ವಾಷಿಂಗ್ಟನ್: ಟೂರಿಸ್ಟ್, ಬ್ಯುಸಿನೆಸ್ ವೀಸಾದಾರರಿಗೂ ಉದ್ಯೋಗ
ಹೊಸ ಕೆಲಸಕ್ಕೆ ಸೇರುವ ಮುನ್ನ ವೀಸಾ ಸ್ಥಾನಮಾನ ಬದಲಾವಣೆ ಕಡ್ಡಾಯ
Team Udayavani, Mar 24, 2023, 7:40 AM IST
ವಾಷಿಂಗ್ಟನ್: ಪ್ರವಾಸಿ ವೀಸಾ ಅಥವಾ ಬ್ಯುಸಿನೆಸ್ ವೀಸಾದಲ್ಲಿ ಅಮೆರಿಕಕ್ಕೆ ತೆರಳುವವರಿಗೆ ಅಲ್ಲಿನ ಸರ್ಕಾರ ಸ್ವಾಗತಾರ್ಹ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಬಿ-1 ಮತ್ತು ಬಿ-2 ವೀಸಾದಲ್ಲಿ ಅಮೆರಿಕಕ್ಕೆ ಹೋದವರು ಕೂಡ ಅಲ್ಲಿ ಹೊಸ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ, ಸಂದರ್ಶನದಲ್ಲೂ ಭಾಗಿಯಾಗಬಹುದು ಎಂದು ಅಮೆರಿಕ ಸರ್ಕಾರ ಘೋಷಿಸಿದೆ.
ಐಟಿ ಕಂಪನಿಗಳ ಉದ್ಯೋಗ ಕಡಿತ ನಿರ್ಧಾರದಿಂದಾಗಿ ಭಾರತೀಯರು ಸೇರಿದಂತೆ ಅತ್ಯಧಿಕ ಕೌಶಲ್ಯವಿರುವ ಸಾವಿರಾರು ವಿದೇಶಿ ಉದ್ಯೋಗಿಗಳು ಉದ್ಯೋಗವಿಲ್ಲದೇ ಸಂಕಷ್ಟದಲ್ಲಿರುವಂಥ ಸಂದರ್ಭದಲ್ಲೇ ಈ ಘೋಷಣೆ ಹೊರಬಿದ್ದಿದೆ. ಈವರೆಗೆ ಬ್ಯುಸಿನೆಸ್ ಅಥವಾ ಟೂರಿಸ್ಟ್ ವೀಸಾದಲ್ಲಿ ಹೋದವರಿಗೆ ಅಲ್ಲಿ ಕೆಲಸ ಮಾಡಲು ಅವಕಾಶವಿರಲಿಲ್ಲ. ಆದರೆ, ಈಗ ಈ ನಿಯಮದಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ಇಂಥ ವೀಸಾಗಳ ಮೂಲಕ ಅಮೆರಿಕಕ್ಕೆ ಹೋದವರು ಕೂಡ ಹೊಸ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ, ಸಂದರ್ಶನ ಎದುರಿಸಬಹುದು ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ವಿಭಾಗ ಹೇಳಿದೆ. ಆದರೆ, ಈ ರೀತಿ ಉದ್ಯೋಗ ಪಡೆದವರು ಹೊಸ ಕೆಲಸಕ್ಕೆ ಹಾಜರಾಗುವ ಮುನ್ನ ತಮ್ಮ ವೀಸಾ ಸ್ಟೇಟಸ್ ಅನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.