ಅಮೆರಿಕ ಅಧ್ಯಕ್ಷ  ಟ್ರಂಪ್‌ ಹಿಂಸಾವಾದ


Team Udayavani, Jan 27, 2017, 3:45 AM IST

26-NT-3.jpg

ವಾಷಿಂಗ್ಟನ್‌: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇಸ್ಲಾಮಿಕ್‌ ಉಗ್ರರ ವಿರುದ್ಧ ಸಮರದ ರೂಪುರೇಷೆಯನ್ನು ಮೊದಲ ಸಂದರ್ಶನದಲ್ಲಿ ಬಿಚ್ಚಿಟ್ಟಿರುವುದು ತೀವ್ರ ಸಂಚಲನ ಸೃಷ್ಟಿಸಿದೆ. “ನಾವು ಬೆಂಕಿ ವಿರುದ್ಧ ಬೆಂಕಿಯಿಂದಲೇ ಸಮರಕ್ಕಿಳಿಯುತ್ತೇವೆ. ಇಸ್ಲಾಮಿಕ್‌ ಉಗ್ರರು ಕ್ರಿಶ್ಚಿಯನ್ನರ ಶಿರಚ್ಛೇದ ಮಾಡುತ್ತಾರೆಂದರೆ, ನಾವು ನಿಷೇಧಕ್ಕೊಳಗಾಗಿರುವ ನೀರಿನಲ್ಲಿ ಮುಳುಗಿಸುವ (ವಾಟರ್‌ಬೋರ್ಡಿಂಗ್‌) ಪದ್ಧತಿ ಮರು ಜಾರಿ ತರಲೂ ಸಿದ್ಧ’ ಎಂದು ಟ್ರಂಪ್‌ ಘೋಷಿಸಿದ್ದಾರೆ.

ಮೆಸಪಟೋಮಿಯಾ ನಾಗರಿಕತೆ ಕಾಲದ ಹಮ್ಮು ರಾಬಿ ಜಾರಿಗೆ ತಂದಿದ್ದ “ಮುಯ್ಯಿಗೆ ಮುಯ್ಯಿ’ ಕಾನೂನನ್ನು ನೆನಪಿಸಿರುವ ಡೊನಾಲ್ಡ್‌ ಟ್ರಂಪ್‌, ಅಧಿಕಾರ ವಹಿಸಿಕೊಂಡ ಆರಂಭದ ದಿನದಲ್ಲೇ ತೀವ್ರ ಆತಂಕ ಸೃಷ್ಟಿಸಿದ್ದಾರೆ.

ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, “ನಾನು ಎಲ್ಲ ಶಿಕ್ಷೆಗಳನ್ನೂ ಕಾನೂನು ಚೌಕಟ್ಟಿನಲ್ಲಿಯೇ ವಿಧಿಸುತ್ತೇನೆ. ನೀರಿನಲ್ಲಿ ಮುಳುಗಿಸಿ ವಿಚಾರಣೆ ನಡೆಸುವ ಪದ್ಧತಿಯಿಂದ ಪರಿಣಾಮ ಸಿಗುವುದಾದರೆ ಪುನಃ ಅದನ್ನು ಅಳವಡಿಸುವುದರಲ್ಲಿ ತಪ್ಪೇನೂ ಇಲ್ಲ. ಮಧ್ಯಪ್ರಾಚ್ಯದಲ್ಲಿ ಇಸ್ಲಾಮಿಕ್‌ ಉಗ್ರರು ಕ್ರಿಶ್ಚಿಯನ್ನರ ಶಿರಚ್ಛೇದ ಮಾಡುತ್ತಲೇ ಬಂದಿದ್ದಾರೆ. ಇದು ಮಧ್ಯಯುಗದಿಂದಲೇ ಚಾಲ್ತಿಯಲ್ಲಿದೆ. ಆದರೆ, ಇದನ್ನು ಕಿವಿಗೆ ಹಾಕಿಕೊಂಡವರು ಕಡಿಮೆ. ನನ್ನ ಪ್ರಕಾರ ಇಂಥ ಕೃತ್ಯಕ್ಕೆ ಅಪರಾಧಿಗಳನ್ನು ನೀರಿನಲ್ಲಿ ಮುಳುಗಿಸಿ ಹಿಂಸಿಸುವ ಶಿಕ್ಷೆಯೇ ಸರಿ. ಬೆಂಕಿಯನ್ನು ಬೆಂಕಿಯಿಂದಲೇ ಎದುರಿಸಿದರಷ್ಟೇ ಫ‌ಲಿತಾಂಶ ಸಿಗುತ್ತದೆ’ ಎಂದು ಖಡಕ್ಕಾಗಿ ಹೇಳಿದ್ದಾರೆ.

“ನೀರಿನಲ್ಲಿ ಶಿಕ್ಷಿಸುವುದನ್ನು ನೀವು ಹೇಗೆ ಅರ್ಥೈಸಿಕೊಳ್ಳುತ್ತೀರೋ ತಿಳಿಯದು. ಆದರೆ, ನಾನು ಇದರಿಂದ ಫ‌ಲಿತಾಂಶ ಬಯಸುತ್ತೇನೆ. ನೀವು ನನ್ನ ಕೈಗೆ ಒಂದು ಪ್ಯಾಕ್‌ ಸಿಗರೇಟು, ಎರಡು ಬಿಯರ್‌ ಬಾಟಲಿ ನೀಡಿದರೆ ಅದರಿಂದ ಒಳ್ಳೆಯದಕ್ಕಿಂತ, ಕೆಟ್ಟ ಹಿಂಸೆಯನ್ನೇ ಚೆನ್ನಾಗಿ ಮಾಡಬಲ್ಲೆ. ನಾನು ಈ ದೇಶದಲ್ಲಿ ಪುನಃ ಉಗ್ರವಾದವನ್ನು ಬಯಸುವುದಿಲ್ಲ. ಅಮೆರಿಕವನ್ನು ಭದ್ರವಾಗಿಡುವ ಹೊಣೆ ನನ್ನದು’ ಎಂದು ಭರವಸೆ ನೀಡಿದರು.

ಅಮೆರಿಕದ ಮಿಲಿಟರಿ ಪಡೆಯಲ್ಲಿ ಈ ಹಿಂದೆ ಅಪರಾಧಿಗಳನ್ನು ಬಲವಂತವಾಗಿ ನಗ್ನಗೊಳಿಸುವುದು, ತಲೆಗೆ ಬಟ್ಟೆ ಮುಚ್ಚಿ ಥಳಿಸುವುದು, ಲೈಂಗಿಕ ಅಪಮಾನ, ನಾಯಿಯಿಂದ ಕಚ್ಚಿಸುವುದು, ವಿದ್ಯುತ್‌ ಶಾಕ್‌ ನೀಡುವುದು ಹಾಗೂ ನೀರಿನಲ್ಲಿ ಮುಳುಗಿಸಿ ವಿಚಾರಣೆ ನಡೆಸುವ ಪದ್ಧತಿಗಳು ಜಾರಿಯಲ್ಲಿದ್ದವು. ಒಬಾಮ ಅವಧಿಯಲ್ಲಿ ಇವುಗಳನ್ನು ನಿರ್ಬಂಧಿಸಲಾಗಿತ್ತು.

ಚಿಕಾಗೋ ಮಿನಿ ಅಪಾ^ನಿಸ್ಥಾನ!: ಹತ್ಯಾಕಾಂಡ ಎಂದರೆ ಜನರು ಬೆಚ್ಚಿ ಬೀಳುತ್ತಾರೆ. ಅದು ಅಲ್ಲೆಲ್ಲೋ ಅಪಾ^ನಿಸ್ಥಾನದಲ್ಲಿ ಘಟಿಸುತ್ತಿಲ್ಲ. ನಮ್ಮ ಪಕ್ಕದ ಚಿಕಾಗೋದಲ್ಲಿ ಹತ್ಯಾಕಾಂಡಗಳು ಅಪಾ^ನಿಸ್ಥಾನಕ್ಕಿಂತ ಭೀಕರವಾಗಿ ನಡೆಯುತ್ತಿವೆ. ಅದು ಯುದ್ಧಪ್ರದೇಶದ ರೀತಿಯೇ ಆಗಿ ಹೋಗಿದೆ. ಪ್ರತಿರಾತ್ರಿಯೂ ಒಂದು ಕೆಟ್ಟ ಸುದ್ದಿ ಚಿಕಾಗೋವನ್ನು ಬೆಚ್ಚಿ ಬೀಳಿಸುತ್ತದೆ’ ಎಂದು ವಲಸಿಗರಿಂದ ಆಗುತ್ತಿದೆ ಎನ್ನಲಾದ ಹಿಂಸಾಚಾರ ಕುರಿತು ಟ್ರಂಪ್‌ ಪ್ರಸ್ತಾಪಿಸಿದರು.

“ಜಗತ್ತು ಗೊಂದಲದಲ್ಲಿದೆ. ದ್ವೇಷ, ಸಿಟ್ಟಿನಿಂದಲೇ ಜಗತ್ತು ಹೀಗಾಗಿದೆ. ಸಣ್ಣಪುಟ್ಟ ದ್ವೇಷಗಳು ಇನ್ನೂ ಹೆಚ್ಚಾದರೆ, ಇಡೀ ಜಗತ್ತು ಇನ್ನೂ ಗೊಂದಲಕ್ಕೀಡಾಗುವ ಅಪಾಯವಿದೆ. ಈ ಕಾರಣ, ಯಾವ ಗೊಂದಲಕ್ಕೂ ಜಾಗ ಕೊಡದೇ ಇರುವುದೇ ಒಳ್ಳೆಯ ನಿರ್ಧಾರ’ ಎಂದು ವಲಸಿಗರ ವಿರುದ್ಧ ಕೈಗೊಂಡ ತಮ್ಮ ಕ್ರಮವನ್ನು ಟ್ರಂಪ್‌ ಸಮರ್ಥಿಸಿಕೊಂಡರು.

ಐತಿಹಾಸಿಕ ಜನಸ್ತೋಮ: “ಪದಗ್ರಹಣ ಸಮಾರಂಭ ಆಕರ್ಷಕವಾಗಿಲ್ಲವೆಂದು ಮಾಧ್ಯಮಗಳು ಬಿಂಬಿಸಿದ್ದರಲ್ಲಿ ಸುಳ್ಳುಗಳೇ ಇದ್ದವು. ಪ್ರತಿ ಚಾನೆಲ್‌ಗ‌ಳು ಇದನ್ನು ಟಿಆರ್‌ಪಿಗಾಗಿ ಪ್ರಸಾರ ಮಾಡಿದವು. ಆದರೆ, ಅವತ್ತು ಸೇರಿದ್ದ ಜನಸ್ತೋಮ ಅಮೆರಿಕದ ಇತಿಹಾಸದಲ್ಲಿ ಹಿಂದೆಂದೂ ದಾಖಲಾಗಿಲ್ಲ. ಇದಕ್ಕೆ ಪೂರಕವಾಗುವ ಫೋಟೋಗಳನ್ನು ನಾನು ಇದೇ ಮಾಧ್ಯಮಗಳಿಗೇ ನೀಡುತ್ತೇನೆ’ ಎಂದರು.

ಮೆಕ್ಸಿಕೋ ಬಳಿ ಹಣ ಪಡೆಯುತ್ತೇವೆ: ಮೆಕ್ಸಿಕೋ ಮತ್ತು ಅಮೆರಿಕ ನಡುವೆ ಗೋಡೆ ಕಟ್ಟುತ್ತೇವೆ ಎಂಬ ಡೊನಾಲ್ಡ್‌ ಟ್ರಂಪ್‌ ಅವರ ಹೇಳಿಕೆಗೆ ಅಲ್ಲಿನ ಅಧ್ಯಕ್ಷ ಪೆನಾ ನಿಯಟೋ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗೋಡೆ ಕಟ್ಟುವುದಾದರೆ ಕಟ್ಟಲಿ, ಆದರೆ ನಾವಂತೂ ಹಣ ಕೊಡುವುದಿಲ್ಲ ಎಂದಿದ್ದಾರೆ. ಇದಕ್ಕೆ ಅಷ್ಟೇ ವೇಗದಲ್ಲಿ ಪ್ರತಿಕ್ರಿಯೆ ನೀಡಿರುವ ಟ್ರಂಪ್‌, ಅವರು ಹೇಗೆ ಹಣ ಕೊಡುವುದಿಲ್ಲವೋ ನಾವು ನೋಡುತ್ತೇವೆ. ಅಲ್ಲಿ ಗೋಡೆ ಕಟ್ಟಲು ನಮ್ಮ ತೆರಿಗೆದಾರರ ಹಣ ಪೋಲು ಮಾಡುವುದಿಲ್ಲ. ಈಗ ಕಟ್ಟಿ ಮುಂದೆ ಹಣ ವಸೂಲು ಮಾಡುತ್ತೇವೆ ಎಂದಿದ್ದಾರೆ.

ಈ ಮಧ್ಯೆ, ಎರಡೂ ದೇಶಗಳ ಸಂಬಂಧ ಹದಗೆಡುವ ಮುನ್ಸೂಚನೆ ಸಿಕ್ಕಿದ್ದು, ಮುಂದಿನ ವಾರದ ಅಮೆರಿಕ ಪ್ರವಾಸದ ಬಗ್ಗೆ ಮರುಪರಿಶೀಲನೆ ಮಾಡುವುದಾಗಿ ನಿಯಟೋ ಹೇಳಿದ್ದಾರೆ.

ಟಾಪ್ ನ್ಯೂಸ್

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

1-lasike

Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.