ಅಬುಧಾಬಿಯಲ್ಲಿ ಡ್ರೋನ್ ದಾಳಿ: ಇಬ್ಬರು ಭಾರತೀಯರು ಸೇರಿ ಮೂವರು ಸಾವು
Team Udayavani, Jan 17, 2022, 4:52 PM IST
ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಬುಧಾಬಿಯಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಡ್ರೋನ್ ಮೂಲಕ ಇಂಧನ ಟ್ಯಾಂಕರ್ ಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಇಬ್ಬರು ಭಾರತೀಯರು ಮತ್ತು ಓರ್ವ ಪಾಕಿಸ್ಥಾನಿ ಪ್ರಜೆ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ಯೆಮೆನ್ ನ ಇರಾನ್-ಹೌತಿ ಬಂಡುಕೋರ ಗುಂಪು ದಾಳಿಯ ಹೊಣೆ ಹೊತ್ತುಕೊಂಡಿದೆ. ದಾಳಿಯಲ್ಲಿ ಇತರ 6 ಮಂದಿ ಗಾಯಗೊಂಡಿದ್ದಾರೆ.
ತೈಲ ಸಂಸ್ಥೆಯ ಎಡಿಎನ್ ಓಸಿ ಯ ಶೇಖರಣಾ ಸೌಲಭ್ಯಗಳ ಸಮೀಪವಿರುವ ಕೈಗಾರಿಕಾ ಮುಸಾಫ್ಫಾ ಪ್ರದೇಶದಲ್ಲಿ ಮೂರು ಇಂಧನ ಟ್ಯಾಂಕರ್ ಟ್ರಕ್ ಗಳು ಸ್ಫೋಟಗೊಂಡಿವೆ. ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಬುಧಾಬಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಬ್ಯಾಟರ್ ಗಳೇ ಯಾಕೆ..? ಭಾರತಕ್ಕೆ ಬೌಲರ್ ಗಳೂ ನಾಯಕರಾಗಬಹುದಲ್ಲ!
ಮೂರು ತೈಲ ಟ್ಯಾಂಕರ್‌ಗಳಲ್ಲಿ ಸ್ಫೋಟ ಮತ್ತು ವಿಮಾನ ನಿಲ್ದಾಣದಲ್ಲಿ ಬೆಂಕಿಯ ಪ್ರಕರಣದಲ್ಲಿ ಡ್ರೋನ್ ಗಳನ್ನು ಬಳಸಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಪ್ರಾಥಮಿಕ ತನಿಖೆಗಳು ಡ್ರೋನ್‌ಗಳಿಗೆ ಸೇರಿದ ಸಣ್ಣ ಹಾರುವ ವಸ್ತುಗಳ ಪತ್ತೆಯನ್ನು ಸೂಚಿಸಿವೆ ಎಂದು ಅಬುಧಾಬಿ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.