ಚೀನ – ಅಮೆರಿಕ ಸುಂಕ ಸಮರ ನಿಲ್ಲಲು ಬೇಕು ವರ್ಷದ ಅವಧಿ
Team Udayavani, Dec 5, 2019, 7:41 AM IST
ಲಂಡನ್/ವಾಷಿಂಗ್ಟನ್: ವಿಶ್ವದ ಅರ್ಥ ವ್ಯವಸ್ಥೆಯ ಮೇಲೆ ಕರಾಳ ಛಾಯೆ ಮೂಡಿಸಿರುವ ಅಮೆರಿಕ ಮತ್ತು ಚೀನ ನಡುವಿನ ಸುಂಕ ಸಮರ ನಿಲ್ಲಲು 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆವರೆಗೆ ಕಾಯಲೇಬೇಕು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಲಂಡನ್‌ನಲ್ಲಿ ಈ ಮಾಹಿತಿ ನೀಡಿದ್ದಾರೆ.
ಹೀಗಾಗಿ ಮುಂದಿನ ವಾರದಲ್ಲಿ ಸುಂಕ ಹೇರಿಕೆ ಬಗ್ಗೆ ಮೊದಲ ಹಂತದ ಮಾತುಕತೆ ನಡೆದು ವಿವಾದ ಮುಕ್ತಾಯವಾಗಲಿದೆ ಎಂಬ ನಿರೀಕ್ಷೆ ಸುಳ್ಳಾಗಿದೆ. ‘ವಿವಾದ ಪರಿಹಾರಕ್ಕೆ ಗಡುವು ವಿಧಿಸಿಕೊಂಡಿಲ್ಲ. 2020ರಲ್ಲಿ ನಡೆಯುವ ಚುನಾವಣೆ ಮುಕ್ತಾಯವಾಗಲಿ’ ಎಂದು ಹೇಳಿದ್ದಾರೆ. ಸದ್ಯದ ಗಡುವಿನ ಪ್ರಕಾರ ಡಿ. 15ರ ಒಳಗಾಗಿ ಮೊದಲ ಹಂತದ ಮಾತುಕತೆ ನಡೆಯಬೇಕಾಗಿತ್ತು.
ಸಾಕ್ಷ್ಯವೇ ಸಿಕ್ಕಿಲ್ಲ: ಮತ್ತೂಂದು ಬೆಳವಣಿಗೆಯಲ್ಲಿ ಅಧ್ಯಕ್ಷ ಟ್ರಂಪ್ ವಿರುದ್ಧ ನಡೆಯುತ್ತಿರುವ ಮಹಾಭಿಯೋಗ ಪ್ರಕ್ರಿಯೆಗೆ ಸಂಬಂಧಿಸಿ ಅಮೆರಿಕ ಸಂಸತ್ ನೀಡಿದ ವರದಿಯನ್ನು ಶ್ವೇತ ಭವನ ತಿರಸ್ಕರಿಸಿದೆ.
ಅಧ್ಯಕ್ಷರು ತಪ್ಪು ಮಾಡಿದ್ದಾರೆ ಎಂಬ ಬಗ್ಗೆ ಯಾವುದೇ ಸಾಕ್ಷ್ಯಗಳು ಇಲ್ಲವೆಂದು ಅದು ಹೇಳಿದೆ. ಡೆಮಕ್ರಾಟ್ ಸಂಸದರು ಮತ್ತು ಸೆನೆಟ್‌ನ ನ್ಯಾಯಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷ ಆ್ಯಡಮ್ ಸ್ಕಿಫ್ ಅಧ್ಯಕ್ಷರ ವಿರುದ್ಧದ ಆರೋಪ ಸಾಬೀತು ಮಾಡುವಲ್ಲಿ ವಿಫಲರಾಗಿದ್ದಾರೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀಲಿ ಚಿತ್ರ ತಾರೆಗೆ ಲಂಚ: ಅಧಿಕಾರಕ್ಕೆ ಮೊದಲೇ ಟ್ರಂಪ್ ಕೇಸಿನ ತೀರ್ಪು
House Of Representatives: ಈ ಬಾರಿ ಅಮೆರಿಕ ಸಂಸತ್ತಲ್ಲಿ ಗರಿಷ್ಠ ಸಂಖ್ಯೆ ಹಿಂದುಗಳು!
HMPV; ಚಳಿಗಾಲದಲ್ಲಿ ಸೋಂಕು ಸಾಮಾನ್ಯ: ಗಾಬರಿ ಬೇಡ ಎಂದ ಚೀನ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.