Donald Trump ರಿಪಬ್ಲಿಕ್‌ನ ಅಧಿಕೃತ ಅಧ್ಯಕ್ಷ ಅಭ್ಯರ್ಥಿ
Team Udayavani, Jul 17, 2024, 12:14 AM IST
ಮಿಲ್ವಾಕೀ: ಹತ್ಯೆ ಸಂಚಿನಿಂದ ಪಾರಾಗಿ ಮರುಜನ್ಮ ಪಡೆದ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಬಲಕಿವಿಗೆ ಬ್ಯಾಂಡೇಜ್ ಧರಿಸಿಯೇ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಂಡರು. ಈ ಸಮಾವೇಶದಲ್ಲಿ ಸೇರಿದ್ದ ಪ್ರತಿನಿಧಿಗಳು ಟ್ರಂಪ್‌ರನ್ನು ನವೆಂಬರ್ 5ರ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಿದರು. ಇದಕ್ಕೆ ಪ್ರತಿಯಾಗಿ ಗುರುವಾರ ಟ್ರಂಪ್ ಅವರು ಸ್ವೀಕಾರ ಭಾಷಣ ಮಾಡಲಿದ್ದಾರೆ.
ಅಭ್ಯರ್ಥಿಯೆಂದು ಅಧಿಕೃತ ಘೋಷಣೆಗೆ 2 ದಿನಗಳಿರುವಂತೆಯೇ ಅಂದರೆ ರವಿವಾರ ಫಿಲಡೆಲ್ಫಿಯಾದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಅದೃಷ್ಟವಶಾತ್ ಅವರು ಕೂದಲೆಳೆ ಅಂತರದಿಂದ ಪಾರಾಗಿದ್ದರು.
ಗುಂಡಿನ ದಾಳಿ ಬಳಿಕ ಚೇತರಿಸಿಕೊಂಡಿರುವ ಟ್ರಂಪ್ ಅವರು ತಮ್ಮ ಕೈಯನ್ನು ಮುಷ್ಟಿ ಮಾಡಿ, ಹೋರಾಟದ ಸಂಕೇತವನ್ನು ತೋರಿಸುತ್ತಾ ಸೋಮವಾರ ಸಮಾವೇಶದ ಹಾಲ್‌ನೊಳಗೆ ಪ್ರವೇಶಿಸು ತ್ತಿದ್ದಂತೆ, ಅಲ್ಲಿ ಸೇರಿದ್ದ ಜನಸಮೂಹದ ಕರತಾಡನ ಮುಗಿಲುಮುಟ್ಟಿತ್ತು. ಸಭಾಂಗಣದಲ್ಲಿ ನೆರೆದಿದ್ದ ಸಾವಿರಾರು ರಿಪಬ್ಲಿಕನ್ ಪ್ರತಿನಿಧಿಗಳು, ಬೆಂಬಲಿಗರು ಹಾಗೂ ಸದಸ್ಯರು “ಫೈಟ್’ (ಹೋರಾಟ) ಎಂಬ ಘೋಷಣೆಗಳನ್ನು ಕೂಗಿದರು.
ಇನ್ನು, ಮುಂದಿನ ತಿಂಗಳು ಶಿಕಾಗೋದಲ್ಲಿ ನಡೆಯಲಿರುವ ಡೆಮಾಕ್ರಾಟ್ ಪಕ್ಷದ ಸಮಾವೇಶದಲ್ಲಿ ಆ ಪಕ್ಷದ ಪ್ರತಿನಿಧಿಗಳು ಹಾಲಿ ಅಧ್ಯಕ್ಷ ಬೈಡೆನ್‌ರನ್ನು ಡೆಮಾಕ್ರಾಟ್ ಅಭ್ಯರ್ಥಿ ಎಂದು ಘೋಷಿಸಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.