ಟ್ರಂಪ್, ಮೋದಿ ನೀತಿಯಲ್ಲಿ ವೈರುಧ್ಯವಿಲ್ಲ: ಇವಾಂಕಾ
Team Udayavani, Nov 23, 2017, 6:00 AM IST
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ “ಅಮೆರಿಕ ಫಸ್ಟ್’ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ “ಮೇಕ್ ಇನ್ ಇಂಡಿಯಾ’ ನೀತಿ ಪರಸ್ಪರ ವೈರುಧ್ಯದ್ದಲ್ಲ ಎಂದು ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಹೇಳಿದ್ದಾರೆ.
ಹೈದರಾಬಾದ್ನಲ್ಲಿ ಜಾಗತಿಕ ಆರ್ಥಿಕ ಸಮ್ಮೇಳನಕ್ಕೆ ಮುಂದಿನ ವಾರ ಆಗಮಿಸಲಿರುವ ಇವಾಂಕಾ, ಅಮೆರಿಕ ಫಸ್ಟ್ ಎಂದರೆ ಇತರ ದೇಶಗಳನ್ನು ದೂರವಿಡುವುದು ಎಂದಲ್ಲ. ಎಲ್ಲ ದೇಶಗಳೂ ತಮ್ಮ ದೇಶದ ಪ್ರಜೆಗೆ ಪ್ರಥಮ ಆದ್ಯತೆ ನೀಡುತ್ತವೆ. ಹಾಗಂತ ಇತರ ದೇಶಗಳನ್ನು ದೂರವಿಡಲಾಗದು ಎಂದು ಹೇಳಿದ್ದಾರೆ. ಹೈದರಾಬಾದ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ರನ್ನು ಇವಾಂಕಾ ಭೇಟಿ ಮಾಡಲಿದ್ದಾರೆ. ಇದೇ ಮೊದಲ ಬಾರಿಗೆ ಈ ಸಮ್ಮೇಳನಕ್ಕೆ ಅಮೆರಿಕ ಕೂಡ ಆತಿಥ್ಯ ವಹಿಸಿದೆ. ಇದು ಭಾರತ ಮತ್ತು ಅಮೆರಿಕದ ಸುಸ್ಥಿರ ಸಂಬಂಧಕ್ಕೆ ಸಾಕ್ಷಿಯಾಗಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
VijayHazareTrophy: ಪಡಿಕ್ಕಲ್ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ
Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ
Tulu Film: ʼಮಿಡಲ್ ಕ್ಲಾಸ್ ಫ್ಯಾಮಿಲಿʼಯಿಂದ ಬಂತು ‘ಬೊಕಾ ಬೊಕಾ’ ಹಾಡು
TEENAGE: ಹುಚ್ಚುಕೋಡಿ ಮನಸ್ಸಿಗೂ ಕಡಿವಾಣ ಬೇಕಿದೆ
Ashram: ಹಿರಿಯ ಜೀವಗಳ ಶುಭಾಶೀರ್ವಾದ -ಸಾರ್ಥಕ ಭಾವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.