ಪೇಶಾವರ: ಹಿರಿಯ ANP ನಾಯಕನ ಸಹಿತ 20 ಮಂದಿ ಬಾಂಬ್ ದಾಳಿಗೆ ಬಲಿ
Team Udayavani, Jul 11, 2018, 11:45 AM IST
ಪೇಶಾವರ : ವಾಯವ್ಯ ಪಾಕಿಸ್ತಾನದ ಪೇಶಾವರ ನಗರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ತಾಲಿಬಾನ್ ಉಗ್ರರು ನಡೆಸಿರುವ ಆತ್ಮಾಹುತಿ ಬಾಂಬ್ ದಾಳಿಗೆ ಹಿರಿಯ ಆವಾಮಿ ನ್ಯಾಶನಲ್ ಪಾರ್ಟಿ ನಾಯಕ ಸೇರಿದಂತೆ ಕನಿಷ್ಠ 20 ಮಂದಿ ಬಲಿಯಾಗಿದ್ದಾರೆ; 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪಾಕಿಸ್ಥಾನದಲ್ಲಿ ಇದೇ ಜು.25ರಂದು ಮಹಾ ಚುನಾವಣೆಗಳು ನಡೆಯಲಿದ್ದು ಅದಕ್ಕೆ ಮುನ್ನ ಚುನಾವಣಾ ರಾಲಿ ಮೇಲೆ ಉಗ್ರರಿಂದ ನಡೆದಿರುವ ಎರಡನೇ ಆತ್ಮಾಹುತಿ ಬಾಂಬ್ ದಾಳಿ ಇದಾಗಿದೆ.
ಪೇಶಾವರ ನಗರದ ಪಿಕೆ-78ನೇ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಎಎನ್‌ಪಿ ನಾಯಕ ಹರೂನ್ ಬಿಲೋರ್ ಅವರು ಆಯಕಟ್ಟಿನ ಯಾಕತೂತ್ ಪ್ರದೇಶದ ಮೂಲೆಯೊಂದರಲ್ಲಿ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡುಸುತ್ತಿರುವಾಗ ನಿನ್ನೆ ಮಧ್ಯರಾತ್ರಿಯ ವೇಳೆಗೆ ಈ ನ್ಪೋಟ ನಡೆದಿದೆ.
ಬಿಲೋರ್ ಅವರ ವಾಹನ ಇದ್ದಲ್ಲೇ ಸ್ಫೋಟ ಸಂಭವಿಸಿದೆ. ಇವರು ದಿವಂಗತ ಎಎನ್‌ಪಿ ನಾಯಕ ಬಶೀರ್ ಬಿಲೋರ್ ಅವರ ಪುತ್ರ.ಇವರು ಕೂಡ ತಾಲಿಬಾನ್ ಬಾಂಬ್ ದಾಳಿಯಲ್ಲೇ 2012ರಲ್ಲಿ ಅಸುನೀಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.