ಎಚ್‌ಸಿಕ್ಯೂ ಬಳಸುವ ಟ್ರಂಪ್; ವೈರಸ್ ತಡೆಗೆ ಈ ಕ್ರಮ: ಅಮೆರಿಕ ಅಧ್ಯಕ್ಷ
ಶ್ವೇತಭವನ ವೈದ್ಯರ ಶಿಫಾರಸು ಇಲ್ಲ?
Team Udayavani, May 20, 2020, 12:03 PM IST
ನ್ಯೂಯಾರ್ಕ್‌ನ ಬ್ರೂಕ್ಲಿನ್ಸ್ ಡೊಮಿನೋ ಪಾರ್ಕ್‌ನಲ್ಲಿ ಸಾರ್ವಜನಿಕರು ಅಂತರ ಇರಿಸಿಕೊಂಡು ವಿಶ್ರಾಂತಿ ಪಡೆಯುತ್ತಿರುವುದು.
ವಾಷಿಂಗ್ಟನ್/ಹೊಸದಿಲ್ಲಿ/ಜಿನೇವಾ: ಕೋವಿಡ್ ಪರೀಕ್ಷೆಗೆ ಒಳಗಾಗಿ ನೆಗೆಟಿವ್ ಫಲಿತಾಂಶ ಬಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಮಲೇರಿಯಾ ನಿಯಂತ್ರಕ ಮಾತ್ರೆ ಹೈಡ್ರೋಕ್ಲೋರೋಕ್ವಿನ್ (ಎಚ್‌ಸಿಕ್ಯೂ) ತೆಗೆದುಕೊಳ್ಳುತ್ತಿದ್ದಾರಂತೆ. ಹೀಗೆಂದು ಅವರೇ ಸ್ವತಃ ಮಾಹಿತಿ ನೀಡಿದ್ದಾರೆ. ಮುಂಜಾಗರೂಕತಾ ಕ್ರಮವಾಗಿ ವೈದ್ಯರ ಸಲಹೆ ಪಡೆದುಕೊಂಡೇ ಮಾತ್ರೆ ತೆಗೆದುಕೊಳ್ಳುತ್ತಿರುವುದಾಗಿ ವಿವರಣೆ ನೀಡಿದ್ದಾರೆ. “ಒಂದು ವಾರದಿಂದ ಹಿಂದಿನಿಂದಲೇ ನಾನು ಹೈಡ್ರೋಕ್ಲೋರೋಕ್ವಿನ್ ತೆಗೆದುಕೊಳ್ಳಲು ಆರಂಭಿಸಿದ್ದೆ. ಅದರ ಧನಾತ್ಮಕ ಪರಿಣಾಮಗಳ ಬಗ್ಗೆ ಹಲವಾರು ಫೋನ್ ಕರೆಗಳು ಬಂದಿದ್ದವು’ ಎಂದು ಅವರು ಹೇಳಿಕೊಂಡಿದ್ದಾರೆ.
ಭಾರತದಿಂದ ಅಮೆರಿಕಕ್ಕೆ ಭಾರೀ ಪ್ರಮಾಣದಲ್ಲಿ ಮಲೇರಿಯಾ ನಿಯಂತ್ರಣ ಮಾತ್ರೆಗಳನ್ನು ರಫ್ತು ಮಾಡಲಾಗಿತ್ತು. ಜತೆಗೆ ಅವುಗಳನ್ನು ಅಮೆರಿಕದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಬಳಕೆ ಮಾಡಲಾಗುತ್ತಿದೆ. ಶ್ವೇತಭವನದ ವೈದ್ಯರ ಜತೆಗೆ ವಿಶೇಷವಾಗಿ ಚರ್ಚೆ ನಡೆಸಿಲ್ಲ ಎಂದು ಹೇಳಿರುವ ಅವರು, ಇತರ ವೈದ್ಯರ ಸಲಹೆ ಮೇರೆಗೆ ಅದನ್ನು ತೆಗೆದುಕೊಳ್ಳುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಜಗತ್ತಿನ ಹಲವು ರಾಷ್ಟ್ರಗಳ ಆರೋಗ್ಯ ಕ್ಷೇತ್ರದ ಪರಿಣತರು ಈಗಾಗಲೇ ಎಚ್ಚರಿಕೆ ನೀಡಿರುವ ಪ್ರಕಾರ ಹೈಡ್ರೋಕ್ಲೋರೋಕ್ವಿನ್ ಮಾತ್ರೆ ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿದೆ ಎಂಬುದಕ್ಕೆ ಖಾತರಿ ಇಲ್ಲ. ಅದರಿಂದಾಗಿ ಹೃದಯ ಸಂಬಂಧಿ ಸೇರಿದಂತೆ ಹಲವು ಪ್ರತಿಕೂಲ ಪರಿಣಾಮ ಗಳ ಬಗ್ಗೆ ಕೂಡ ಎಚ್ಚರಿಕೆಯನ್ನು ಈಗಾಗಲೇ ನೀಡಿದ್ದಾರೆ.
ಶೀಘ್ರ ಲಸಿಕೆ: ಕೋವಿಡ್ ಗೆ ಶೀಘ್ರವೇ ಲಸಿಕೆ ಕಂಡು ಹಿಡಿಯಬೇಕು ಎಂಬುದು ತಮ್ಮ ಇಚ್ಛೆ. ಅದು ಶೀಘ್ರವೇ ಈಡೇರಲಿದೆ ಎಂಬ ಭರವಸೆ ಇದೆ ಎಂದು ಹೇಳಲು ಟ್ರಂಪ್ ಮರೆಯಲಿಲ್ಲ.
ಡಬ್ಲ್ಯೂಎಚ್‌ಒಗೆ ಪತ್ರ: ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಅಧ್ಯಕ್ಷ ಟ್ರಂಪ್ ಮತ್ತೆ ಮುಗಿಬಿದ್ದಿದ್ದಾರೆ. ಜಗತ್ತಿನ ಆರೋಗ್ಯ ಕ್ಷೇತ್ರದ ಮೇಲೆ ನಿಗಾ ವಹಿಸುವ ಸಂಸ್ಥೆ ಚೀನದ ಆಣತಿಗೆ ಅನುಗುಣವಾಗಿ ಕೆಲಸ ಮಾಡುತ್ತಿಲ್ಲ ಎಂಬ ವಿಚಾರ ಸಿದ್ಧಪಡಿಸುವಂತೆ ಸವಾಲು ಹಾಕಿದ್ದಾರೆ. ಈ ಬಗ್ಗೆ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರಿಗೆ ಪತ್ರ ಬರೆದಿರುವ ಟ್ರಂಪ್, “ಸಾಂಕ್ರಾಮಿಕ ರೋಗಕ್ಕೆ ಸ್ಪಂದಿಸುವಲ್ಲಿ ನೀವು ಮತ್ತು ನಿಮ್ಮ ನೇತೃತ್ವದ ಸಂಸ್ಥೆ ಮಾಡಿದ ಪುನರಾವರ್ತಿತ ತಪ್ಪುಗಳು ಇಡೀ ಜಗತ್ತಿಗೆ ಅತ್ಯಂತ ದುಬಾರಿಯಾಗಿ ಪರಿಣಮಿಸಿವೆ. ಮುಂದಿನ ಮೂವತ್ತು ದಿನಗಳ ಒಳಗಾಗಿ ಚೀನ ನಿಯಂತ್ರಣದಲ್ಲಿ ನೀವು (ಡಬ್ಲ್ಯೂಎಚ್‌ಒ) ಕೆಲಸ ಮಾಡುತ್ತಿಲ್ಲ ಎಂಬ ವಿಚಾರ ಸಾಬೀತು ಮಾಡಿ’ ಎಂದು ಸವಾಲು ಹಾಕಿದ್ದಾರೆ.
ಈಗಾಗಲೇ ಹಲವಾರು ಬಾರಿ ಇದೇ ಮಾದರಿಯ ಎಚ್ಚರಿಕೆಯನ್ನು ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ಡಬ್ಲ್ಯೂಎಚ್‌ಒ ಸದಸ್ಯತ್ವದಿಂದ ಹೊರಬರುವ ಬಗ್ಗೆಯೂ ಮಾತುಗಳನ್ನಾಡಿದ್ದಾರೆ. ತಮ್ಮ ನೇತೃತ್ವದ ಸರಕಾರ ಈಗಾಗಲೇ ಸಂಸ್ಥೆಯನ್ನು ಹೇಗೆ ಪುನರ್‌ರಚಿಸಬೇಕು ಎಂಬ ಬಗ್ಗೆ ಚರ್ಚೆಗಳನ್ನು ಆರಂಭಿಸಿದೆ ಎಂದು ನಾಲ್ಕು ಪುಟಗಳ ಪತ್ರದಲ್ಲಿ ಪ್ರಸ್ತಾಪ ಮಾಡಿದ್ದಾರೆ.
ಅನುದಾನ ಕಡಿತ: ಮತ್ತೆ ಅನುದಾನದ ಕಡಿತದ ಬಗ್ಗೆ ಮಾತನಾಡಿರುವ ಅಮೆರಿಕ ಅಧ್ಯಕ್ಷರು, ತಮ್ಮ ದೇಶ ವಾರ್ಷಿಕ 450 ಮಿಲಿಯನ್ ಡಾಲರ್ ಅನುದಾನ ನೀಡುತ್ತಿದೆ. ಚೀನ ನೀಡುತ್ತಿರುವ ಅನುದಾನ ಕೇವಲ 38 ಮಿಲಿಯನ್ ಡಾಲರ್. ಅಮೆರಿಕ ನೀಡುತ್ತಿರುವ ಅನುದಾನ ವಿಶ್ವದ ಯಾವುದೇ ರಾಷ್ಟ್ರ ನೀಡುವುದಕ್ಕಿಂತ ಅಧಿಕ. ಆದರೆ, ಸಂಸ್ಥೆ ನಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಹಾಗಾಗಿ, ಶಾಶ್ವತವಾಗಿ ಅನುದಾನ ಕಡಿತಗೊಳಿಸಲು ಯೋಚಿಸಲಾಗುವುದು ಎಂದು ಡೊನಾಲ್ಡ್ ಟ್ರಂಪ್ ಖಾರವಾಗಿ ನುಡಿದಿದ್ದಾರೆ.
ಸ್ವತಂತ್ರ ತನಿಖೆಗೆ ನಿರ್ಣಯ ಅಂಗೀಕಾರ
ಕೋವಿಡ್ ಉಗಮದ ಬಗ್ಗೆ ಸ್ವತಂತ್ರ ತನಿಖೆಯಾಗ ಬೇಕು ಎಂಬ ಅಂಶದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಸಮ್ಮೇಳನದಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗಿರುವ ಎರಡು ದಿನಗಳ ಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ ನಿರ್ಣಯವೊಂದಕ್ಕೆ ಸಹಮತ ದಿಂದ ಅಂಗೀಕಾರ ವ್ಯಕ್ತಪಡಿಸಲಾಗಿದೆ. ವೈರಸ್ ವಿರುದ್ಧ ಡಬ್ಲ್ಯೂಎಚ್‌ಒ ಕೈಗೊಂಡ ಕ್ರಮಗಳ ಬಗ್ಗೆಯೂ ತನಿಖೆಯ ವ್ಯಾಪ್ತಿ ಇರಬೇಕು ಎಂಬ ಬಗ್ಗೆಯೂ ಒಪ್ಪಿಕೊಳ್ಳಲಾಗಿದೆ. ಅಮೆರಿಕ ಕೂಡ ಈ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದೆ.
ಶೀಘ್ರ 50 ವೆಂಟಿಲೇಟರ್ ಭಾರತಕ್ಕೆ
ಕೋವಿಡ್ ದಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದರೂ ಅಮೆರಿಕ ತನ್ನ ದೊಡ್ಡತನ ಮೆರೆದಿದೆ. ಅಮೆರಿಕವು ಭಾರತಕ್ಕೆ ಕೊಡುಗೆಯಾಗಿ ಮೊದಲ ಕಂತಿನಲ್ಲಿ 50 ವೆಂಟಿಲೇಟರ್‌ಗಳನ್ನು ರವಾನಿಸುತ್ತಿದೆ. “ಅಮೆರಿಕ ಅಧ್ಯಕ್ಷ ಟ್ರಂಪ್ ಇತ್ತೀಚೆಗಷ್ಟೇ 200 ವೆಂಟಿಲೇಟರ್‌ಗಳನ್ನು ಭಾರತಕ್ಕೆ ನೀಡಲು ನಿರ್ಧರಿಸಿದ್ದರು. ಇದಕ್ಕೆ ಅಮೆರಿಕ ಸೂಕ್ತ ದರ ನಿಗದಿ ಮಾಡಲಿದೆ ಎಂದೇ ನಂಬಲಾಗಿತ್ತು. ಆದರೆ, ಈ ವೆಂಟಿಲೇಟರ್‌ಗಳು ಸಂಪೂರ್ಣವಾಗಿ ಕೊಡುಗೆ ರೂಪದಲ್ಲಿ ಇರಲಿವೆ ಎಂದು ಅಮೆರಿಕನ್ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಕಂತಿನಲ್ಲಿ 50 ವೆಂಟಿ ಲೇಟ ರ್‌ಗಳು ಭಾರತವನ್ನು ಶೀಘ್ರವೇ ತಲುಪಲಿವೆ’ ಎಂದು ಯುಎಸ್‌ಎಐಡಿಯ ನಿರ್ದೇಶಕ ರಮೋನಾ ಎಲ್ ಹಮಾಯಿ ಹೇಳಿದ್ದಾರೆ. ಕೋವಿಡ್ ದ ಬಿಕ್ಕಟ್ಟಿನ ನಡುವೆಯೂ ತನ್ನ ಮಿತ್ರ ರಾಷ್ಟ್ರಗಳಿಗೆ ನೆರವಾಗುವುದು ಅಮೆರಿಕಕ್ಕೆ ಅನಿವಾರ್ಯವಾಗಿದೆ.
ಕೋವಿಡ್ ಪರಿಸ್ಥಿತಿಯನ್ನು ಅಧ್ಯಕ್ಷ ಟ್ರಂಪ್ ಸರಿಯಾಗಿ ನಿಭಾಯಿಸಲಿಲ್ಲ. ಹೀಗಾಗಿ ಅವರ ತಪ್ಪುಗಳನ್ನು ನಮ್ಮ ಮೇಲೆ ಹಾಕುವ ನಿಟ್ಟಿನಲ್ಲಿ ನಮ್ಮನ್ನು ಆಕ್ಷೇಪಿಸುತ್ತಿದ್ದಾರೆ.
ಝಾಹೋ ಲಿಜಾನ್, ಚೀನಾ ವಿದೇಶಾಂಗ ಇಲಾಖೆ ವಕ್ತಾರ
ಅಮೆರಿಕ ಅಧ್ಯಕ್ಷರು ನಮಗೆ ಬರೆದ ಪತ್ರದ ಬಗ್ಗೆ ಕೂಡಲೇ ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ವಾರ್ಷಿಕ ಸಮ್ಮೇಳನದಲ್ಲಿ ಬ್ಯುಸಿಯಾಗಿದ್ದೇವೆ.
ಫಡೇಲಾ ಚೈಬ್, ಡಬ್ಲ್ಯೂಎಚ್‌ಒ ವಕ್ತಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.