ಹಲವೆಡೆ ಟ್ರಂಪ್‌ ಬೆಂಬಲಿಗರ ರಂಪಾಟ

ಅಮೆರಿಕದ ಅರಿಜೋನಾ ಮತ ಎಣಿಕೆ ಕೇಂದ್ರಕ್ಕೆ ಮುತ್ತಿಗೆ ; ಶಸ್ತ್ರಸಜ್ಜಿತ ಟ್ರಂಪ್‌ ಬೆಂಬಲಿಗರಿಂದ ದಾಂಧಲೆ

Team Udayavani, Nov 6, 2020, 1:19 AM IST

usa

ವಾಷಿಂಗ್ಟನ್‌: ಅಧ್ಯಕ್ಷೀಯ ಚುನಾವಣೆಯ ನಿಖರ ಫ‌ಲಿತಾಂಶಕ್ಕಾಗಿ ಇಡೀ ಜಗತ್ತೇ ಕುತೂಹಲದಿಂದ ಕಾಯುತ್ತಿರುವಾಗಲೇ, ಅಮೆರಿಕದಲ್ಲಿ ಹಿಂಸಾಚಾರ ಭುಗಿಲೇಳುವ ಲಕ್ಷಣಗಳು ಗೋಚರಿಸತೊಡಗಿವೆ.

ಫ‌ಲಿತಾಂಶವು ಡೆಮಾಕ್ರಾಟ್‌ ಅಭ್ಯರ್ಥಿ ಜೋ ಬೈಡೆನ್‌ ಪರ ವಾಲುತ್ತಲೇ, ಅಧಿಕಾರದ ಗದ್ದುಗೆಯನ್ನು ಬಿಟ್ಟು ಕೊಡಲು ಸಿದ್ಧರಿಲ್ಲದ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಚುನಾ ವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಈಗಾ ಗಲೇ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಅಲ್ಲದೆ, “STOP THE COUNT’ (ಎಣಿಕೆ ನಿಲ್ಲಿಸಿ) ಎಂದು ಗುರುವಾರ ಟ್ವೀಟ್‌ ಕೂಡ ಮಾಡಿದ್ದಾರೆ. ಇದಾದ ಬೆನ್ನಲ್ಲೇ ಟ್ರಂಪ್‌ ಅವರ ಭಾರೀ ಸಂಖ್ಯೆಯ ಬೆಂಬಲಿಗರು, ಶಸ್ತ್ರಸಜ್ಜಿತ ರಾಗಿ ಬೀದಿಗಿಳಿದಿದ್ದಾರೆ. ಅರಿಜೋನಾದ ಮತ ಎಣಿಕೆ ಕೇಂದ್ರ ಗಳಿಗೆ ಮುತ್ತಿಗೆ ಹಾಕಿರುವ ಪ್ರತಿಭಟನಕಾರರು, ಎಣಿಕೆ ನಿಲ್ಲಿಸುವಂತೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ, ಏಕಾಏಕಿ ಅರಿಜೋನಾ ಮತ ಎಣಿಕೆ ಕೇಂದ್ರವನ್ನೇ ಮುಚ್ಚಲಾಗಿದೆ.

ಹಲವು ಪ್ರಮುಖ ಪ್ರಾಂತ್ಯ ಗಳಲ್ಲಿ ಇನ್ನೂ ಮತ ಎಣಿಕೆ ಮುಗಿದಿಲ್ಲ. ಅರಿ ಜೋನಾದಲ್ಲಿ ಬೈಡೆನ್‌ ಅವರು ಮುನ್ನಡೆ ಸಾಧಿ ಸಿ ದ್ದು, ಟ್ರಂಪ್‌ ಬೆಂಬಲಿಗರನ್ನು ಕೆರಳಿ ಸಿದೆ. ಎಣಿಕೆ ಕೇಂದ್ರದ ಹೊರಗೆ ಪ್ರತಿಭಟ ನಕಾರರು ಪೊಲೀಸರೊಂದಿಗೆ ಘರ್ಷಣೆಗಿಳಿ ದಿದ್ದಾರೆ. ಕೆಲವರು ಕೇಂದ್ರ ದೊಳಕ್ಕೆ ನುಗ್ಗು ವಲ್ಲಿ ಯಶಸ್ವಿಯಾಗು ತ್ತಿದ್ದಂತೆ, ಕೇಂದ್ರವನ್ನೇ ಮುಚ್ಚಲಾಗಿದೆ. ಈ ಎಲ್ಲ ಬೆಳವಣಿಗೆಗಳು ಅಮೆರಿಕ ನ್ನರನ್ನು ಆತಂಕಕ್ಕೆ ನೂಕಿದೆ.

ಘೋಷಣೆ ಕೂಗಿದ ಪ್ರತಿಭಟನ ಕಾರರು: ಮೇರಿ ಕೋಪಾ ಕೌಂಟ್‌ ಸೆಂಟರ್‌ ಹೊರಗಡೆ ಜಮಾಯಿಸಿದ ಪ್ರತಿ ಭಟನಕಾರರು, “ಇದೊಂದು ಅಕ್ರಮ ಚುನಾವಣೆ’ ಎಂದು ಘೋಷಣೆ ಕೂಗಿರುವ ವೀಡಿಯೋ ಬಹಿರಂಗ ಗೊಂ ಡಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಅರಿ ಜೋನಾ ಸಚಿವೆ ಕ್ಯಾಟಿ ಹೋಬ್ಸ್, “ಪ್ರತಿಭಟನಕಾರರು ಏನನ್ನು ಸಾಧಿಸಲು ಹೊರಟಿ ದ್ದಾರೆ ಎಂಬುದೇ ಅರ್ಥ ವಾಗುತ್ತಿಲ್ಲ. ನಾವು ಮತ ಎಣಿಕೆ ಮುಂದುವರಿಸುತ್ತೇವೆ. ಎಣಿ ಕೆಯು ನ್ಯಾಯಯುತವಾಗಿಯೇ ಸಾಗುತ್ತಿದೆ’ ಎಂದಿದ್ದಾರೆ.

ಹಲವರ ಬಂಧನ: ಮಿನ್ನೆಪೊಲೀಸ್‌, ಮಿನ್ನೆಸೋಟಾದಲ್ಲಿ ಹೆದ್ದಾರಿ ತಡೆಯಲು ಪ್ರತಿಭಟನಕಾರರು ಯತ್ನಿಸಿದ್ದು, ಹಲವಾರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಟ್ರಂಪ್‌ ಹಾಗೂ ಬೈಡೆನ್‌ ಇಬ್ಬರು ಅಭ್ಯರ್ಥಿಗಳ ಬಗ್ಗೆಯೂ ನಮಗೆ ಅಸಮಾಧಾನವಿದ್ದು, ದೇಶದಲ್ಲಿ ಹೊಸ ರಾಜಕೀಯ ವ್ಯವಸ್ಥೆ ಜಾರಿಯಾಗಬೇಕು ಎಂದು ಆಗ್ರಹಿಸಿ ಬೋಸ್ಟನ್‌, ಮಸ್ಸಾಚ್ಯುಸೆಟ್ಸ್‌ನಲ್ಲಿ ಕೂಡ ಭಾರೀ ಪ್ರತಿಭಟನೆ ನಡೆದಿದೆ. ಈ ನಡುವೆ, ನ್ಯೂಯಾರ್ಕ್‌ನಲ್ಲಿ ಪೊಲೀಸ್‌ ಅಧಿಕಾರಿ ಯೊಬ್ಬರನ್ನು ಅವಹೇಳನ ಮಾಡಿ, ಅವರ ಮೇಲೆ ಉಗುಳಿರುವ ಬೈಡೆನ್‌ ಅಭಿಮಾನಿ, ಭಾರತೀಯ ಮೂಲದ ಡ್ಯಾವಿನಾ ಸಿಂಗ್‌ ಎಂಬಾಕೆ ಯನ್ನು ಪೊಲೀಸರು ಬಂಧಿಸಿದ್ದಾರೆ.

ಕಮಲಾ ತವರೂರಿನಲ್ಲಿ ಮೊಳಗಿದ ಪ್ರಾರ್ಥನೆ
ಅಮೆರಿಕ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡೆಮಾಕ್ರಾಟಿಕ್‌ ಪಕ್ಷದ ಕಮಲಾ ಹ್ಯಾರೀಸ್‌ ಗೆದ್ದುಬರಲೆಂದು ಹಾರೈಸಿ, ತವರೂರಿನ ದೇಗುಲದಲ್ಲಿ ಗುರುವಾರವಿಡೀ ಪ್ರಾರ್ಥನೆಗಳು ಮೊಳಗಿದ್ದವು. ಕಮಲಾರ ತಾಯಿ ಪೂರ್ವಜರ ಊರಾದ ತಿರುವರೂರು ಜಿಲ್ಲೆಯ ತುಳಸೇಂದ್ರಪುರಂನ ದೇವಸ್ಥಾನದಲ್ಲಿ ಊರ ಮಗಳ ಗೆಲುವಿಗೆ ಹಾರೈಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಅಲ್ಲದೆ, ಊರಿನ ರಸ್ತೆಗಳಲ್ಲಿ ಬಣ್ಣಬಣ್ಣದ ರಂಗೋಲಿ ಪುಡಿಗಳಿಂದ “ಕಮಲಾ ಹ್ಯಾರೀಸ್‌ಗೆ ಶುಭ ಹಾರೈಸೋಣ’ ಎಂಬ ಸಾಲುಗಳು ಕಳೆಗಟ್ಟಿದ್ದವು. ಕಮಲಾರ ತಾತ ಪಿ.ವಿ. ಗೋಪಾಲನ್‌ ತುಳಸೇಂದ್ರಪುರದವರು. “ನಾನು ಐದನೇ ವಯಸ್ಸಿನಲ್ಲಿ ಹುಟ್ಟೂರಿಗೆ ತೆರಳಿದ್ದೆ. ಮದ್ರಾಸಿನ ಬೀಚ್‌ಗಳಲ್ಲಿ ತಾತನ ಕೈಕೈಹಿಡಿದು ವಿಹರಿಸುತ್ತಿದ್ದೆ’ ಎಂದು ಚುನಾವಣೆ ಪೂರ್ವದಲ್ಲಿ ಕಮಲಾ ಸ್ಮರಿಸಿದ್ದು, ಊರಿನವರ ಹೃದಯದಲ್ಲಿ ಹಸುರಾಗಿದೆ. ಕಮಲಾ ತಾಯಿ ಶ್ಯಾಮಲಾ ಉನ್ನತ ಶಿಕ್ಷಣಕ್ಕಾಗಿ ಅಮೆರಿಕ ಸೇರಿ, ಜಮೈಕಾ ಮೂಲದ ಡೊನಾಲ್ಡ್‌ ಹ್ಯಾರಿಸ್‌ರನ್ನು ವರಿಸಿ ಅಲ್ಲಿಯೇ ನೆಲೆಸಿದ್ದರು.

ಟ್ರಂಪ್‌ ಪಾರು ಮಾಡಲು ಬಂದ ದೇವದೂತರು!
ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ರನ್ನು ಸೋಲಿನ ದವಡೆಯಿಂದ ಪಾರು ಮಾಡಲು ದೇವದೂತರು ಆಫ್ರಿಕಾದಿಂದ ಅಮೆರಿಕದತ್ತ ಧಾವಿಸುತ್ತಿದ್ದಾರೆ! ಹೀಗೆ ಹೇಳಿ, ಟ್ರಂಪ್‌ರನ್ನು ಸಂತೈಸುತ್ತಿರುವುದು ಅವರ ಅಧ್ಯಾತ್ಮಿಕ ಸಲಹೆಗಾರ್ತಿ ಪೌಲಾ ವೈಟ್‌! ಟ್ರಂಪ್‌ ಮತ್ತೆ ಗದ್ದುಗೆಗೇರುವ ಸಲುವಾಗಿ ಈಕೆ ನಡೆಸಿದ ಪ್ರಾರ್ಥನೆ ಭಾರೀ ವೈರಲ್‌ ಆಗಿದೆ. “ನಾನು ವಿಜಯದ ಸದ್ದನ್ನು ಕೇಳುತ್ತಿದ್ದೇನೆ. ದೇವರೇ ಹೇಳಿದ್ದಾನೆ, ಆ ಗೆಲುವು ಈಗಾಗಲೇ ಘಟಿಸಿದೆ. ರಿಪಬ್ಲಿಕನ್‌ಗೆ ಸೋಲುಣಿಸಲು ರಕ್ಕಸಕೂಟಗಳು ಹೋರಾಡುತ್ತಿವೆ. ಆದರೆ, ಟ್ರಂಪ್‌ರನ್ನು ಗೆಲ್ಲಿಸುವುದಕ್ಕಾಗಿಯೇ ಆಫ್ರಿಕದಿಂದ ಯೇಸುವಿನ ದೇವದೂತರು ಇಲ್ಲಿಗೆ ಆಗಮಿಸುತ್ತಿದ್ದಾರೆ’ ಎಂಬ ಈಕೆಯ ಹೇಳಿಕೆ ಸಿಕ್ಕಾಪಟ್ಟೆ ಸುದ್ದಿಮಾಡಿದೆ. ನೆಟ್ಟಿಗರು ಇದೊಂದು “ಅರ್ಥಹೀನ ಪ್ರಾರ್ಥನೆ’ ಎಂದು ಟೀಕಿಸುತ್ತಿದ್ದಾರೆ.

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

1-USAA

America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್‌

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.