ಜಪಾನಿನ ಒಸಾಕಾ ನಗರದಲ್ಲಿ ಭೂಕಂಪ: 3 ಸಾವು, 200 ಮಂದಿಗೆ ಗಾಯ
Team Udayavani, Jun 18, 2018, 4:00 PM IST
ಟೋಕಿಯೋ : ಜಪಾನಿನ ಎರಡನೇ ದೊಡ್ಡ ಮಹಾ ನಗರವಾಗಿರುವ ಒಸಾಕಾದಲ್ಲಿ ಇಂದು ಸಂಭವಿಸಿದ 5.3 ಅಂಕಗಳ ತೀವ್ರತೆಯ ಭೂಕಂಪದಲ್ಲಿ ಮೂವರು ಅಸುನೀಗಿದ್ದು 200ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಸುಮಾರು 20 ಲಕ್ಷ ಜನಸಂಖ್ಯೆ ಇರುವ ಈ ನಗರದಲ್ಲಿ ಇಂದು ಜನರು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ದಟ್ಟನೆಯ ಹೊತ್ತಿನಲ್ಲೇ ಭೂಕಂಪ ಸಂಭವಿಸಿದ್ದು ಮಹಾನಗರದಲ್ಲಿನ ಅನೇಕ ಭೂಗತ ನೀರಿನ ಪೈಪುಗಳು ಒಡೆದು ಕಾರಂಜಿಯಂತೆ ನೀರು ಚಿಮ್ಮುತ್ತಿರುವುದು, ಕಟ್ಟಡಗಳು ವಾಲಿಕೊಂಡಿರುವುದು, ಗೋಡೆಗಳು ಕುಸಿದು ಬದ್ದಿರುವುದು ಕಂಡು ಬಂದಿದೆ.
ಹಾಗಿದ್ದರೂ ಯಾವುದೇ ದೊಡ್ಡ ಮಟ್ಟದ ನಾಶ-ನಷ್ಟ ಸಂಭವಿಸಿಲ್ಲ ಮತ್ತು ಯಾವುದೇ ಸುನಾಮಿ ಎಚ್ಚರಿಕೆಯನ್ನು ಕೊಡಲಾಗಿಲ್ಲ ಎಂದು ವರದಿಗಳು ತಿಳಿಸಿವೆ.
ಭೂಕಂಪದಿಂದಾಗಿ ವಿದ್ಯುತ್ ಪೂರೈಕೆ ನಿಂತು ಹೋಗಿದ್ದು ಹತ್ತಾರು ಸಾವಿರ ಜನರು ರಸ್ತೆಯಲ್ಲೇ ಉಳಿದಿರುವುದು ಕಂಡು ಬಂದಿದೆ.
ಪ್ರಧಾನಿ ಶಿಂಜೋ ಅಬೇ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ “ಸರಕಾರ ಸಂಘಟಿತವಾಗಿ ರಕ್ಷಣಾ ಕಾರ್ಯವನ್ನು ಸಮರೋಪಾದಿಯಲ್ಲಿ ನಡೆಸುತ್ತಿದೆ; ಜನರ ಪ್ರಾಣ ರಕ್ಷಣೆಯೇ ಸರಕಾರದ ಮೊದಲ ಆದ್ಯತೆಯಾಗಿದೆ’ ಎಂದು ಹೇಳಿದರು.
2011ರಲ್ಲಿ ಜಪಾನಿನಲ್ಲಿ 9 ಅಂಕಗಳ ತೀವ್ರತೆಯ ಭಾರೀ ವಿನಾಶಕಾರಿ ಭೂಕಂಪ ಸಂಭವಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್ಎಸ್ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.