45ನೇ ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರ ಸ್ವೀಕಾರ
Team Udayavani, Jan 21, 2017, 3:45 AM IST
ವಾಷಿಂಗ್ಟನ್: ಅಮೆರಿಕದ 45ನೇ ಅಧ್ಯಕ್ಷರಾಗಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಅಬ್ರಹಾಂ ಲಿಂಕನ್ ಅಧಿಕಾರ ಚುಕ್ಕಾಣಿ ಹಿಡಿಯುವಾಗ ಬಳಸಿದ ಬೈಬಲ್, ಶಾಲಾ ದಿನಗಳಲ್ಲಿ ತಾಯಿ ನೀಡಿದ ಬೈಬಲ್‌ಗಳನ್ನು ಟ್ರಂಪ್ ತಮ್ಮ ಪ್ರಮಾಣ ವಚನಕ್ಕೆ ಬಳಸಿದರು.
ಅಮೆರಿಕ ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮ, ಮಾಜಿ ಅಧ್ಯಕ್ಷರಾದ ಜಾರ್ಜ್ ಡಬ್ಲ್ಯು ಬುಷ್, ಬಿಲ್ ಕ್ಲಿಂಟನ್, ಅಮೆರಿಕದ ಮಾಜಿ ಪ್ರಥಮ ಮಹಿಳೆಯರಾದ ಮಿಶೆಲ್ ಒಬಾಮ, ಲಾರಾ ಬುಷ್, ಹಿಲರಿ ಕ್ಲಿಂಟನ್ ಸೇರಿದಂತೆ ಗಣ್ಯಾತಿಗಣ್ಯರು ಹಾಜರಿದ್ದರು.
ಡ್ರಾಕುನ್‌ಕುಲಿಯಾಸಿಸ್ ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿಧಿರುವ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ತಮ್ಮ ಪತ್ನಿ ರೋಜರ್ ಕಾರ್ಟರ್ ಜೊತೆಗೂಡಿ ಟ್ರಂಪ್‌ಗೆ ಶುಭಾಶಯ ಕೋರಿ, ಆಕರ್ಷಣೆಗೆ ಕಾರಣರಾದರು. ಮತ್ತೂಬ್ಬ ಮಾಜಿ ಅಧ್ಯಕ್ಷ ಜಾರ್ಜ್ ಎಚ್ ಡಬ್ಲ್ಯು ಬುಷ್ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಸಮಾರಂಭಕ್ಕೆ ಆಗಮಿಸಿರಲಿಲ್ಲ. ವಾಷಿಂಗ್ಟನ್ ಡಿಸಿಯ ಪಶ್ಚಿಮ ಭಾಗದಲ್ಲಿ ನಿರ್ಮಿಸಿದ್ದ ವಿಶಾಲ ವೇದಿಕೆಯಲ್ಲಿ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದರು. ಸಮಾರಂಭದಲ್ಲಿ ಸುಮಾರು 9 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
ಮತದಾರರಿಗೆ ಅಭಿನಂದನೆ: ಅಧಿಕಾರ ಚುಕ್ಕಾಣಿ ಹಿಡಿಯಲು ನೆರವಾದ ಮತದಾರರಿಗೆ ಅಭಿನಂದನೆ ಸಲ್ಲಿಸಿದ ಡೊನಾಲ್ಡ್ ಟ್ರಂಪ್, “ಮುಂದಿನ ದಿನಗಳಲ್ಲಿ ಅಮೆರಿಕ ಇನ್ನಷ್ಟು ಅಭಿವೃದ್ಧಿ ಕಾಣಲಿದೆ. ಈ ದೇಶವನ್ನು ಪುನಃ ಹೊಸ ಎತ್ತರಕ್ಕೆ ಕೊಂಡೊಯ್ಯೋಣ’ ಎಂದು ಹೇಳಿದರು.
ಚುಟುಕು ಪೆರೇಡ್: ಪದಗ್ರಹಣ ಸಮಾರಂಭದ ವೇಳೆ ನಡೆದ ಪೆರೇಡ್ ಅನ್ನು 90 ನಿಮಿಷಕ್ಕೆ ಸೀಮಿತಗೊಳಿಸಲಾಗಿತ್ತು. ಇದು ಇತ್ತೀಚಿನ ವರ್ಷಗಳಲ್ಲಿ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದ ಅತ್ಯಂತ ಕಡಿಮೆ ಅವಧಿಯ ಪೆರೇಡ್ ಎಂಬ ದಾಖಲೆಯನ್ನೂ ಬರೆಯಿತು. ಸಮಾರಂಭದ ಬಳಿಕ ನಡೆದ ಔತಣಕೂಟದಲ್ಲಿ ಅಮೆರಿಕದ ಸೆನೆಟ್‌ಗೆ ಆರಿಸಿಬಂದ ಸಂಸದರು, ಗಣ್ಯರೊಂದಿಗೆ ಟ್ರಂಪ್ ಔತಣಕೂಟದಲ್ಲಿ ಪಾಲ್ಗೊಂಡರು.
ತಟ್ಟದ ಪ್ರತಿಭಟನೆಯ ಬಿಸಿ: ಟ್ರಂಪ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಬಂದಿದ್ದ 10 ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ವೇದಿಕೆ ಸಮೀಪದಲ್ಲಿ 20 ಚೆಕ್‌ಪೋಸ್ಟ್ ನಿರ್ಮಿಸಿದ್ದರಿಂದ ಪ್ರತಿಭಟನಾಕಾರರಿಗೆ ಒಳಪ್ರವೇಶಿಸಲು ಸಾಧ್ಯವಾಗಲಿಲ್ಲ. “ಟ್ರಂಪ್ ಅಸಹಜ ಆಯ್ಕೆ, ಜನಾಂಗೀಯ ನಿಂದನೆಯ ಆರೋಪ ಹೊತ್ತವರು, ಮಹಿಳಾ ವಿರೋಧಿ, ವಲಸಿಗರ ದ್ವೇಷಿ’ ಮುಂತಾದ ಫಲಕಗಳು ಎಲ್ಲೆಡೆ ರಾರಾಜಿಸಿದ್ದವು. ಇದರಲ್ಲಿ ಹೆಚ್ಚಿನ ಜನ ಮೆಕ್ಸಿಕೋ ಪ್ರಜೆಗಳೇ ಇದ್ದರು.
ಥ್ಯಾಂಕ್ಯು ಅಮೆರಿಕ: ಒಬಾಮ ಕೊನೆಯ ಪತ್ರ
ವಾಷಿಂಗ್ಟನ್: ಈ ಎಂಟು ವರ್ಷದ ಅಧಿಕಾರಾವಧಿಯಲ್ಲಿ ನನ್ನನ್ನು ಒಳ್ಳೆಯ ಅಧ್ಯಕ್ಷನನ್ನಾಗಿ ಮಾಡಿದ್ದಕ್ಕೆ, ಒಳ್ಳೆಯ ಮನುಷ್ಯನನ್ನಾಗಿ ರೂಪಿಸಿದ್ದಕ್ಕೆ ಒಬಾಮ ಅಮೆರಿಕದ ಪ್ರಜೆಗಳಿಗೆ ಧನ್ಯವಾದ ಸಮರ್ಪಿಸಿದ್ದಾರೆ. 44ನೇ ನಿರ್ಗಮಿತ ಅಧ್ಯಕ್ಷ ಶ್ವೇತ ಭವನ ತೊರೆಯುವ ಮುನ್ನ ದೇಶದ ಪ್ರಜೆಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ. “ನನ್ನ ಪ್ರತಿ ಹೆಜ್ಜೆಯಲ್ಲೂ ನೀವು ಭರವಸೆ ತುಂಬಿದ್ದೀರಿ. ಕೆಲವೊಮ್ಮೆ ನನ್ನ ಸಾಮರ್ಥಯ ಕುಸಿದಾಗ ಬೇಗನೆ ಚೇತರಿಸಿಕೊಳ್ಳಲು ಚೈತನ್ಯ ತುಂಬಿದ್ದೀರಿ’ ಎಂದಿದ್ದಾರೆ. “ನಾನು ನಿಮ್ಮಿಂದ ಹೆಚ್ಚು ಕಲಿತಿದ್ದೇನೆ. ದೇಶದ ಯುವ ಪದವೀಧರರು, ಸೇನಾಧಿಕಾರಿಗಳು ನನಗೆ ಭರವಸೆ ತುಂಬಿದರು.
ಒಬಾಮ ಔಟ್, ಮೋದಿ ಸಾಮಾಜಿಕ ತಾಣದ ಕಿಂಗ್!
ನವದೆಹಲಿ: ಶ್ವೇತಭವನದಿಂದ ಬರಾಕ್ ಒಬಾಮ ನಿರ್ಗಮನರಾಗುತ್ತಿದ್ದಂತೆ, ಇತ್ತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದೃಷ್ಟ ಖುಲಾಯಿಸಿದೆ. ಅಧಿಕಾರದ ಚುಕ್ಕಾಣಿ ಹಿಡಿದಿದ್ದ ನಾಯಕರಲ್ಲಿ ಒಬಾಮ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಅನುಯಾಯಿ ಗಳನ್ನು ಹೊಂದಿದ್ದರು. ಒಬಾಮ ಅಧಿಕಾರ ಕಳೆದುಕೊಂಡ ಮೇಲೆ ಮೋದಿ ಈಗ “ಸೋಷಿಯಲ್ ಮೀಡಿಯಾ ಕಿಂಗ್’ ಎನಿಸಿಕೊಂಡಿದ್ದಾರೆ. ಪ್ರಸ್ತುತ ಮೋದಿಗೆ ಟ್ವಿಟ್ಟರಿನಲ್ಲಿ 26.5 ದಶಲಕ್ಷ, ಫೇಸ್‌ಬುಕ್‌ನಲ್ಲಿ 39.2 ದಶಲಕ್ಷ, ಗೂಗಲ್ ಪ್ಲಸ್‌ನಲ್ಲಿ 3.2 ದಶಲಕ್ಷ, ಲಿಂಕಿxನ್‌ನಲ್ಲಿ 1.99 ದಶಲಕ್ಷ, ಇನ್‌ಸ್ಟಗ್ರಾಮ್‌ನಲ್ಲಿ 5.8 ದಶಲಕ್ಷ ಹಾಗೂ ಯೂಟ್ಯೂಬ್‌ನಲ್ಲಿ 5,91,000 ಅನುಯಾಯಿಗಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladeshದಲ್ಲಿ ಇಸ್ಕಾನ್ ನಿಷೇಧಿಸಬೇಕು: ಹೈಕೋರ್ಟ್ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!
Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ: ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ
Bangladesh: ಚಿನ್ಮಯ್ ಕೃಷ್ಣದಾಸ್ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Hard Disk: ಬಿಟ್ಕಾಯಿನ್ ಇದ್ದ ಹಾರ್ಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್ ಬ್ಯಾಟರ್
Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ
Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ
ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ
UV Fusion: ಶ್ರೇಷ್ಠನಾಗುವುದಕ್ಕಿಂತ ಉತ್ತಮನಾಗುವುದೇ ಲೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.