ಭಗಳಲ್ಲಿ ಕಾಲೇಜು ಬದಲಾಯಿಸುವ ಅವಶ್ಯಕತೆ ಎದುರಾದಾಗ ವಿದ್ಯಾರ್ಥಿಗಳು ಏನು ಮಾಡಬೇಕು ಎಂಬ ಬಗ್ಗೆ ಬೆಳಕು ಚೆಲ್ಲುವ ಅಗತ್ಯವಿದೆ.
ಎಫ್ಎಂಜಿಇ ನಿಯಮ
ವಿದೇಶಗಳಲ್ಲಿ ವೈದ್ಯಕೀಯ ಪದವಿ ಪಡೆದು, ಭಾರತದಲ್ಲಿ ವೃತ್ತಿಜೀವನ ಆರಂಭಿಸುವವರಿಗೆ ಫಾರಿನ್ ಮೆಡಿಕಲ್ ಗ್ರಾಜುಯೇಟ್ಸ್ ಎಕ್ಸಾಂ (ಎಫ್.ಎಂ.ಜಿ.ಇ.) ಪರೀಕ್ಷೆ ಕಡ್ಡಾಯ. ಆದರೆ ಈ ಪರೀಕ್ಷೆಯನ್ನು ತೆಗೆದುಕೊಳ್ಳುವವರು ಪರೀಕ್ಷೆಯಲ್ಲಿ ತಾವು ಗಳಿಸಿದ ಅಂಕಗಳ ರೀ-ಟೋಟಲಿಂಗ್, ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ಅವಕಾಶ ಇರುವುದಿಲ್ಲ. ಜತೆಗೆ ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳ ಬಗ್ಗೆ ಹೊರಗಡೆ ಎಲ್ಲೂ ಬಾಯಿಬಿಡುವುದಿಲ್ಲ ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್.ಇ.ಬಿ) ರೂಪಿಸಿರುವ ಒಪ್ಪಂದವೊಂದಕ್ಕೆ ಸಹಿ ಹಾಕಬೇಕಾಗುತ್ತದೆ.
ನನೆಗುದಿಯಲ್ಲಿ “ನೆಕ್ಸ್ಟ್’
ಎಫ್.ಎಂ.ಜಿ.ಇ. ಪರೀಕ್ಷೆಯ ಬದಲಿಗೆ ನ್ಯಾಶನಲ್ ಎಕ್ಸಿಟ್ ಟೆಸ್ಟ್ (ನೆಕ್ಸ್ಟ್) ಪರೀಕ್ಷೆ ನಡೆಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಆದರೆ ಅದು ಯಾವಾಗ ಜಾರಿಯಾಗುತ್ತದೆ ಎಂಬುದಿನ್ನೂ ತೀರ್ಮಾನವಾಗಿಲ್ಲ. ಈ ಪರೀಕ್ಷೆ ಬಂದರೆ ವಿದೇಶಗಳಲ್ಲಿ ವೈದ್ಯ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ, ಎಫ್ಎಂಜಿಇ ಪರೀಕ್ಷೆಯಲ್ಲಾಗುವ ಕೆಲವು ಅನಗತ್ಯ ನಿಯಮಗಳಿಂದ ಮುಕ್ತಿ ಸಿಗುತ್ತದೆ ಎಂಬ ಅನಿಸಿಕೆ ವಿದ್ಯಾರ್ಥಿಗಳದ್ದು.
ಅನಗತ್ಯ ಇಂಟರ್ನ್ಶಿಪ್
ವಿದೇಶಗಳಲ್ಲಿ ವೈದ್ಯ ವ್ಯಾಸಂಗ ಮಾಡುವಾಗಲೇ ವಿದ್ಯಾರ್ಥಿಗಳು ಒಂದು ವರ್ಷದ ಇಂಟರ್ನ್ಶಿಪ್ ಮಾಡಿ, ಪದವಿ ಪಡೆದಿರುತ್ತಾರೆ. ಆದರೆ ಇಲ್ಲಿಗೆ ಬಂದ ಅನಂತರ ಮತ್ತೊಂದು ವರ್ಷದ ಇಂಟರ್ನ್ಶಿಪ್ ಮಾಡುವುದು ಕಡ್ಡಾಯವಾಗಿಸಲಾಗಿದೆ. ಇದರ ಬಗ್ಗೆಯೂ ವಿದ್ಯಾರ್ಥಿಗಳ ಆಕ್ಷೇಪವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.