ಟ್ರಂಪ್… ಕೋವಿಡ್… ಗರ್ಭಪಾತ… ಭ್ರೂಣ!
Team Udayavani, Oct 10, 2020, 6:00 AM IST
ವಾಷಿಂಗ್ಟನ್: ಗರ್ಭಪಾತವನ್ನು ಹಾಗೂ ಭ್ರೂಣಾವಸ್ಥೆಯಲ್ಲಿರುವ ಜೀವಕಣಗಳ ಮೇಲಿನ ಪ್ರಯೋಗಗಳನ್ನು ಬಹಿರಂಗವಾಗಿ ವಿರೋಧಿಸುತ್ತಾ ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗರ್ಭಪಾತವಾದ ಭ್ರೂಣದಿಂದಲೇ ಜೀವ ಉಳಿಸಿಕೊಂಡಿದ್ದಾರೆ ಎಂಬ ಕುತೂಹಲಕಾರಿ ವಿಚಾರವೊಂದು ಅಮೆರಿಕದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗೆ, ಟ್ರಂಪ್ ಕೊರೊನಾದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆಗ, 1971ರಲ್ಲಿ ನೆದರ್ಲೆಂಡ್‌ನಲ್ಲಿ ಪೋಷಕರ ಆಯ್ಕೆಯಿಂದ ಗರ್ಭಪಾತಗೊಂಡಿದ್ದ ಭ್ರೂಣವೊಂದರಿಂದ ಪ್ರತ್ಯೇಕಿಸಿ ಸಂಸ್ಕರಿಸಲಾಗಿದ್ದ ಜೀವಕಣಗಳನ್ನು ಬಳಸಿ ತಯಾರಿಸಲಾಗಿದ್ದ ಔಷಧ ಒಂದನ್ನು ಟ್ರಂಪ್‌ಗೆ ನೀಡಲಾಗಿತ್ತು. ಭ್ರೂಣದ ಕಿಡ್ನಿಯಲ್ಲಿದ್ದ “ಎಚ್‌ಇಕೆ-293ಟಿ’ ಮಾದರಿಯ ಜೀವಕಣಗಳು ಅವಾಗಿದ್ದು, ಅವನ್ನು ಮೋನೋಕ್ಲೋನಲ್ ಆ್ಯಂಟಿಬಾಡಿ ಸಮ್ಮಿಶ್ರದ ಸೂತ್ರದಡಿ ಔಷಧ ರೂಪದಲ್ಲಿ ಪ್ರಯೋಗಿ ಸಲಾಗಿತ್ತು. ಸುಮಾರು 8 ಗ್ರಾಂನಷ್ಟು ಈ ಮಿಶ್ರಣ ಟ್ರಂಪ್ ದೇಹವನ್ನು ಸೇರಿದ ಮೇಲೆ ಅವರು ಚೇತರಿಸಿಕೊಂಡರು ಎನ್ನಲಾಗಿದೆ. ಇದು ಕೊರೊನಾಕ್ಕೆ ಪರಿಣಾಮಕಾರಿ ಔಷಧಯಲ್ಲ ಎಂದು ವೈದ್ಯರೇ ತಿಳಿಸಿದ್ದಾರೆ. ಆದರೆ, ಇದು ದೊಡ್ಡ ವಿವಾದವನ್ನು ಎಬ್ಬಿಸಿದೆ.
ಏಕೆ ವಿವಾದ?
ಟ್ರಂಪ್ ಹಾಗೂ ಅವರ ಬೆಂಬಲಿಗರು ಈ ವರದಿಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಅದಕ್ಕೆ ಕಾರಣಗಳೂ ಇವೆ. ಟ್ರಂಪ್ ಪಕ್ಷ ರಿಪಬ್ಲಿಕನ್, ಮೊದಲಿನಿಂದಲೂ ಗರ್ಭಪಾತ ವಿರೋಧಿ ಧೋರಣೆ ಹೊಂದಿದೆ. ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ ಗರ್ಭಪಾತ ನಿಷೇಧ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಅಲ್ಲದೆ, ಭ್ರೂಣದ ಜೀವಕಣಗಳ ಮೇಲಿನ ಸ್ಟೆಮ್ ಸೆಲ್ಸ್ ಥರೆಪಿ ಕುರಿತಾದ ಸಂಶೋಧನೆಗಳಿಗೆ ನೀಡಲಾಗುತ್ತಿದ್ದ ಸರಕಾರಿ ಅನುದಾನವನ್ನೂ ಸ್ಥಗಿತಗೊಳಿಸಿದ್ದರು. ಈಗ ಟ್ರಂಪ್ ಅವರೇ ಪ್ರಾಣಾಪಾಯದಿಂದ ಪಾರಾಗಲು ಭ್ರೂಣದಿಂದ ಪಡೆದ ಜೀವಕಣಗಳ ಔಷಧ ಪಡೆದಿದ್ದಾರೆ ಎಂಬ ವಿಚಾರ ಖುದ್ದು ಟ್ರಂಪ್ ಅವರಿಗೂ, ಅವರ ರಿಪಬ್ಲಿಕನ್ ಪಾರ್ಟಿಗೂ ಇರುಸು ಮುರುಸು ತಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
ನ.8 ರಂದು ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಸಮಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.