ಒಬಾಮಾಕೇರ್‌ಗೆ ಸೋತ ಟ್ರಂಪ್
Team Udayavani, Mar 26, 2017, 3:50 AM IST
ವಾಷಿಂಗ್ಟನ್: ಹೊಸ ಮಾದರಿಯ ವಲಸೆ ನೀತಿ ಜಾರಿಗೆ ತರಲು ಮುಖಭಂಗಕ್ಕೆ ಒಳಗಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮತ್ತೂಂದು ಹಿನ್ನಡೆ ಉಂಟಾಗಿದೆ. ನಿಕಟಪೂರ್ವ ಅಧ್ಯಕ್ಷ ಬರಾಕ್ ಒಬಾಮಾ ಜಾರಿಗೆ ತಂದಿದ್ದ “ಒಬಾಮಾ ಕೇರ್’ ಆರೋಗ್ಯ ವಿಮೆಗೆ ಪರ್ಯಾಯವಾಗಿ ಜಾರಿಗೊಳಿಸಲು ಉದ್ದೇಶಿಸಿದ್ದ ವಿಧೇಯಕವನ್ನು ಅಲ್ಲಿನ ಸಂಸತ್‌ನಿಂದ ರಿಪಬ್ಲಿಕನ್ನರು ಹಿಂಪಡೆಯುವಂತಾಗಿದೆ.
ರಿಪಬ್ಲಿಕನ್ ಸಂಸದರೇ ಬಹುಮತದಲ್ಲಿರುವ ಹೌಸ್ ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ (ಅಮೆರಿಕ ಸಂಸತ್‌ನ ಕೆಳಮನೆ) ಹಾಲಿ ಸರಕಾರದ ಮಂಡಿಸಲು ಉದ್ದೇಶಿಸಿದ್ದ ವಿಧೇಯಕದ ಪರವಾಗಿ ಹೆಚ್ಚಿನ ಬೆಂಬಲ ಗಳಿಸಲು ಸ್ಪೀಕರ್ ಪೌಲ್ ರೆಯಾನ್ ವಿಫಲರಾಗಿದ್ದಾರೆ. ರಿಪಬ್ಲಿಕನ್ ಪಕ್ಷದವರೇ ಹುಟ್ಟು ಹಾಕಿರುವ “ಫ್ರೀಡಂ ಕೋಕಸ್’ ಎಂಬ ಬಣದಿಂದ ಸರಕಾರದ ಉದ್ದೇಶಕ್ಕೆ ಪ್ರಬಲ ವಿರೋಧ ವ್ಯಕ್ತವಾಯಿತು. ಒಟ್ಟು 415 ಸದಸ್ಯ ಬಲದ ಕೆಳಮನೆಯಲ್ಲಿ ವಿಧೇಯಕದ ಪರವಾಗಿ 215 ಮತಗಳನ್ನು ಕಲೆಹಾಕಲು ಮಾತ್ರ ಸ್ಪೀಕರ್ ಶಕ್ತರಾದರು. ಹೀಗಾಗಿ ಹೀನಾಯ ಸೋಲು ಟ್ರಂಪ್ ಸರಕಾರಕ್ಕೆ ತಪ್ಪಿದೆ.
ಇದರಿಂದ ಕ್ರುದ್ಧಗೊಂಡ ಟ್ರಂಪ್ “ಅಮೆರಿಕದವರೇ ನಿಮಗೆ ಇನ್ನಷ್ಟು ಕೆಟ್ಟ ದಿನಗಳು ಬರಲಿವೆ’ ಎಂದು ಹೇಳಿದ್ದಾರೆ. ಆರೋಗ್ಯ ವಿಮೆಯ ಪ್ರೀಮಿಯಂನ ಕಂತುಗಳಲ್ಲಿ ಭಾರಿ ಪ್ರಮಾಣದಲ್ಲಿ ಹಚ್ಚಳವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಒಬಾಮಾ ಕೇರ್ ಅನ್ನು ವಜಾ ಮಾಡುವ ವಾಗ್ಧಾನದ ಹಿನ್ನೆಲೆಯಲ್ಲಿಯೇ ಡೊನಾಲ್ಡ್ ಟ್ರಂಪ್‌ರ ರಿಪಬ್ಲಿಕನ್ ಪಕ್ಷಕ್ಕೆ ಅಧಿಕಾರಕ್ಕೇರಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.